IPL 2026 ಮ್ಯಾಚ್ ಫಿಕ್ಸಿಂಗ್ ತಡೆಗೆ ಬಿಸಿಸಿಐ ಹೊಸ ರೂಲ್ಸ್; ಸ್ಮಾರ್ಟ್ ಗ್ಲಾಸ್‌ಗಳ ಬಳಕೆ ಬ್ಯಾನ್
ಚಂಡೀಗಢ: ಐಪಿಎಲ್ ವೇಳೆ ಭ್ರಷ್ಟಾಚಾರ ಮತ್ತು 'ಮ್ಯಾಚ್ ಫಿಕ್ಸಿಂಗ್' ತಡೆಗಟ್ಟಲು ಬಿಸಿಸಿಐನ ಭ್ರಷ್ಟಾಚಾರ-ವಿರೋಧಿ ಮತ್ತು ಭದ್ರತಾ ಘಟಕ (ಎಸಿಎಸ್‌ಯು) ಹೊಸ ನಿರ್ಬಂಧ ವಿಧಿಸಿದೆ. ಇದೀಗ, ಆಟಗಾರರು ಮತ್ತು ತರಬೇತುದಾರರು ತಂಗುವ ಪ್ರಮುಖ ಪ್ರದೇಶಗಳಲ್ಲಿ 'ಸ್ಮಾರ್ಟ್' ಗ್ಲಾಸ್‌ಗಳ ಬಳಕೆಯನ್ನು ನಿಷೇಧಿಸಲಾಗಿದೆ.
ಕ್ಯಾಮರಾ ಸಹಿತ ಕೂಲಿಂಗ್ ಗ್ಲಾಸ್‌ಗಳು, ಆಡಿಯೋ ರೆಕಾರ್ಡಿಂಗ್ ಸಾಧನಗಳಂತಹ ಆಧುನಿಕ ಸ್ಮಾರ್ಟ್ ಗ್ಲಾಸ್‌ಗಳನ್ನು ಬಳಸುವಂತಿಲ್ಲ. ಇವು ನೇರ ವಿಡಿಯೋ ಪ್ರಸಾರ, ಸಂದೇಶ ರವಾನೆ, ಮತ್ತು ಆಡಿಯೋ-ವಿಡಿಯೋ ಕರೆಗಳ ಸಾಮರ್ಥ್ಯ ಹೊಂದಿದ್ದು, ಮ್ಯಾಚ್ ಫಿಕ್ಸಿಂಗ್‌ಗೆ ಬಳಕೆಯಾಗುವ ಸಾಧ್ಯತೆ ಇದೆ ಎಂದು ಎಸಿಎಸ್‌ಯು ಹೇಳಿದೆ.

ಐಪಿಎಲ್ ನಿಯಮಗಳಂತೆ, ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳ ಪ್ರದೇಶ ಅತಿ ಸುರಕ್ಷಿತವಾದಿದ್ದಾಗಿದೆ. ಈ ವಲಯಕ್ಕೆ ಪ್ರವೇಶಿಸುವಾಗ ಮೊಬೈಲ್ ಫೋನ್, ಸ್ಮಾರ್ಟ್ ವಾಚ್‌ಗಳಂತೆ, ಸ್ಮಾರ್ಟ್ ಗ್ಲಾಸ್‌ಗಳನ್ನೂ ಭದ್ರತಾ ಸಿಬ್ಬಂದಿಗೆ ಒಪ್ಪಿಸುವುದು ಕಡ್ಡಾಯ. ಕಂಪನಿಗಳು ಇವುಗಳನ್ನು ಆಟಗಾರರಿಗೆ ಪ್ರಚಾರ ಮಾಡುತ್ತಿರುವುದನ್ನು ಗಮನಿಸಿ ಈ ಆದೇಶ ನೀಡಲಾಗಿದೆ.
ಬಿಸಿಸಿಐ ಹೇಳಿದ್ದಿಷ್ಟು?
ಹೋಟೆಲ್ ಲಾಬಿ, ಕೆಫೆ ಮತ್ತು ಆಟಗಾರರು ತಂಗುವ ಪ್ರದೇಶಗಳ ಸಮೀಪ ಅಪರಿಚಿತರ ಪ್ರವೇಶ ತಪ್ಪಿಸಲು ಸೂಚಿಸಲಾಗಿದೆ. ನೆಟ್ ಬೌಲರ್‌ಗಳು, ಸಾರಿಗೆ ಹಾಗೂ ಇತರ ತಾತ್ಕಾಲಿಕ ಸಿಬ್ಬಂದಿ ಯಾವುದೇ ಸಂವಹನ ಸಾಧನವನ್ನು ಅನಧಿಕೃತ ಸ್ಥಳಕ್ಕೆ ಒಯ್ಯುವಂತಿಲ್ಲ. ಅವರು ನಿಗದಿತ ಕಾರ್ಯವಿಧಾನಗಳನ್ನು ಮಾತ್ರ ಪಾಲಿಸಬೇಕು.

2013ರ ಐಪಿಎಲ್ ಬೆಟ್ಟಿಂಗ್ ವಿವಾದದ ನಂತರ, ಬಿಸಿಸಿಐ ಆಟಗಾರರ ಮೇಲೆ ಕಠಿಣ ನಿಗಾ ವಹಿಸಿತ್ತಿದೆ. ಅದರ ಮುಂದುವರಿದ ಭಾಗವಾಗಿ, 2026ರ ಐಪಿಎಲ್‌ನಲ್ಲಿ ಈ ಹೊಸ ನಿಷೇಧ ಜಾರಿಯಾಗಿದೆ. ಅಪರಿಚಿತರಿಂದ ಉಡುಗೊರೆ ಸ್ವೀಕರಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಿಲ್ಲದವರೊಂದಿಗೆ ಮಾತನಾಡುವುದನ್ನು ಆಟಗಾರರು ತಪ್ಪಿಸಬೇಕು. ಅಕ್ರಮ ತಡೆಗೆ ಕ್ರೀಡಾಂಗಣ ಮತ್ತು ಹೋಟೆಲ್‌ಗಳಲ್ಲಿ ಕಣ್ಗಾವಲು ಬಲಪಡಿಸಲಾಗಿದೆ ಎಂದು ತಿಳಿದು ಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications