For Quick Alerts
ALLOW NOTIFICATIONS  
For Daily Alerts
 

IPL 2026: ಮಾರ್ಚ್‌ 28 ರಿಂದ ಐಪಿಎಲ್‌ ಆರಂಭ: ಬೆಂಗಳೂರಿನಲ್ಲಿ ಫೈನಲ್ ಸಾಧ್ಯತೆ

ಟಿ20 ವಿಶ್ವಕಪ್‌ನ್ನು ಭಾರತ ಗೆದ್ದು ಇತಿಹಾಸ ನಿರ್ಮಿಸಿದೆ. ಈಗ ಟೀಮ್ ಇಂಡಿಯಾದ ಅಭಿಮಾನಿಗಳ ಚಿತ್ತ ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೆ ನೆಟ್ಟಿರಲಿದೆ. ಈ ಟೂರ್ನಿ ಯಾವಾಗ ಆರಂಭವಾಗುತ್ತದೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ಕಳೆದ ಬಾರಿಯ ಫೈನಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಪಂಜಾಬ್‌ ಕಿಂಗ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಹೀಗಾಗಿ ಈ ಬಾರಿ ಈ ತಂಡದ ಮೇಲೆ ಅಭಿಮಾನಿಗಳ ಚಿತ್ತ ನೆಟ್ಟಿರಲಿದೆ. ಈ ಬಾರಿಯ ಐಪಿಎಲ್‌ ಟೂರ್ನಿ ಯಾವಾಗ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಆದರೆ ಸಂಪೂರ್ಣ ವೇಳಾಪಟ್ಟಿ ಮಾತ್ರ ಇನ್ನು ಬಿಡುಗಡೆಯಾಗಿಲ್ಲ.

ಐಪಿಎಲ್‌ ನೇರ ಪ್ರಸಾರದ ಹಕ್ಕುಗಳನ್ನು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ಟೂರ್ನಿ ಮಾರ್ಚ್ 28 ರಂದು ನಡೆಯುವುದಾಗಿ ಕನ್ಫರ್ಮ್ ಮಾಡಿದ್ದಾರೆ. ಇನ್ನು ಈ ಟೂರ್ನಿಯ ಕಂಪ್ಲೀಟ್‌ ವೇಳಾಪಟ್ಟಿ ಇನ್ನೇನು ಹೊರ ಬೀಳಲಿದೆ. ಅಭಿಮಾನಿಗಳು ಈ ವೇಳಾಪಟ್ಟಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

IPL 2026

ಭಾರತೀಯ ಕ್ರಿಕೆಟ್‌ ನಿಯಂತ್ರಣಾ ಮಂಡಳಿ (ಬಿಸಿಸಿಐ) ಐಪಿಎಲ್‌ ವೇಳಾ ಪಟ್ಟಿಯನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲಿದೆ. ಅಧಿಕಾರಿಗಳು ಪಶ್ಚಿಮ ಬಂಗಾಳ ಚುನಾವಣೆಯ ದಿನಾಂಕಗಳಿಗೆ ಕಾಯುತ್ತಿದ್ದಾರೆ. ಈಗ ಬರುತ್ತಿರುವ ಮಾಹಿತಿಯಂತೆ ಮೊದಲ 15 ದಿನಗಳ ವೇಳಾಪಟ್ಟಿಯಲ್ಲಿ ಬಿಸಿಸಿಐ ಬಿಡುಗಡೆ ಮಾಡಲಿದೆ. ಚುನಾವಣೆಗಳ ದಿನಾಂಕಗಳು ಹೊರಬಿದ್ದ ಬಳಿಕ ಮತ್ತೊಂದು ವೇಳಾಪಟ್ಟಿ ಬಿಡುಗಡೆ ಆಗಲಿದೆ.

ಬೆಂಗಳೂರಿನಲ್ಲಿ ಫೈನಲ್‌?

ಈಗಾಗಲೇ ಸರ್ಕಾರದಿಂದ ಐಪಿಎಲ್‌ ನಡೆಸಲು ಅನುಮತಿ ಪಡೆದಿರುವ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯವನ್ನು ಆಯೋಜಿಸುವುದಾಗಿ ತಿಳಿದು ಬಂದಿದೆ. ಅಲ್ಲದೆ ಮೇ 31 ರಂದು ಫೈನಲ್‌ ಪಂದ್ಯಕ್ಕೂ ಎಂ ಚಿನ್ನಸ್ವಾಮಿ ಮೈದಾನ ಆತಿಥ್ಯ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಈಗ ಬರುತ್ತಿರುವ ಮಾಹಿತಿಯಂತೆ ಎಲಿಮಿನೇಟರ್ ಪಂದ್ಯವನ್ನು ಅಹಮದಾಬಾದ್‌, ಕ್ವಾಲಿಫೈಯರ್ 2ಕ್ಕೆ ರಾಯ್‌ಪುರ್ ಆತಿಥ್ಯ ವಹಿಸಲಿದೆ.

ಬಿಗ್ ಈವೆಂಟ್‌ಗೆ ಇನ್ನೂ 19 ದಿನಗಳು ಬಾಕಿ ಉಳಿದಿವೆ. ಆದರೆ ಈ ಟೂರ್ನಿಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಐಪಿಎಲ್‌ ಪ್ರಶಸ್ತಿಗಾಗಿ ಒಟ್ಟು 10 ತಂಡಗಳು ಪೈಪೋಟಿ ನಡೆಸಲಿವೆ. ಒಟ್ಟಾರೆ 80 ಲೀಗ್‌ ಪಂದ್ಯಗಳು ನಡೆಯಲಿದ್ದು, ಬಳಿಕ ನಾಲ್ಕು ಪ್ಲೇಆಫ್ ಪಂದ್ಯಗಳು ನಡೆಯುತ್ತವೆ. ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್ ಮತ್ತು ರಾಯ್‌ಪುರ ಸೇರಿದಂತೆ 10 ಪ್ರಮುಖ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.

Story first published: Monday, March 9, 2026, 23:54 [IST]
Other articles published on Mar 9, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+