IPL 2026: ಹರಾಜಿನಲ್ಲಿ RCB ಹಣ ಖರ್ಚು ಮಾಡಿದ್ದು ಎಷ್ಟು? ಹೇಗಿದೆ ತಂಡ?
ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಮುಗಿದಿದೆ. ಅಬುಧಾಬಿಯಲ್ಲಿ ನಡೆದ ಐಪಿಎಲ್ 2026ರ ಹರಾಜಿನಲ್ಲಿ ಆರ್‌ಸಿಬಿ ತನ್ನ 8 ಸ್ಥಾನಗಳನ್ನು ತುಂಬಿಕೊಂಡಿದೆ. ಇದರಲ್ಲಿ ಇಬ್ಬರು ವಿದೇಶಿ ಆಟಗಾರರು ಹಾಗೂ ಆರು ದೇಶಿ ಆಟಗಾರರು ಸೇರಿದ್ದಾರೆ. ಆರ್‌ಸಿಬಿ ಹರಾಜಿನಲ್ಲಿ ಖರೀದಿಸಿದ ಆಟಗಾರರು ಯಾರು? ಅವರಿಗೆ ನೀಡಿದ ಹಣ ಎಷ್ಟು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಆರ್‌ಸಿಬಿ ಈ ಬಾರಿಯ ಹರಾಜಿನಲ್ಲಿ 16.40 ಕೋಟಿ ರೂ.ಗಳೊಂದಿಗೆ ಇಳಿದಿತ್ತು. ಈ ವೇಳೆ 8 ಆಟಗಾರರನ್ನು ಖರೀದಿಸುವ ಅವಕಾಶ ಆರ್‌ಸಿಬಿ ತಂಡಕ್ಕಿತ್ತು. ಈ ವೇಳೆ ಆರ್‌ಸಿಬಿ ತನ್ನ ಎಲ್ಲ ಸ್ಥಾನಗಳನ್ನು ತುಂಬಿಕೊಂಡಿದೆ. ಆರ್‌ಸಿಬಿ ಹರಾಜಿನಲ್ಲಿ ಭಾರತೀಯ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರಿಗೆ ಭಾರೀ ಹಣವನ್ನು ನೀಡಿದೆ. ಇವರನ್ನು ಕಳೆದ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಕೊಳ್ಳುವಲ್ಲಿ ವಿಫಲವಾಗತ್ತು. ಆದರೆ ಈ ಬಾರಿ ಪಕ್ಕಾ ಪ್ಲ್ಯಾನ್‌ನಿಂದ ಹರಾಜು ಆರಂಭಿಸಿದ ಆರ್‌ಸಿಬಿ, ಅನುಭವಿ ವೆಂಕಟೇಶ್ ಅಯ್ಯರ್ ಅವರಿಗೆ 7 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿಯ ದುಬಾರಿ ಖರೀದಿ ಇವರೇ ಆಗಿದ್ದಾರೆ.

ಆರ್‌ಸಿಬಿ ಈ ಬಾರಿಯ ಹರಾಜಿನಲ್ಲಿ ಯುವ ಆಟಗಾರರಿಗೂ ಮಣೆ ಹಾಕಿದೆ. ಮಧ್ಯಪ್ರದೇಶದ 23 ವರ್ಷದ ಮಂಗೇಶ್ ಯಾದವ್ ಅವರ ಮೇಲೆ ಭರವಸೆ ವ್ಯಕ್ತ ಪಡಿಸಿದ ಬೆಂಗಳೂರು ಭಾರೀ ಮೊತ್ತವನ್ನು ನೀಡಿದೆ. ಇವರು ದೇಶೀಯ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಇವರ ಮೂಲ ಬೆಲೆ ₹30 ಲಕ್ಷ ರೂ. ಆಗಿತ್ತು. ಆರ್‌ಸಿಬಿ ಇವರಿಗೆ ₹5.20 ಕೋಟಿ ನೀಡಿದೆ. ಇವರು ಎಡಗೈ ವೇಗದ ಬೌಲರ್ ಹಾಗೂ ಬಲಗೈ ಬ್ಯಾಟರ್ ಆಗಿದ್ದಾರೆ. ಇವರು ಯಾರ್ಕರ್, ಸ್ಲೋವರ್ ಒನ್‌ಗಳಿಂದ ಎದರಾಳಿ ಬ್ಯಾಟರ್‌ಗಳಿಗೆ ಕಾಟ ನೀಡಬಲ್ಲರು.
ದೇಶೀಯ ಆಟಗಾರರಿಗೂ ಮಣೆ
ಆರ್‌ಸಿಬಿ ಜೋಶ್ ಹ್ಯಾಜಲ್‌ವುಡ್ ಅವರಿಗೆ ಬ್ಯಾಕ್ ಅಪ್ ಆಗಿ ಜಾಕೋಬ್ ಡಫಿ ಅವರನ್ನು ಸೇರಿಸಿಕೊಂಡಿದೆ. ಇವರು ನ್ಯೂಜಿಲೆಂಡ್ ತಂಡದ ಪರ ಈಗಾಗಲೇ ಆಡಿ ಗಮನ ಸೆಳೆದಿದ್ದಾರೆ. ಇವರಿಗೆ ಆರ್‌ಸಿಬಿ ಮೂಲ ಬೆಲೆ (₹2 ಕೋಟಿ) ನೀಡಿ ತಂಡಕ್ಕೆ ಸೇರಿಸಿಕೊಡಿದೆ. ಇಂಗ್ಲೆಂಡ್‌ನ 25 ವರ್ಷದ ಜೋರ್ಡಾನ್ ಕಾಕ್ಸ್‌ಗೂ ಆರ್‌ಸಿಬಿ 2 ಕೋಟಿ ನೀಡಿ ಖರೀದಿಸಿದೆ.
ಅಂಡರ್ 19 ತಂಡದ ಆಟಗಾರ ಕನಿಷ್ಕ್ ಚೌಹಾಣ್ ಅವರಿಗೂ ಆರ್‌ಸಿಬಿ ₹30 ಲಕ್ಷ ನೀಡಿ ಖರೀದಿಸಿದೆ. ಉಳಿದಂತೆ ವಿಹಾನ್ ಮಲ್ಹೋತ್ರಾ (₹ 30 ಲಕ್ಷ), ವಿಕಿ ಓಸ್ವಾಲ್ (₹ 30 ಲಕ್ಷ), ಸಾತ್ವಿಕ್ ದೇಶ್ವಾಲ್ (₹ 30 ಲಕ್ಷ) ಅವರನ್ನು ಸಹ ಆರ್‌ಸಿಬಿ ಮೂಲ ಬೆಲೆ ನೀಡಿ ಖರೀದಿಸಿದೆ. ಆರ್‌ಸಿಬಿ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈಗ ಈ ಪಟ್ಟವನ್ನು ಉಳಿಸಿಕೊಳ್ಳಲು ಬೇಕಾದ ಆಟಗಾರರನ್ನು ಹರಾಜಿನಲ್ಲಿ ಖರೀದಿ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications