IPL 2026: ಇವರು ಒಬ್ಬರೇನಾ, ಬೇರೆ ಬೇರೆಯೋ? ಡೆಲ್ಲಿ ಪರ ಕಾಣಿಸಿಕೊಂಡ ಆಟಗಾರರು ಯಾರು?
ಧರ್ಮಶಾಲಾ: 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 55ನೇ ಪಂದ್ಯದಲ್ಲಿ ಆತಿಥೇಯ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಣಕ್ಕೆ ಇಳಿದವು. ಈ ವೇಳೆ ಎಲ್ಲರ ಕಣ್ಣುಗಳು ಆ ಇಬ್ಬರು ಆಟಗಾರರ ಮೇಲೆ ನೆಟ್ಟಿದ್ದವು. ಇಬ್ಬರೂ ಒಂದೇ ರೀತಿ ಕಾಣುತ್ತಿದ್ದರು. ಇದರಲ್ಲಿ ಒಬ್ಬ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಪರ ಒಂದು ಪಂದ್ಯ ಆಡಿದರೆ, ಇನ್ನೊಬ್ಬರು ಪದಾರ್ಪಣೆ ಪಂದ್ಯವನ್ನು ಆಡಿದರು. ಹಾಗಿದ್ದರೆ ಆ ಇಬ್ಬರು ಯಾರು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಲವು ಬದಲಾವಣೆಗಳೊಂದಿಗೆ ಕಣಕ್ಕೆ ಇಳಿಯಿತು. ಈ ವೇಳೆ 22 ವರ್ಷದ ಮಧ್ಯ ಪ್ರದೇಶದ ಮಾಧವ್ ತಿವಾರಿ ಹಾಗೂ 18 ವರ್ಷದ ಸಾಹಿಲ್ ಪರಾಖ್ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿತು. ಇವರಿಬ್ಬರ ಹೆಸರುಗಳು ಕೇಳಿಸಿದಾಗ ಇಬ್ಬರು ಯುವಕರು ಹೆಸರು ಸೇರಿತ್ತು. ಆದರೆ ಈ ಇಬ್ಬರೂ ಪ್ರಿಯಾಂಶ್ ಆರ್ಯ ಔಟ್ ಆದ ಬಳಿಕ ಎಲ್ಲರ ಗಮನ ಸೆಳೆದರು.

ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಪ್ರಿಯಾಂಶ್ ಆರ್ಯ 33 ಎಸೆತಗಳಲ್ಲಿ 2 ಬೌಂಡರಿ, 6 ಸಿಕ್ಸರ್ ಸಹಾಯದಿಂದ 56 ರನ್ ಸಿಡಿಸಿ ಅಬ್ಬರಿಸಿದರು. ಇವರ ಆಟಕ್ಕೆ ಮಾಧವ್ ತಿವಾರಿ ಬ್ರೇಕ್ ಹಾಕಿದರು. ಮಾಧವ್ ತಿವಾರಿ ಅವರ ಎಸೆತವನ್ನು ಡೀಪ್ ಪಾಯಿಂಟ್ ಕ್ಷೇತ್ರದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದರು. ಈ ವೇಳೆ ಸಾಹಿಲ್ ಪರಾಕ್ ಕ್ಯಾಚ್ ಪಡೆದರು. ಡೆಲ್ಲಿ ಪಾಳಯದಲ್ಲಿ ಸಂತಸ ಮನೆ ಮಾಡಿತ್ತು. ಆದರೆ ವೀಕ್ಷಕ ವಿವರಣೆ ಮಾಡುವವರಿಗೆ ಬೌಲ್ ಮಾಡಿದ್ದು ಯಾರು? ಕ್ಯಾಚ್ ಹಿಡಿದಿದ್ದು ಯಾರು? ಎಂಬ ಗೊಂದಲ ಸೃಷ್ಟಿಯಾಯಿತು.
ವೀಕ್ಷಕ ವಿವರಣೆಗಾರರಿಗೆ ಈ ರೀತಿಯ ಗೊಂದಲ ಉಂಟಾಗಲು ಕಾರಣವಾಗಿದ್ದು, ಮಾಧವ್ ತಿವಾರಿ ಹಾಗೂ ಸಾಹಿಲ್ ಪರಾಖ್ ಅವರ ಹೇರ್‌ಸ್ಟೈಲ್. ಇಬ್ಬರೂ ಒಂದೇ ರೀತಿಯ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದರಿಂದ ಕೊಂಚ ಗೊಂದಲವಾಯಿತು.
ಮಾಧವ್ ತಿವಾರಿ ಯಾರು?
ಮಧ್ಯ ಪ್ರದೇಶದ ಮೌಂಗಜಿಯ ಮಾಧವ್ ತಿವಾರಿ ಸೆಪ್ಟಂಬರ್ 28, 2003ರಲ್ಲಿ ಜನಿಸಿದರು. ಇವರಿಗೆ ದೇಶೀಯ ಋತುವಿನಲ್ಲಿ ಅವಕಾಶಗಳು ಸಿಗಲಿಲ್ಲ. ಈ ಬಾರಿಯ ಲೀಗ್‌ನಲ್ಲಿ ಮಾಧವ್ ತಿವಾರಿ ಮೊದಲ ಪಂದ್ಯವನ್ನು ಆಡಿದರು. ಇವರನ್ನು ಡೆಲ್ಲಿ ಕ್ಯಾಪಿಟಲ್ಸ್ 2025ರ ಐಪಿಎಲ್ ಹರಾಜಿನಲ್ಲಿ 40 ಲಕ್ಷ ರೂ. ನೀಡಿ ಖರೀದಿಸಿತ್ತು. ಇವರು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 40 ರನ್ ನೀಡಿ 2 ವಿಕೆಟ್ ಉರುಳಿಸಿದರು.
ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ ಅರ್ಧಶತಕ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡದ ಪರ ಪ್ರಿಯಾಂಶ್ ಆರ್ಯ (56) ಹಾಗೂ ಶ್ರೇಯಸ್ ಅಯ್ಯರ್ (ಅಜೇಯಬ 59) ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಪಂಜಾಬ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 210 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications