Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026 Auction: ಮಾಜಿ ಆಟಗಾರರನ್ನೇ ಗುರಿಯಾಗಿಸಲಿದೆ RCB

ಇಂಡಿಯನ್ ಪ್ರೀಮಿಯರ್‌ ಲೀಗ್‌ (IPL 2026) ಹರಾಜಿಗೆ ದಿನಗಣನೆ ಆರಂಭವಾಗಿದೆ. ಈ ಹರಾಜಿಗೂ ಮುನ್ನ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡ ಹಾಗೂ ಹರಾಜಿಗೆ ಬಿಟ್ಟ ಆಟಗಾರರ ಪಟ್ಟಿಯನ್ನು ಐಪಿಎಲ್‌ ಆಡಳಿತ ಮಂಡಳಿಗೆ ನೀಡಿವೆ. ಆರ್‌ಸಿಬಿ (RCB) ಸಹ ಈ ಹರಾಜಿಗೆ ಭರ್ಜರಿ ತಯಾರಿ ನಡೆಸಿದೆ. ಆರ್‌ಸಿಬಿ ತಂಡದ ಪರ ಆಡಿ ಈ ಹಿಂದೆ ಸೈ ಎನಿಸಿಕೊಂಡ ಆಟಗಾರರನ್ನೇ ಈ ಬಾರಿಯೂ ಟಾರ್ಗೆಟ್‌ ಮಾಡುವ ಸಾಧ್ಯತೆ ಇದೆ.

ಹಾಲಿ ಚಾಂಪಿಯನ್‌ ಪಟ್ಟದೊಂದಿಗೆ ಆರ್‌ಸಿಬಿ ಅಂಗಳಕ್ಕೆ ಪ್ರವೇಶಿಸಲಿದೆ. ಈ ಬಾರಿ ಆರ್‌ಸಿಬಿ ಹಲವು ಸ್ಟಾರ್‌ ಆಟಗಾರರನ್ನು ಉಳಿಸಿಕೊಂಡಿದೆ. ಇನ್ನು ಖಾಲಿ ಇರುವ 8 ಸ್ಥಾನಗಳಿಗಾಗಿ ಆರ್‌ಸಿಬಿ ಈ ಬಾರಿ ಹರಾಜಿನಲ್ಲಿ ಸ್ಟಾರ್ ಆಟಗಾರರಿಗೆ ಹಣವನ್ನು ಹೂಡಲಿದೆ. ಈ ಬಾರಿ ಆರ್‌ಸಿಬಿ ತಮ್ಮ ತಂಡ ಮೂರು ಆಟಗಾರರಿಗೆ ಹಣವನ್ನು ಹೂಡಲಿದೆ.

IPL 2026 Auction RCB eyes Hasaranga Maxwell and Lomror for a stronger squad

ಆರ್‌ಸಿಬಿ ತಂಡ ಈ ಬಾರಿ ಸ್ಪಿನ್ ಬೌಲರ್‌ಗಳಿಗೆ ಹಣವನ್ನು ಹೂಡಲಿದೆ. ಈ ಬಾರಿ ವಿಶ್ವದ ಶ್ರೇಷ್ಠ ಬೌಲರ್‌ಗಳಿಗೆ ಮಣೆ ಹಾಕುವ ಸಾಧ್ಯತೆ ಇದೆ. ಈ ವೇಳೆ ಆರ್‌ಸಿಬಿ ತಮ್ಮ ತಂಡದಲ್ಲೇ ಇದ್ದ ಸ್ಟಾರ್ ಪ್ಲೇಯರ್‌ಗಳಿಗೆ ರೆಡ್ ಕಾರ್ಪೆಟ್‌ ಹಾಕಲಿದೆ. ರಾಜಸ್ಥಾನ ರಾಯಲ್ಸ್‌ ಹರಾಜಿಗೆ ಕೈ ಬಿಟ್ಟ ವನಿಂದು ಹಸರಂಗ ಅವರನ್ನು ಆರ್‌ಸಿಬಿ ಟಾರ್ಗೆಟ್‌ ಮಾಡಲಿದೆ. ಇವರು ತಮ್ಮ ಆಲ್‌ರೌಂಡರ್‌ ಆಟದಿಂದ ತಂಡಕ್ಕೆ ನೆರವಾಗಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಇವರು ಈಗಾಗಲೇ ಆರ್‌ಸಿಬಿ ತಂಡದ ಪರ ಆಡಿದ್ದಾರೆ.

ವಿಶ್ವದ ಶ್ರೇಷ್ಠ ಸ್ಪಿನ್ ಬೌಲರ್‌ಗಳ ಪಟ್ಟಿಯಲ್ಲಿ ವನಿಂದು ಹಸರಂಗ ಅವರಿಗೂ ಸ್ಥಾನ. ಇವರು ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಇವರು ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಬಲ್ಲರು.

ಐಪಿಎಲ್‌ ಪಂದ್ಯ: 37
ವಿಕೆಟ್‌: 46
ರನ್‌: 81

ಆರ್‌ಸಿಬಿ ಗುರಿಯಾಗಿಸಲಿರುವ ಇನ್ನೊರ್ವ ಸ್ಟಾರ್ ಆಲ್‌ರೌಂಡರ‌ ಪಟ್ಟಿಯಲ್ಲಿ ಗ್ಲೇನ್‌ ಮ್ಯಾಕ್ಸ್‌ವೆಲ್ ಸಹ ಒಬ್ಬರು. ಇವರು ಈಗಾಗಲೇ ಆರ್‌ಸಿಬಿ ತಂಡದ ಪರ ಆಡಿದ್ದಾರೆ. ಇವರನ್ನು ಪಂಜಾಬ್‌ ಕಿಂಗ್ಸ್ ತಂಡ ಇವರನ್ನು ಕೈ ಬಿಟ್ಟಿತ್ತು. ಇವರ ಸದ್ಯ ಫಾರ್ಮ್‌ ಅನ್ನು ಪರಿಗಣಿಸಿದರೆ ಇವರಿಗೆ ಆರ್‌ಸಿಬಿ ಹಣವನ್ನು ಹೂಡಬಹುದಾಗಿದೆ.

ಐಪಿಎಲ್‌ ಪಂದ್ಯ: 141
ವಿಕೆಟ್‌: 2819
ರನ್‌: 41

ಮಹಿಪಾಲ್‌ ಲೊಮ್ರೊರ್‌

ಆರ್‌ಸಿಬಿ ಟಾರ್ಗೆಟ್‌ ಮಾಡಬಹುದಾದ ಆಟಗಾರರ ಪಟ್ಟಿಯಲ್ಲಿ ಮಹಿಪಾಲ್‌ ಲೊಮ್ರೊರ್‌ ಅವರನ್ನು ಗುರಿಯಾಗಿಸಬಹುದು. ಇವರು ಈಗಾಗಲೇ ಆರ್‌ಸಿಬಿ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದರು. ಅಲ್ಲದೆ ಇವರು ಕೈಗೆಟಕುವ ದರದಲ್ಲಿ ಸಿಗುವು ಸಂಭವವಿದೆ. ಇವರು ಮಧ್ಯಮ ಕ್ರಮಾಂಕದಲ್ಲಿ ಸ್ಥಿರ ಬ್ಯಾಟಿಂಗ್ ನಡೆಸುವ ಕ್ಷಮತೆಯನ್ನು ಹೊಂದಿದ್ದಾರೆ. ಹೀಗಾಗಿ ಮಹಿಪಾಲ್‌ ಅವರನ್ನು ಆರ್‌ಸಿಬಿ ಗುರಿಯಾಗಿಸಿ ಹಣ ಹೂಡಬಹುದು.

ಐಪಿಎಲ್‌ ಪಂದ್ಯ: 40
ವಿಕೆಟ್‌: 527
ರನ್‌: 1

Story first published: Wednesday, November 26, 2025, 10:05 [IST]
Other articles published on Nov 26, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+