IPL 2026: RCB vs SRH ಪಂದ್ಯದ ಬಗ್ಗೆ ಭವಿಷ್ಯ ನುಡಿದ AI
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕಳೆದ ಆವೃತ್ತಿಯಲ್ಲಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೇ ಮೊದಲ ಬಾರಿಗೆ ಆರ್‌ಸಿಬಿ ಚಾಂಪಿಯನ್ ಪಟ್ಟದೊಂದಿಗೆ ಉದ್ಘಾಟನಾ ಪಂದ್ಯವನ್ನು ಆಡಲಿದೆ. ಮೊದಲ ಪಂದ್ಯ ಮಾರ್ಚ್ 28 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದ ಫಲಿತಾಂಶದ ಬಗ್ಗೆ ಎಐ ಭವಿಷ್ಯ ನುಡಿದಿದೆ.
ಮಾರ್ಚ್ 28 ರಂದು ನಡೆಯಲಿರಿವ ಪಂದ್ಯದ ಬಗ್ಗೆ ಗೂಗಲ್ ಜೆಮಿನಿಯಲ್ಲಿ ಪ್ರಶ್ನೆಯನ್ನು ಕೇಳಿದಾಗ, ಆರ್‌ಸಿಬಿ ಈ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡ ಎಂದು ತಿಳಿಸಿದೆ. ಈ ಅಂಕಿ ಅಂಶದಲ್ಲಿ ಎಸ್‌ಆರ್‌ಎಚ್ ತಂಡ ಸಹ ಹಿಂದೆ ಉಳಿದಿಲ್ಲ. ಗೂಗಲ್ ಜೆಮಿನಿ ಅವರ ಪ್ರಕಾರ ಆರ್‌ಸಿಬಿ ಪಂದ್ಯವನ್ನು ಗೆಲ್ಲುವ ಸಂಭವನೀಯತೆ 55 ರಷ್ಟಿದೆ ಎಂದು ತಿಳಿಸಿದೆ. ಇನ್ನು ಎಸ್‌ಆರ್‌ಎಚ್ ತಂಡಕ್ಕೆ 45 ರಷ್ಟು ಅವಕಾಶ ಇದೆ ಎಂದು ತಿಳಿಸಿದೆ. ಇದೇ ಲೆಕ್ಕಾಚಾರ ಮುಂದುವರೆದಂತೆ ಇದಕ್ಕೆ ಸ್ಪಷ್ಟನೆ ನೀಡಿದೆ.

ಕಳೆದ ವರ್ಷದ ಚಾಂಪಿಯನ್ ಆಗಿರುವುದರಿಂದ ಆರ್‌ಸಿಬಿ ಗೆಲುವಿನ ಸಾಧ್ಯತೆಗಳು ಹೆಚ್ಚು ಎಂದು ತಿಳಿಸಿದೆ. ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಆರ್‌ಸಿಬಿ ಕಣಕ್ಕೆ ಇಳಿಯವುದು ತಂಡದ ಆತ್ಮವಿಶ್ವಾಸ ಹೆಚ್ಚಿದೆ. ಅಲ್ಲದೆ ಬೆಂಗಳೂರಿನ ತವರು ಕ್ರೀಡಾಂಗಣವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಾಗುತ್ತಿದೆ. ಹೀಗಾಗಿ ಅಭಿಮಾನಿಗಳ ಆಟಗಾರರ ಹುಮ್ಮಸ್ಸು ಇಮ್ಮಡಿಯಾಗುತ್ತದೆ.
ಇಶಾನ್ ನಾಯಕ
ಪ್ಯಾಟ್ ಕಮಿನ್ಸ್ ಅವರು ಇನ್ನು ಗಾಯಕ್ಕೆ ತುತ್ತಾಗಿದ್ದು, ಇನ್ನು ಚೇತರಿಸಿಕೊಂಡಿಲ್ಲ. ಹೀಗಾಗಿ ಇವರು ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಆಡುತ್ತಿಲ್ಲ. ಹೀಗಾಗಿ ತಂಡವನ್ನು ಟಾಪ್ ಅರ್ಡರ್ ಬ್ಯಾಟರ್ ಇಶಾನ್ ಕಿಶನ್ ಮುನ್ನಡೆಸಲಿದ್ದಾರೆ. ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಇಶಾನ್ ಕಿಶನ್ ತಂಡವನ್ನು ಮುನ್ನಡೆಸಲಿದ್ದಾರೆ. ಇಶಾನ್ ಕಿಶನ್ ಅವರು ದೇಶೀಯ ಕ್ರಿಕೆಟ್‌ನಲ್ಲಿ ಜಾರ್ಖಂಡ್ ತಂಡವನ್ನು ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮುನ್ನಡೆಸಿದ್ದರು.
ಸನ್ ರೈಸರ್ಸ್ ತಂಡದ ಗೆಲುವಿನ ಸಾಧ್ಯತೆ ಶೇಕಡಾ 45 ರಷ್ಟು ಇರಲು ಕಾರಣ ಅವರ ಆರಂಭಿಕ ಆಟಗಾರರಾದ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಅವರಿಗೆ ಸಲ್ಲುತ್ತದೆ. ಈ ಇಬ್ಬರೂ ಆಟಗಾರರು ಸ್ಫೋಟಕ ಆಟಕ್ಕೆ ಹೆಸರುವಾಸಿಯಾದ ಆಟಗಾರರು, ಒಂದು ವೇಳೆ ಈ ಆಟಗಾರರು ನೆಲಕಚ್ಚಿ ನಿಂತಲ್ಲಿ ಎದುರಾಳಿ ಬೌಲರ್‌ಗಳ ಲಯವನ್ನು ಹಾಳು ಮಾಡುವ ಕ್ಷಮತೆ ಹೊಂದಿದ್ದಾರೆ. ಈ ಬಾರಿ ಯಾರ ಕೈ ಮೇಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications