For Quick Alerts
ALLOW NOTIFICATIONS  
For Daily Alerts
 

ಈ ಮಾರ್ಗಸೂಚಿ ಪಾಲಿಸದರೆ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಐಪಿಎಲ್‌ ಪಂದ್ಯ

ಬೆಂಗಳೂರಿನ ಪ್ರಸಿದ್ಧ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್‌ ಪಂದ್ಯಗಳು ನಡೆಸಲು ಹಲವು ಷರತ್ತುಗಳನ್ನು ವಹಿಸಲಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ಬೆಂಗಳೂರು ಪೊಲೀಸರು 17 ಅಂಶಗಳ ಮಾರ್ಗಸೂಚಿಗಳನ್ನು ನೀಡಿದೆ. ಈ ಮಾರ್ಗಸೂಚಿಗಳನ್ನು ಪಾಲಿಸದಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ಆಯೋಜಿಸಲು ಗ್ರೀನ್‌ ಸಿಗ್ನಲ್‌ ನೀಡಲಾಗಿದೆ.

ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಈ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ. ಬೆಂಗಳೂರು ಪೊಲೀಸ್‌ ಕಮಿಷನರ್‌ ಅವರು ಕಾಲ್ತುಳಿತದಂತಹ ಅಹಿತಹರ ಘಟನೆ ಸಂಬಂವಿಸಿದಂತೆ ತಡೆಯಲು ಕಟ್ಟುನಿಟ್ಟಿನ 17 ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದಾರೆ. ಪೊಲೀಸ್‌ ಇಲಾಖೆ ನೀಡಿದ ಮಾರ್ಗಸೂಚಿಗಳನ್ನು ಅಚ್ಚುಕಟ್ಟಾಗಿ ಕಾರ್ಯರೂಪಕ್ಕೆ ತಂದಲ್ಲಿ, ಬೆಂಗಳೂರಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಪಂದ್ಯಗಳು ನಡೆಯಲು ಅನುಮತಿ ನೀಡಲಾಗುತ್ತದೆ. ಈ ಮಾರ್ಗಸೂಚಿಗಳ ಬಗ್ಗೆ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಅವರ ತಂಡ ಗೃಹ ಸಚಿವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

IPL 2026 Bengaluru Police Issues 17 Strict Safety Guidelines for Matches at Chinnaswamy Stadium

ಕಟ್ಟುನಿಟ್ಟಿನ ಮಾರ್ಗಸೂಚಿಗಳು

33 ಸಾವಿರ ಆಸನಗಳನ್ನು ಹೊಂದಿರುವ ಮೈದಾನದಲ್ಲಿ ಕೆಎಸ್‌ಸಿಎ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಅಲ್ಲದೆ ಪಿಕಪ್‌ ಹಾಗೂ ಡ್ರಾಪ್ ವ್ಯವಸ್ಥೆಯನ್ನು ಸಹ ಅಚ್ಚುಕಟ್ಟಾಗಿ ಮಾಡಬೇಕು.

ಅಭಿಮಾನಿಗಳಿಗೆ ಕ್ಯೂ ನಿಲ್ಲಲು ಸರಿಯಾದ ವ್ಯವಸ್ಥೆ ಮಾಡಬೇಕು. ಪ್ರವೇಶ ದ್ವಾರಗಳು ಫುಟ್‌ಪಾತ್ ಮೇಲೆ ಇದ್ದಿದ್ದರಿಂದ ಸಮಸ್ಯೆ ಆಗುತ್ತಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.

ಕೆಎಸ್‌ಸಿಎ ಮೈದಾನದಲ್ಲಿ ಗೇಟ್‌ಗಳು ಕಿರಿದಾಗಿವೆ. ಈ ಗೇಟ್‌ಗಳನ್ನು ಕನಿಷ್ಠ 6 ಅಡಿ ವಿಸ್ತರಿಸಿದರೆ, ಪಂದ್ಯ ನೋಡಲು ಹೋಗುವ ಹಾಗೂ ಪಂದ್ಯ ನೋಡಿಕೊಂಡು ಹೊರ ಬರುವ ಪ್ರೇಕ್ಷಕರು ಸುಲಭವಾಗುತ್ತದೆ.

ಮಕ್ಕಳು ಹಾಗೂ ಮಹಿಳೆಯರಿಗಾಗಿ ವಿಶೇಷ ಪ್ರವೇಶದ ವ್ಯವಸ್ಥೆ ಮಾಡಬೇಕು.

ಪಂದ್ಯ ನಡೆಯುವ ವೇಳೆ ಮೈದಾನದಲ್ಲಿ ಮಾರಾಟ ಮಾಡುವ ತಿಂಡಿ ತಿನಿಸುಗಳ ಪರಿಶೀಲನೆಗೆ ನಿರ್ದಿಷ್ಠ ಮಾನದಂಡ ನಿಗದಿಪಡಿಸಬೇಕು.

ಮೆಡಿಕಲ್‌ ಎಮರ್ಜೆನ್ಸಿ ತಂಡಗಳನ್ನು ನಿಯೋಜಿಸಿ, ಆಂಬ್ಯುಲೆನ್ಸ್‌ಗೆ ಪ್ರತೇಕ ಮಾರ್ಗ ಮಾಡಬೇಕು.

ಅಗ್ನಿಶಾಮಕ ದಳ, ವಿದ್ಯುತ್ ಇಲಾಖೆಯಿಂದ ಆಡಿಟ್ ಮಾಡಿಸಬೇಕು

2025ರ ಐಪಿಎಲ್‌ ಭದ್ರತಾ ವೆಚ್ಚ 2.04 ಕೋಟಿಗಳನ್ನು ತಕ್ಷಣ ಪಾವತಿಸಬೇಕು

ಐಡಿ ಚೆಕ್ಕಿಂಗ್‌, ಬಾಂಬ್ ನಿಷ್ಕ್ರೀಯ ದಳ, ಮೆಟಲ್‌ ಡಿಟೆಕ್ಟರ್ ಅಳವಡಿಸಬೇಕು. ಅಲ್ಲದೆ ನುರಿತ ಸಿಬ್ಬಂದಿಯನ್ನು ನೇಮಿಸಬೇಕು.

ಆಟಗಾರರಿಗೂ ಪ್ರತೇಕ ಪ್ರವೇಶ ಹಾಗೂ ನಿರ್ಗಮನ ಮಾರ್ಗಗಳನ್ನು ಕಾಯ್ದಿರಿಸಬೇಕು. ಈ ಮಾರ್ಗಸೂಚಿಗಳು ಸೇರಿದಂತೆ ಇನ್ನು ಹಲವು ಮಾರ್ಗಸೂಚಿಗಳನ್ನು ಪೊಲೀಸ್ ಇಲಾಖೆ ನೀಡಿದೆ.

ಪಂದ್ಯ ರದ್ದಾಗಲು ಕಾರಣವೇನು?

18ನೇ ಆವೃತ್ತಿ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಹಳೂರು ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ವೇಳೆ ಆರ್‌ಸಿಬಿ ವಿಕ್ಟರಿ ಪೆರೆಡ್‌ ನಡೆಸಲು ತೀರ್ಮಾನಿಸಲಾಗಿತ್ತು. ಚೊಚ್ಚಲ ಬಾರಿಗೆ ಪ್ರಶಸ್ತಿ ಗೆದ್ದ ಆಟಗಾರರ ಸಾಧಕರನ್ನು ಕಣ್ಣು ತುಂನಿಕೊಳ್ಳಲು ಚಿನ್ನಸ್ವಾಮಿ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು. ಅಲ್ಲದೆ 11 ಜನರು ಸಾವನ್ನಪ್ಪಿದ್ದರು. ಅಲ್ಲದೆ ಹಲವು ಅಭಿಮಾನಿಗಳು ಗಾಯಗೊಂಡಿದ್ದರು. ಆಗಿನಿಂದ ಈ ಮೈದಾನದಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ನಡೆದಿರಲಿಲ್ಲ. ಮಹಿಳಾ ಏಕದಿನ ವಿಶ್ವಕಪ್‌ ಸಹ ಇದೇ ಕಾರಣಕ್ಕೆ ಕೈ ತಪ್ಪಿತ್ತು.

Story first published: Friday, December 19, 2025, 18:41 [IST]
Other articles published on Dec 19, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+