Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಪ್ಲೇ ಆಫ್‌ಗೂ ಮುನ್ನ ಆರ್‌ಸಿಬಿಗೆ ಗುಡ್‌ ನ್ಯೂಸ್‌

ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್‌ ಅಂತಿಮ ಹಂತಕ್ಕೆ ಬಂದು ನಿಂತಿದೆ. ಈಗ ಎಲ್ಲರ ಲೆಕ್ಕಾಚಾರ ಪ್ಲೇ ಆಫ್‌ ಸ್ಥಾನದ ಮೇಲೆ ನೆಟ್ಟಿವೆ. ಐಪಿಎಲ್‌ ಅಂಕ ಪಟ್ಟಿಯಲ್ಲಿ ಅಗ್ರ 4 ಸ್ಥಾನಗಳನ್ನು ಪಡೆದ ತಂಡಗಳು ಪ್ಲೇ ಆಫ್‌ಗೆ ಪ್ರವೇಶ ಪಡೆಯುತ್ತವೇ. ಈಗಾಗಲೇ 4 ಸ್ಥಾನಗಳಲ್ಲಿ 3 ಸ್ಥಾನಗಳು ಪಕ್ಕಾ ಆಗಿವೆ. ಆರ್‌ಸಿಬಿ, ಗುಜರಾತ್ ಟೈಟಾನ್ಸ್‌, ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಪ್ಲೇ ಆಫ್‌ ಪ್ರವೇಶಿಸಿವೆ. ಇದೇ ವೇಳೆ ಆರ್‌ಸಿಬಿ ತಂಡಕ್ಕೆ ದೊಡ್ಡ ಸುದ್ದಿಯೊಂದು ಸಿಕ್ಕಿದೆ.

ಆರ್‌ಸಿಬಿ ತಂಡ ಪ್ಲೇ ಆಫ್‌ ಪ್ರವೇಶಿಸುವ ಮುನ್ನ ದೊಡ್ಡ ಸುದ್ದಿಯೊಂದು ಬಂದಿದ್ದು, ಈ ಸುದ್ದಿ ನಿಜಕ್ಕೂ ಮ್ಯಾನೇಜ್ಮೆಂಟ್ ಚಿಂತೆಯನ್ನು ದೂರ ಮಾಡಿದೆ. ಗಾಯದಿಂದ ಹೆಚ್ಚು ಕಾಲ ಮೈದಾನದಿಂದ ದೂರ ಉಳಿದಿದ್ದ ಫಿಲ್‌ ಸಾಲ್ಟ್‌ ಮತ್ತೆ ಅಖಾಡಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಇವರು ಏಪ್ರಿಲ್ 18 ರಂದು ಬೆಂಗಳೂರಿನಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಸಾಲ್ಟ್ ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು ಆಡಿದ್ದರು. ಅಲ್ಲಿಂದ ಈ ವರೆಗೆ ಇವರು ಗಾಯದ ಸಮಸ್ಯೆಯಿಂದ ಮೈದಾನದಿಂದ ದೂರ ಉಳಿದಿದ್ದರು. ಪ್ಲೇ ಆಫ್‌ಗೂ ಮುನ್ನ ಇವರು ತಂಡವನ್ನು ಸೇರಲು ಸಿದ್ಧರಾಗಿದ್ದಾರೆ.

IPL 2026

ಇಎಸ್‌ಪಿಎನ್‌ ಕ್ರಿಕ್‌ಇನ್ಫೊ ವರದಿಯ ಪ್ರಕಾರ ಫಿಲ್ ಸಾಲ್ಟ್ ಈ ವಾರದ ಕೊನೆಯಲ್ಲಿ ಭಾರತಕ್ಕೆ ಮರಳುವ ಸಾಧ್ಯತೆ ಇದೆ. ಇವರು ಬೆರಳಿನ ಗಾಯದಿಂದಾಗ ಒಂದು ತಿಂಗಳು ಅಂಗಳದಿಂದ ದೂರ ಉಳಿದಿದ್ದರು. ಬೌಂಡರಿ ಉಳಿಸಲು ಡೈವ್ ಮಾಡುವಾಗ ಅವರು ಗಾಯಕ್ಕೆ ತುತ್ತಾಗಿದ್ದರು. ಆ ಬಳಿಕ ಅವರು ರೆಡ್‌ ಜೆರ್ಸಿಯಲ್ಲಿ ಕಾಣಿಸಿಕೊಂಡಿಲ್ಲ. ಬೆರಳಿನ ಗಾಯ ಹಾಗೂ ಕುಟುಂಬದೊಂದಿಗೆ ಸಮಯ ಕಳೆಯಲು ಕಳೆದ ತಿಂಗಳು ತವರಿಗೆ ತೆರಳಿದ್ದರು.

ಫಿಲ್ ಸಾಲ್ಟ್‌ ಅನುಪಸ್ಥಿತಿಯಲ್ಲಿ ಆರ್‌ಸಿಬಿ ತಂಡದ ಆರಂಭಿಕರಾಗಿ ಜಾಕೊಬ್ ಬೆಥೆಲ್ ಕಣಕ್ಕೆ ಇಳಿದು ತಂಡಕ್ಕೆ ಆಧಾರವಾದರು. ಜಾಕೋಬ್ ಬೆಥೆಲ್ ಅವರು ಏಳು ಇನ್ನಿಂಗ್ಸ್‌ಗಳಲ್ಲಿ 96 ರನ್ ಗಳಿಸಿದ್ದಾರೆ. ಸಾಲ್ಟ್‌ ಇಲ್ಲದೇ ಇರುವುದು ತಂಡಕ್ಕೆ ಪೆಟ್ಟು ಬೀಳಲಿಲ್ಲ. ತಂಡದ ಪ್ರತಿಯೊಬ್ಬ ಸದಸ್ಯರು ತಮ್ಮ ಜವಾಬ್ದಾರಿಯನ್ನು ಅರಿತು ಆಡಿದ್ದಾರೆ. ಆರ್‌ಸಿಬಿ ಲೀಗ್ ಹಂತದ ಕೊನೆಯ ಪಂದ್ಯವನ್ನು ಮೇ 22 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಪರಿಣಾಮ ಆರ್‌ಸಿಬಿ 18 ಅಂಕ ಹಾಗೂ ಭರ್ಜರಿ ರನ್‌ ರೇಟ್‌ ಹೊಂದಿದ್ದು ಅಗ್ರ ಸ್ಥಾನದಲ್ಲಿದೆ. ಈಗಿನ ಸನ್ನಿವೇಶವನ್ನು ನೋಡಿದರೆ, ಮೇ 26 ರಂದು ಧರ್ಮಶಾಲಾದಲ್ಲಿ ಕ್ವಾಲಿಫೈಯರ್ 1 ಅನ್ನು ತಲುಪುವ ಸಾಧ್ಯತೆಯಿದೆ.

IPL 2026

ಫಿಲ್ ಸಾಲ್ಟ್‌ ಸಾಧನೆ

ಸ್ಫೋಟಕ ಬ್ಯಾಟರ್‌ ಫಿಲ್ ಸಾಲ್ಟ್‌ ಆಡಿದ 6 ಪಂದ್ಯಗಳಲ್ಲಿ 202 ರನ್‌ ಕಲೆ ಹಾಕಿದ್ದಾರೆ. ಈ ವೇಳೆ ಇವರ ಸರಾಸರಿ 33 ಆಗಿದೆ. ಎರಡು ಬಾರಿ ಸಾಲ್ಟ್‌ ಬ್ಯಾಟ್‌ನಿಂದ ಅರ್ಧಶತಗಳು ಮೂಡಿಬಂದಿವೆ. ಇದರಲ್ಲಿ 16 ಬೌಂಡರಿ, 11 ಸಿಕ್ಸರ್‌ಗಳು ಸೇರಿವೆ. ಇವರು ಪ್ಲೇ ಆಫ್‌ ಹಂತದಲ್ಲಿ ತಂಡವನ್ನು ಸೇರಿದರೆ ತಂಡದ ಮನೋಬಲ ಹೆಚ್ಚುತ್ತದೆ.

Story first published: Wednesday, May 20, 2026, 17:58 [IST]
Other articles published on May 20, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+