For Quick Alerts
ALLOW NOTIFICATIONS  
For Daily Alerts
 

IPL 2026 Auction: RCB ಈ ವಿಭಾಗವನ್ನು ಬಲ ಪಡಿಸಲು ತಯಾರಿ

ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಹರಾಜು ಡಿಸೆಂಬರ್‌ 16 ರಂದು ಅಬುಧಾಬಿಯಲ್ಲಿ ನಡೆಯಲಿದೆ. ಈ ವೇಳೆ ಎಲ್ಲ ತಂಡಗಳು ತಮ್ಮ ತಂಡವನ್ನು ಬಲಿಷ್ಠ ಪಡಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿವೆ. ಆರ್‌ಸಿಬಿ ಸಹ ಈ ಹರಾಜಿನಲ್ಲಿ ಸ್ಟಾರ್ ಆಟಗಾರರಿಗೆ ಬಲೆ ಹಾಕಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ತಂತ್ರ ರೂಪಿಸಿಕೊಂಡಿದೆ. ಹಾಗಿದ್ದರೆ ಆರ್‌ಸಿಬಿ ಈ ಬಾರಿಯ ಹರಾಜಿನಲ್ಲಿ ಯಾವೆಲ್ಲಾ ವಿಭಾಗವನ್ನು ಗುರಿಯಾಗಿಸಿಕೊಂಡು ಆಟಗಾರರಿಗೆ ಹಣ ಹೂಡಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಆರ್‌ಸಿಬಿ ತಂಡ 18ನೇ ಆವೃತ್ತಿಯ ಐಪಿಎಲ್‌ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಮೂಲಕ 17 ವರ್ಷಗಳ ಪ್ರಶಸ್ತಿ ಗೆಲುವಿನ ಬರಕ್ಕೆ ಬ್ರೇಕ್ ಹಾಕಿತ್ತು. ಈಗ ಈ ಪ್ರಶಸ್ತಿಯನ್ನು ತನ್ನಲೇ ಉಳಿಸಿಕೊಳ್ಳಲು ಬೇಕಾದ ತಯಾರಿಗಳನ್ನು ಆರ್‌ಸಿಬಿ ಮಾಡಿಕೊಂಡಿದೆ. ಅದರಂತೆ ಆರ್‌ಸಿಬಿ ಹರಾಜಿನಲ್ಲಿ ಈ ವಿಭಾಗದಲ್ಲಿ ಆಟಗಾರರನ್ನು ಟಾರ್ಗೆಟ್‌ ಮಾಡಲಿದೆ ಎಂದು ತಿಳಿದು ಬಂದಿದೆ.

IPL 2026 Auction RCB Targets Anrich Nortje Bishnoi amp amp Bracewell for Title Defence in Abu Dhabi

ವೇಗದ ಬೌಲರ್‌

ದಕ್ಷಿಣ ಆಫ್ರಿಕಾದ ಲುಂಗಿ ಎನ್‌ಗಿಡಿ ಅವರನ್ನು ಆರ್‌ಸಿಬಿ ಕೈ ಬಿಟ್ಟಿದ್ದು, ಇವರ ಬದಲಿಗೆ ಬೇರೆ ಆಟಗಾರರ ಹುಡುಕಾಟವನ್ನು ಆರ್‌ಸಿಬಿ ಮಾಡುತ್ತಿದೆ. ಈ ವೇಳೆ ಆರ್‌ಸಿಬಿ ಕಣ್ಣಲ್ಲಿ ದಕ್ಷಿಣ ಆಫ್ರಿಕಾದ ಆರ್ನಿಚ್‌ ನೋಕಿಯಾ ಇದ್ದಾರೆ. ಇವರು ಸಹ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಬಲ್ಲ ಕ್ಷಮತೆ ಹೊಂದಿದ್ದಾರೆ. ಇವರು ನಿರಂತರವಾಗಿ ಗಂಟೆಗೆ 145 ಕಿಲೋ ಮೀಟರ್ ವೇಗದಲ್ಲಿ ದಾಳಿ ನಡೆಸಬಲ್ಲರು. ಇವರು ಬೆಂಗಳೂರಿನ ಪಿಚ್‌ಗಳಲ್ಲಿ ಪರಿಣಾಮಕಾರಿಯಾಗಿ ದಾಳಿ ಸಂಘಟಿಸಬಲ್ಲ ಕ್ಷಮತೆ ಹೊಂದಿದ್ದಾರೆ.

