IPL 2026:ಕೊನೆಯ ಎಸೆತದವರೆ ರೋಮಾಂಚನ: 2026ರ ಐಪಿಎಲ್‌ನ 3 ಸ್ಮರಣೀಯ ಪಂದ್ಯಗಳು
2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನೇಕ ಮರೆಯಲಾಗದ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಲೀಗ್ ಹಂತದಲ್ಲಿ ಹಲವು ಪಂದ್ಯಗಳು ಕೊನೆಯ ಎಸೆತದವರೆಗೆ ನಡೆದವು. ದಾಖಲೆ ಮುರಿಯುವ ರನ್ ಚೇಸ್‌ಗಳು ಮತ್ತು ಆಟಗಾರರ ಆರ್ಭಟವನ್ನು ಈ ಆವೃತ್ತಿಯಲ್ಲಿ ಅಭಿಮಾನಿಗಳು ಆನಂದಿಸಿದ್ದಾರೆ.
ಟೂರ್ನಿ ಅಂತಿಮ ಘಟ್ಟದತ್ತ ಸಾಗಿದಾಗ, ಕೆಲವು ಪಂದ್ಯಗಳು ನಾಟಕೀಯ ತಿರುವ ಪಡೆದವು. ಧರ್ಮಶಾಲಾದಲ್ಲಿನ ಡೆಲ್ಲಿ ಕ್ಯಾಪಿಟಲ್ಸ್‌ನ ಭರ್ಜರಿ ಚೇಸ್‌ನಿಂದ ಹಿಡಿದು, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ವಿರಾಟ್ ಕೊಹ್ಲಿಯ ಅಮೋಘ ಶತಕ ಅಭಿಮಾನಿಗಳನ್ನು ರಂಜಿಸಿವೆ. 2026ರ ಐಪಿಎಲ್‌ನ ಟಾಪ್ ಮೂರು ರೋಮಾಂಚಕ ಪಂದ್ಯಗಳ ವರದಿ ಇಲ್ಲಿದೆ.

1 ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ (ಪಂದ್ಯ 54)
ರಾಯ್ಪುರದಲ್ಲಿ ಋತುವಿನ ಸ್ಮರಣೀಯ ಪಂದ್ಯಕ್ಕೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಪರ ನಮನ್ ಧೀರ್ 47, ತಿಲಕ್ ವರ್ಮಾ ಅವರ 57 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 166 ರನ್ ಸೇರಿಸಿತು.
ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಆರಂಭ ಕಳಪೆಯಾಗಿತ್ತು ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ ಪವರ್ ಪ್ಲೇನಲ್ಲಿ ಔಟ್ ಆದರು. ನಾಲ್ಕನೇ ವಿಕೆಟ್‌ಗೆ ಜಾಕೊಬ್ ಬೆಥೆಲ್ ಹಾಗೂ ಕೃನಾಲ್ ಪಾಂಡ್ಯ ಜೋಡಿ ಅರ್ಧಶತಕದ ಜೊತೆಯಾಟ ನೀಡಿತು. ಬೆಥೆಲ್ 27 ರನ್ ಸಿಡಿಸಿ ಔಟ್ ಆದರು. ಮಧ್ಯಮ ಕ್ರಮಾಂಕದ ಆಟಗಾರ ಕೃನಾಲ್ ಪಾಂಡ್ಯ ಗಾಯದ ನಡುವೆ 73 ರನ್ ಬಾರಿಸಿ ಮಿಂಚಿದರು. ಆದರೆ ಕೊನೆಯ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಕೊನೆಯ ಎಸೆತದಲ್ಲಿ ಆರ್‌ಸಿಬಿ ಅಗತ್ಯವಿದ್ದ 2 ರನ್ ಕಲೆ ಹಾಕಿ ಅಬ್ಬರಿಸಿತು.
2. ಗುಜರಾತ್ ಟೈಟಾನ್ಸ್ vs ಪಂಜಾಬ್ ಕಿಂಗ್ಸ್ (ಪಂದ್ಯ 46)
ಅಹಮದಾಬಾದ್‌ನಲ್ಲಿ ನಡೆದ ಈ ಆವೃತ್ತಿಯ 46ನೇ ಪಂದ್ಯದಲ್ಲಿ ಗುಜರಾತ್ ಹಾಗೂ ಪಂಜಾಬ್ ತಂಡಗಳು ಕಾದಾಟ ನಡೆಸಿದವು. ಕಿಂಗ್ಸ್ ಮೊದಲು ಬ್ಯಾಟ್ ಮಾಡಿ ಆರಂಭಿಕ ಕುಸಿತದ ನಂತರ, ಸೂರ್ಯಾಂಶ ಶೇಡ್ಡೆ (29 ಎಸೆತಗಳಲ್ಲಿ 57) ಮತ್ತು ಮಾರ್ಕಸ್ ಸ್ಟೋಯಿನಿಸ್ ಅವರ ಕೊಡುಗೆಯಿಂದ 163/9 ಗಳಿಸಿತು. ಈ ಪಂದ್ಯದಲ್ಲಿ ಗುಜರಾತ್ ಪರ ಜೇಸನ್ ಹೋಲ್ಡರ್ ನಾಲ್ಕು ವಿಕೆಟ್ ಪಡೆದರು. ಗುರಿಯನ್ನು ಬೆನ್ನಟ್ಟಿದ ಗುಜರಾತ್ ಪರ ಸಾಯಿ ಸುದರ್ಶನ್ ಅರ್ಧಶತಕ ಬಾರಿಸಿ ಸುಲಭ ಗೆಲುವಿನ ಲೆಕ್ಕಾಚಾರ ಹಾಕುವಂತೆ ಮಾಡಿದರು. ಆದರೆ ಪಂಜಾಬ್ ಬೌಲರ್‌ಗಳ ಬಿಗುವಿನ ದಾಳಿಯ ನೆರವಿನಿಂದ ಟೈಟಾನ್ಸ್ ಈ ಪಂದ್ಯವನ್ನು ಒಂದು ಎಸೆತ ಬಾಕಿ ಇರುವಂತೆ 167/6 ರನ್ ಗಳಿಸಿ ಜಯ ಸಾಧಿಸಿತು.

3. ಡೆಲ್ಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್ (ಪಂದ್ಯ 55)
ಧರ್ಮಶಾಲಾದಲ್ಲಿ ನಡೆದ ಈ ಆವೃತ್ತಿಯ 55ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್, ಪ್ರಿಯಾಂಶ ಆರ್ಯ (33 ಎಸೆತಗಳಲ್ಲಿ 56) ಮತ್ತು ನಾಯಕ ಶ್ರೇಯಸ್ ಅಯ್ಯರ್ (59) ನೆರವಿನಿಂದ 210/5 ಗಳಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ, ಅಕ್ಷರ್ ಪಟೇಲ್ (30 ಎಸೆತಗಳಲ್ಲಿ 56) ಮತ್ತು ಡೇವಿಡ್ ಮಿಲ್ಲರ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಯಿತು. ಮೂರು ವಿಕೆಟ್‌ಗಳಿಂದ ಗೆದ್ದ ಡೆಲ್ಲಿ, ಅತ್ಯಧಿಕ ಯಶಸ್ವಿ ರನ್ ಚೇಸ್ ಮಾಡಿ ಪ್ಲೇಆಫ್ ಭರವಸೆ ಹೆಚ್ಚಿಸಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications