For Quick Alerts
ALLOW NOTIFICATIONS  
For Daily Alerts
 

KL Rahul : ಕನ್ನಡಿಗನಿಗಾಗಿ ಬಿಗ್‌ ಆಫರ್‌ ನೀಡಿದ ಮಾಜಿ ಚಾಂಪಿಯನ್‌: ಮೊತ್ತ ಎಷ್ಟು ಗೊತ್ತಾ?

ಟೀಮ್ ಇಂಡಿಯಾ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಭಾರತ ಓವಲ್‌ನಲ್ಲಿ ಐದನೇ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಈ ವೇಳೆ ಸ್ಟಾರ್ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಭಾರತದಲ್ಲಿ ಐಪಿಎಲ್‌ ಫ್ರಾಂಚೈಸಿಗಳು ತಮ್ಮ ತಂಡವನ್ನು ಬಲಿಷ್ಠ ಗೊಳಿಸುವತ್ತ ಚಿತ್ತ ನೆಟ್ಟಿದ್ದಾರೆ. ಇದೇ ವೇಳೆ ಐಪಿಎಲ್‌ನ ಮಾಜಿ ಚಾಂಪಿಯನ್‌ ತಂಡ, ಮತ್ತೊಮ್ಮೆ ಚಾಂಪಿಯನ್‌ ಪಟ್ಟಕ್ಕೇರಲು ಮಾಸ್ಟರ್‌ ಪ್ಲ್ಯಾನ್ ಮಾಡಿದೆ. ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್‌ ದಲ್ಲಿರುವ ಸ್ಟಾರ್ ಕನ್ನಡಿಗನಿಗೆ ಬಿಗ್ ಆಫರ್‌ ನೀಡುವ ಸಾಧ್ಯತೆ ಇದೆ.

ಅಂದಹಾಗೆ ರಾಹುಲ್‌ ಅವರನ್ನು ಆರ್‌ಸಿಬಿಗೆ ಸೇರಿಸಿಕೊಳ್ಳಬೇಕು ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಆದರೆ ಈ ಎಲ್ಲರದ ಮಧ್ಯೆ ರಾಹುಲ್‌ ಮತ್ತೊಂದು ತಂಡಕ್ಕೆ ಹಾರಿ ಹೋಗುವ ಸಾಧ್ಯತೆ ಇದೆ. 18ನೇ ಆವೃತ್ತಿ ಐಪಿಎಲ್‌ ಮುಗಿದ ಕೆಲವೇ ದಿನಗಳಲ್ಲಿ ಟ್ರೇಡ್‌ ವಿಂಡೋ ಓಪನ್ ಆಗಿದೆ. ಇದರ ಲಾಭ ಬಳಸಿಕೊಂಡು ತಮ್ಮ ತಂಡವನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಫ್ರಾಂಚೈಸಿಗಳು ಪ್ರಯತ್ನ ನಡೆಸಿದ್ದಾರೆ. ಹೀಗಾಗಿಯೇ ಐಪಿಎಲ್‌ ಚಾಂಪಿಯನ್ ತಂಡವೊಂದು ಈಗ ಕೆಎಲ್ ರಾಹುಲ್‌ ಅವರನ್ನು ತಮ್ಮ ತಂಡಕ್ಕೆ ಬರ ಮಾಡಿಕೊಳ್ಳಲು ಪ್ಲ್ಯಾನ್ ಮಾಡುತ್ತಿದೆ. ಹೀಗಾಗಿ ಆ ತಂಡ ಕೆಎಲ್ ರಾಹುಲ್ ಅವರಿಗೆ ತಮ್ಮ ತಂಡವನ್ನು ಸೇರಿಕೊಳ್ಳಲು ಬಿಗ್‌ ಆಫರ್ ಸಹ ನೀಡುತ್ತಿದೆ.

IPL 2026 Ex-Champions KKR Eye Karnataka s KL Rahul with Massive 25 Cr Offer

17ನೇ ಆವೃತ್ತಿಯ ಐಪಿಎಲ್‌ ಚಾಂಪಿಯನ್‌ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ತನ್ನ ತಂಡವನ್ನು ಬಲಿಷ್ಠ ಗೊಳಿಸುವ ಇರಾದೆಯನ್ನು ಹೊಂದಿದೆ. ಹೀಗಾಗಿ 18ನೇ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಅಜಿಂಕ್ಯ ರಹಾನೆ ಬದಲಿಗೆ ಬೇರೆ ನಾಯಕನ ಹುಡುಕಾಟದಲ್ಲಿದೆ. ಈಗ ಕೆಕೆಆರ್‌ ಕಣ್ಣುಗಳು ಕೆಎಲ್ ರಾಹುಲ್ ಅವರನ್ನು ಕಾಣುತ್ತಿದ್ದಂತೆ ಅರಳುತ್ತಿವೆ. ಕೆಕೆಆರ್‌ ತಂಡ ಕೆಎಲ್ ರಾಹುಲ್ ಅವರಿಗೆ ಬಿಗ್ ಆಫರ್‌ ನೀಡುತ್ತಿದೆ ಎಂದು ತಿಳಿದು ಬಂದಿದೆ.

ಬಿಗ್‌ ಆಫರ್‌ ಎಷ್ಟು?

ಸೌದಿಯಲ್ಲಿ ನಡೆದ ಐಪಿಎಲ್‌ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಲಕ್ನೋ ಸೂಪರ್‌ ಜೈಂಟ್ಸ್ ತಂಡ ಕೈ ಬಿಟ್ಟಿದ್ದ ಕೆಎಲ್ ರಾಹುಲ್‌ ಅವರಿಗೆ 14 ಕೋಟಿ ನೀಡಿ ಖರೀದಿಸಿತ್ತು. ಆದರೆ ಮುಂದಿನ ಆವೃತ್ತಿಯಲ್ಲಿ ರಾಹುಲ್ ಕೆಕೆಆರ್ ಪರ ಆಡಬಹುದು. ಟೈಮ್ಸ್ ಆಫ್ ಇಂಡಿಯಾ ವರದಿಯಂತೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗೆ ದೊಡ್ಡ ಆಫರ್ ನೀಡಿದೆ. ಮಾಜಿ ಚಾಂಪಿಯನ್‌ ಕೆಕೆಆರ್‌ ತನ್ನ ತಂಡಕ್ಕೆ ಸೇರಿಸಿಕೊಳ್ಳುವ ಕನಸು ಕಾಣುತ್ತಿದೆ.

IPL 2026 Ex-Champions KKR Eye Karnataka s KL Rahul with Massive 25 Cr Offer

ಕೆಕೆಆರ್‌ ತಂಡ ರಾಹುಲ್‌ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು 25 ಕೋಟಿ ರೂ.ಗಳವರೆಗೆ ಖರ್ಚು ಮಾಡಲು ಸಿದ್ಧವಾಗಿದೆ. ಕೆಕೆಆರ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 25 ಕೋಟಿ ರೂ.ಗಳ ದೊಡ್ಡ ಆಫರ್ ನೀಡಿದೆ. ಈ ವ್ಯಾಪರ ಹಣದ ರೂಪದಲ್ಲಿ ನಡೆಯುತ್ತದೋ ಅಥವಾ ಡೆಲ್ಲಿ, ಕೆಕೆಆರ್ ತಂಡದಲ್ಲಿರುವ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳುತ್ತದೋ ಇನ್ನು ತಿಳಿದು ಬಂದಿಲ್ಲ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಈ ಬಗ್ಗೆ ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Story first published: Thursday, July 31, 2025, 17:43 [IST]
Other articles published on Jul 31, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+