ಆರ್ನಿಚ್‌ ಅವರಂತೆ ಆರ್‌ಸಿಬಿ ಜೆರಾಲ್ಡ್ ಕೋಟ್ಜೀ ಅವರನ್ನು ಸಹ ಹರಾಜಿನಲ್ಲಿ ಗುರಿಯಾಗಿಸಿ ಹಣ ಹೂಡಲಿದೆ. ಇವರು ಜೋಶ್‌ ಹ್ಯಾಜಲ್‌ವುಡ್‌ಗೆ ಬೆಸ್ಟ್‌ ಬ್ಯಾಕ್‌ಅಪ್‌ ಬೌಲರ್ ಆಗಬಹುದು. ಅಲ್ಲದೆ ಇದೇ ಪಟ್ಟಿಯಲ್ಲಿ ಆರ್‌ಸಿಬಿ ಮೊಸ್ತಫಿಜುರ್ ರಹಮಾನ್‌ ಅವರನ್ನು ಗುರಿಯಾಗಿಸಿ ಹಣ ಹೂಡಲಿದೆ.

ಸ್ಪಿನ್ ಬೌಲರ್ಸ್

ಆರ್‌ಸಿಬಿ ಹರಾಜಿನಲ್ಲಿ ದೇಶೀಯ ಹಾಗೂ ವಿದೇಶಿ ಸ್ಪಿನ್ ಬೌಲರ್‌ಗಳ ಮೇಲೆ ಹಣವನ್ನು ಹೂಡಲಿದೆ. ಈ ವೇಳೆ ಲಕ್ನೋ ಸೂಪರ್ ಜೈಂಟ್ಸ್ ಕೈ ಬಿಟ್ಟ ರವಿ ಬಿಷ್ಣೋಯಿ ಅವರು ಸಹ ಸೇರಿದ್ದಾರೆ. ಇವರು ತಮ್ಮ ಲೆಗ್‌ ಸ್ಪಿನ್ ದಾಳಿಯ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲರು. ಇವರಿಗೆ ಹಲವು ಫ್ರಾಂಚೈಸಿಗಳು ಹಣವನ್ನು ಹೂಡಬಹುದು. ಈ ಸಾಲಿನಲ್ಲಿ ಆರ್‌ಸಿಬಿ ಸಹ ಸೇರುತ್ತದೆ. ಅಲ್ಲದೆ ರವಿ ಬಿಷ್ಣೋಯಿ ಮಿಡ್ಲ್‌ ಓವರ್‌ನಲ್ಲಿ ಬಿಗುವಿನ ದಾಳಿ ಸಂಘಟಿಸಬಲ್ಲ ಬೌಲರ್‌. ಅಲ್ಲದೆ ರಾಜಸ್ಥಾನ ರಾಯಲ್ಸ್ ಕೈ ಬಿಟ್ಟ ವನಿಂದು ಹಸರಂಗ ಅವರನ್ನು ಸಹ ಗುರಿಯಾಗಿಸಿ ಬೆಂಗಳೂರು ತಂಡ ಹಣ ಹೂಡಲಿದೆ.

ಆಲ್‌ರೌಂಡರ್ಸ್‌

ಆರ್‌ಸಿಬಿ ಲಿಯಾಮ್‌ ಲಿವಿಂಗ್‌ಸ್ಟೋನ್ ಅವರನ್ನು ಕೈ ಬಿಟ್ಟಿದ್ದರಿಂದ ಇವರ ಸ್ಥಾನವನ್ನು ತುಂಬ ಬಲ್ಲ ಆಟಗಾರನಿಗೆ ಶೋಧ ನಡೆಸಿದೆ. ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಕೈ ಬಿಟ್ಟಿರುವ ಮೈಕೆಲ್ ಬ್ರೇಸ್‌ವೆಲ್ ಅವರನ್ನು ಗುರಿಯಾಗಿಸಿ ಹಣ ಹೂಡಲಿದೆ.

Story first published: Saturday, December 13, 2025, 9:14 [IST]
Other articles published on Dec 13, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+