IPL 2026: ಈ ಬಾರಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಬಿಟ್ಟ ತಂಡ ಯಾವುದು? ಆರ್‌ಸಿಬಿ ಸಾಧನೆ ಹೇಗಿದೆ?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರೋಚಕತೆ ಹೆಚ್ಚಿಸುತ್ತಿದೆ. ಈ ವೇಳೆ ಹಲವು ತಂಡಗಳು ಭರ್ಜರಿ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚುತ್ತಿವೆ. ಇನ್ನು ಸ್ಟಾರ್ ಆಟಗಾರರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಅಲ್ಲದೆ ಇನ್ನು ಹಲವು ಸ್ಟಾರ್ ಆಟಗಾರರು ಮೈದಾನದಲ್ಲಿ ಕ್ಲಾಸಿಕ್ ಕ್ಯಾಚ್‌ಗಳನ್ನು ಪಡೆದು ಪಂದ್ಯದ ಗತಿಯನ್ನೇ ಬದಲಿಸಿದೆ. ಇನ್ನು ಹಲವು ಆಟಗಾರರು ಕೈಯಲ್ಲಿದ್ದ ತುಪ್ಪದಂತಹ ಕ್ಯಾಚ್‌ಗಳನ್ನು ಬಿಟ್ಟು ಪಂದ್ಯವನ್ನೇ ಕೈ ಚೆಲ್ಲಿದ್ದಾರೆ. ಈ ಬಾರಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಬಿಟ್ಟ ತಂಡ ಯಾವುದು? ಈ ಪಟ್ಟಿಯಲ್ಲಿ ಆರ್‌ಸಿಬಿಗೆ ಎಷ್ಟನೇ ಸ್ಥಾನ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
19ನೇ ಆವೃತ್ತಿ ಐಪಿಎಲ್‌ನಲ್ಲಿ ಎಲ್ಲ ತಂಡಗಳು ಕ್ಯಾಚ್‌ಗಳನ್ನು ಬಿಡುತ್ತಿವೆ. ಈ ಬಾರಿ, ಪ್ರತಿ 100 ಕ್ಯಾಚ್‌ಗಳಲ್ಲಿ ಸುಮಾರು 20 ಕ್ಯಾಚ್‌ಗಳನ್ನು ಬಿಡಲಾಗುತ್ತಿದೆ. ಇದರ ಪರಿಣಾಮವಾಗಿ ಬ್ಯಾಟ್ಸ್‌ಮನ್‌ಗಳಿಗೆ ನೀಡಲಾಗುವ 'ಜೀವದಾನಗಳು' ಪಂದ್ಯದ ಗತಿಯನ್ನು ಬದಲಾಯಿಸುತ್ತಿವೆ. ಇಲ್ಲಿಯವರೆಗೆ ದಾಖಲಾದ 9 ಶತಕಗಳಲ್ಲಿ, 5 ಶತಕಗಳ ಬಾರಿಸಿದ ಆಟಗಾರರು ಒಮ್ಮೆಯಾದರೂ ಕ್ಯಾಚ್ ಬಿಟ್ಟ ಲಾಭ ಪಡೆದಿದ್ದಾರೆ. ಈ ವರೆಗೆ ಆಡಲಾದ 43 ಪಂದ್ಯಗಳಲ್ಲಿ ಕ್ಯಾಚಿಂಗ್ ಪಡೆದ ಸಾಮರ್ಥ್ಯ ಕೇವಲ 80.25% ರಷ್ಟಿದೆ.

ಕ್ಯಾಚ್‌ಗಳನ್ನು ಕೈಬಿಟ್ಟು ಸೋಲುವ ಮೂಲಕ ತಂಡಗಳು ಭಾರೀ ನಷ್ಟ ಅನುಭವಿಸಿವೆ. 18 ಇನಿಂಗ್ಸ್‌ಗಳಲ್ಲಿ ಬ್ಯಾಟರ್‌ಗಳಿಗೆ ಜೀವದಾನ ನೀಡಲಾಗಿದೆ. ಈ ವೇಳೆ ಬ್ಯಾಟರ್‌ಗಳು 40ಕ್ಕೂ ಹೆಚ್ಚು ರನ್ ಬಾರಿಸಿ ತಂಡಕ್ಕೆ ಆಧಾರವಾಗಿದ್ದಾರೆ. ಅಲ್ಲದೆ ಈ ವೇಳೆ 14 ಬಾರಿ ಕ್ಯಾಚ್ ಬಿಟ್ಟ ತಂಡಗಳು ಸೋತಿವೆ. ಕಳೆದ ಒಂಬತ್ತು ಐಪಿಎಲ್ ಋತುಗಳಲ್ಲಿ ಈ ಅಂಕಿಅಂಶವು ಅತ್ಯಂತ ಕೆಟ್ಟದಾಗಿದೆ. ಕ್ಯಾಚ್ ಬಿಟ್ಟ ನಂತರ ಬ್ಯಾಟ್ಸ್‌ಮನ್‌ಗಳು ಸರಾಸರಿ 17 ರನ್‌ಗಳನ್ನು ಸೇರಿಸುತ್ತಿದ್ದಾರೆ, ಇದು 2018 ರ ನಂತರದ ಅತ್ಯುತ್ತಮ ಪ್ರದರ್ಶನವಾಗಿದೆ. ದೆಹಲಿ ಐದು ಪಂದ್ಯಗಳಲ್ಲಿ ಸೋತಿದ್ದು, ಇದರಲ್ಲಿ ಮೂರು ಸೋಲುಗಳು ಕ್ಯಾಚ್ ಬಿಟ್ಟಿದ್ದರಿಂದಲೇ ಸೋತಿದೆ.
ಕ್ಯಾಚ್ ಬಿಟ್ಟು ಕೈ ಸುಟ್ಟುಕೊಂಡ ಪಂದ್ಯಗಳ ವಿವರ
- ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ವಿರಾಟ್ ಕೊಹ್ಲಿ ಸೊನ್ನೆಯಲ್ಲಿದ್ದಾಗ ವಾಷಿಂಗ್ಟನ್ ಸುಂದರ್ ಕ್ಯಾಚ್ ಬಿಟ್ಟರು. ಈ ಅವಕಾಶವನ್ನು ಬಳಸಿಕೊಂಡ ವಿರಾಟ್ 81 ರನ್ ಸಿಡಿಸಿ ಜಯ ಸಾಧಿಸಿದ್ದಾರೆ.
- ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್ ಕೆಎಲ್ ರಾಹುಲ್ ಅವರ 12 ರನ್‌ಗಳಿಸಿದ್ದಾಗ ಶಶಾಂಕ್ ಸಿಂಗ್ ಕ್ಯಾಚ್ ಕೈ ಬಿಟ್ಟರು. ಇದನ್ನು ಬಳಸಿಕೊಂಡ ರಾಹುಲ್ ಅಜೇಯ 152 ರನ್ ಸಿಡಿಸಿದರು. ಈ ಪಂದ್ಯದಲ್ಲಿ ಡೆಲ್ಲಿ ಸೋತಿತು. ಆದರೆ ರಾಹುಲ್ ಹಲವು ದೊಡ್ಡ ದಾಖಲೆ ಬರೆದರು.
- ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ ಸವಾಲಿನ ಗುರಿಯನ್ನು ಬೆನ್ನಟ್ಟಿದ್ದಾಗ ಆರಂಭಿಕ ಆಟಗಾರ ಪ್ರಭ್‌ಸಿಮ್ರನ್ ಸಿಂಗ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರ ಕ್ಯಾಚ್ ಬಿಟ್ಟು ಪಂದ್ಯವನ್ನೇ ಕೈ ಚೆಲ್ಲಿದವು. ಇದೇ ಪಂದ್ಯದಲ್ಲಿ ಕರುಣ್ ನಾಯರ್ ಎರಡು ಕ್ಯಾಚ್ ಬಿಟ್ಟರು.
- ಏಪ್ರಿಲ್ 25 ರಂದು ನಡೆದ ಎರಡು ಪಂದ್ಯಗಳಲ್ಲಿ ದಾಖಲೆಯ 16 ಕ್ಯಾಚ್‌ಗಳನ್ನು ಕೈಬಿಡಲಾಯಿತು. ಪರಿಣಾಮವಾಗಿ, ಎರಡೂ ಪಂದ್ಯಗಳು ಸೇರಿ ಒಟ್ಟು 986 ರನ್‌ಗಳನ್ನು ಗಳಿಸಿದವು, ಇದು ಐಪಿಎಲ್ ಇತಿಹಾಸದಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ರನ್‌ಗಳಾಗಿವೆ.
ಆರ್‌ಸಿಬಿ ಸಾಧನೆ ಹೇಗಿದೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸ್ಥಿರ ಪ್ರದರ್ಶನ ನೀಡಿದೆ. ಆರ್‌ಸಿಬಿ ತಂಡಕ್ಕೆ ಈ ಆವೃತ್ತಿಯಲ್ಲಿ ಒಟ್ಟು 51 ಕ್ಯಾಚ್ ಹಿಡಿಯುವ ಅವಕಾಶ ಇತ್ತು. ಈ ವೇಳೆ ಆಟಗಾರರು 44 ಕ್ಯಾಚ್‌ಗಳನ್ನು ಯಶಸ್ವಿಯಾಗಿ ಹಿಡಿದಿದ್ದಾರೆ.
ಐಪಿಎಲ್‌ನಲ್ಲಿ ತಂಡಗಳು ಕ್ಯಾಚ್ ಬಿಟ್ಟ ಪಟ್ಟಿ
| ತಂಡ | ಕ್ಯಾಚ್ ಅವಕಾಶಗಳು | ಹಿಡಿದ ಕ್ಯಾಚ್ | ಕ್ಯಾಚಿಂಗ್ ಸಾಮರ್ಥ್ಯ |
|---|---|---|---|
| ಕೋಲ್ಕತ್ತಾ (KKR) | 43 | 38 | 88.37% |
| ಬೆಂಗಳೂರು (RCB) | 51 | 44 | 86.27% |
| ರಾಜಸ್ಥಾನ್ (RR) | 54 | 46 | 85.19% |
| ಲಕ್ನೋ (LSG) | 44 | 36 | 81.82% |
| ಮುಂಬೈ (MI) | 32 | 26 | 81.25% |
| ಗುಜರಾತ್ (GT) | 58 | 46 | 79.31% |
| ಹೈದರಾಬಾದ್ (SRH) | 56 | 44 | 78.57% |
| ಚೆನ್ನೈ (CSK) | 49 | 37 | 75.51% |
| ಪಂಜಾಬ್ (PBKS) | 45 | 32 | 71.11% |
| ಡೆಲ್ಲಿ (DC) | 36 | 25 | 69.44% |
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications