IPL 2026: ಈ ಬಾರಿಯ ಹರಾಜಿನ ಟಾಪ್ 5 ದುಬಾರಿ ಆಟಗಾರರು: ದೇಶೀಯ ಯುವಕರಿಗೂ ಸ್ಥಾನ
ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಫ್ರಾಂಚೈಸಿಗಳು ಯುವ ಹಾಗೂ ಅನುಭವಿ ಆಟಗಾರರಿಗೆ ಮಣೆ ಹಾಕಿದ್ದಾರೆ. ತಮ್ಮ ತಂಡದ ಸಮತೋಲವನ್ನು ನೋಡಿಕೊಂಡ ಮಾಲೀಕರು ಆಟಗಾರರಿಗೆ ಹಣವನ್ನು ಹೂಡಿದ್ದಾರೆ. ಹಾಗಿದ್ದರೆ ಈ ಬಾರಿಯ ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಬಿಕರಿಯಾದ ಟಾಪ್ 5 ಆಟಗಾರರ ಪಟ್ಟಿ ಇಲ್ಲಿದೆ.
ನಿರೀಕ್ಷೆಯಂತೆ ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಕೋಟಿ ಕೋಟಿ ರೂ.ಗಳನ್ನು ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ. ಹರಾಜು ಅಂಗಳಕ್ಕೆ ಇವರ ಹೆಸರು ಬರುತ್ತಿದ್ದಂತೆ ಮಾಲೀಕರು ಹಣವನ್ನು ಹೂಡಲು ಸಜ್ಜಾದರು. ಆದರೆ ಆಂಡ್ರೆ ರಸೆಲ್ ಅವರ ಬದಲಿಗೆ ಆಲ್‌ರೌಂಡರ್ ಹುಡುಕಾಟದಲ್ಲಿ ಕೆಕೆಆರ್ ಇವರಿಗೆ ಬಾಜಿ ಕಟ್ಟುತ್ತಲೇ ಸಾಗಿತು. ಎಷ್ಟೇ ಹಣವಾದರೂ ಕೆಕೆಆರ್ ಇವರನ್ನು ಬಿಟ್ಟುಕೊಡುವ ಯೋಚನೆಯನ್ನು ಮಾಡಲೇ ಇಲ್ಲ. ಅಂತಿಮವಾಗಿ ಕೆಕೆಆರ್ 2 ಕೋಟಿ ರೂ. ಮೂಲ ಬೆಲೆಯ ಆಟಗಾರನಿಗೆ 25.20 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಇವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.

ಅತಿ ಹೆಚ್ಚು ಹಣವನ್ನು ಪಡೆದ ಆಟಗಾರರ ಪಟ್ಟಿಯಲ್ಲಿ ಮತೀಶ್ ಪತಿರಾಣಗೂ ಸ್ಥಾನ ಸಿಕ್ಕಿದೆ. ಇವರನ್ನು ಈ ಬಾರಿ ಹರಾಜು ಅಂಗಳಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಬಿಟ್ಟಿತ್ತು. ಈ ಸ್ಟಾರ್ ಆಟಗಾರನನ್ನು ಸಹ ಕೆಕೆಆರ್ 18 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಇವರ ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಲು ಹೆಸರುವಾಸಿ.
ಅನ್‌ಕ್ಯಾಪ್ಡ್ ಪ್ಲೇಯರ್‌ಗಳಿಗೆ ಬಂಪರ್
ಐಪಿಎಲ್ ಹರಾಜಿನಲ್ಲಿ ಅನ್‌ಕ್ಯಾಪ್ಡ್ ಆಟಗಾರರು ಬಂಪರ್ ಹಣವನ್ನು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಕಾರ್ತಿಕ್ ಶರ್ಮಾ ಎದ್ದು ಕಾಣುವ ಹೆಸರು. ಈ ಬಾರಿಯ ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಬಿಕರಿಯಾದ ಮೂರನೇ ಆಟಗಾರ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಇವರನ್ನು ಚೆನ್ನೈ ಇವರಿಗೆ 14.20 ಕೋಟಿ ರೂ. ನೀಡಿ ಖರೀದಿಸಿದೆ. ಇವರು ದೇಶೀಯ ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ಸದ್ದು ಮಾಡಿದ್ದರು. ಇವರು ಒಬ್ಬ ವಿಕೆಟ್ ಕೀಪರ್ ಬ್ಯಾಟರ್.
ಉತ್ತರ ಪ್ರದೇಶದ 20 ವರ್ಷದ ಯುವ ಆಟಗಾರ ಪ್ರಶಾಂತ್ ವೀರ್ (Prashant Veer) ಅವರಿಗೂ ಸಹ ಚೆನ್ನೈ ಬಾಜಿ ಕಟ್ಟಿ ಗೆದ್ದಿದೆ. ಇವರಿಗೆ ಚೆನ್ನೈ 14.20 ಕೋಟಿ ರೂ. ನೀಡಿ ಸೇರಿಸಿಕೊಂಡಿದೆ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚುತ್ತಿರುವ ಪ್ರತಿಭೆ. ರವೀಂದ್ರ ಜಡೇಜಾ ಅವರ ಸ್ಥಾನವನ್ನು ಇವರು ಸಮರ್ಥವಾಗಿ ತುಂಬುವ ಆಟಗಾರ ಎಂದು ಚೆನ್ನೈ ಇವರಿಗೆ ಹಣ ಹೂಡಿದೆ.
ಲಿಯಾಮ್‌ಗೆ ಬಂಪರ್
ಆರ್‌ಸಿಬಿ ಹರಾಜಿನ ಅಂಗಳಕ್ಕೆ ಬಿಟ್ಟಿದ್ದ ಇಂಗ್ಲೆಂಡ್ ತಂಡದ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಎಸ್‌ಆರ್‌ಎಚ್ ಭಾರೀ ಮೊತ್ತವನ್ನು ನೀಡಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಇವರಿಗೆ ಹೈದರಾಬಾದ್ 13 ಕೋಟಿ ರೂ. ನೀಡಿದೆ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಇವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಲ್ಲ ಕ್ಷಮತೆ ಹೊಂದಿದ್ದು, ಸ್ಪಿನ್ ಬೌಲಿಂಗ್ ಮಾಡುವ ಕ್ಷಮತೆ ಹೊಂದಿದ್ದಾರೆ.
ಹರಾಜಿನಲ್ಲಿ ಬಾಂಗ್ಲಾದೇಶದ ವೇಗದ ಬೌಲರ್ ಮುಷ್ತಾಫಿಜುರ್ ರಹಮಾನ್ ಅವರಿಗೂ ಮಾಲೀಕರು ಹಣವನ್ನು ಹೂಡಿದ್ದಾರೆ. ಇವರು 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜು ಅಖಾಡ ಪ್ರವೇಶಿಸಿದ್ದರು. ಇವರನ್ನು ಸಹ ಕೆಕೆಆರ್ ಕೊಳ್ಳುವಲ್ಲಿ ಸಫಲವಾಗಿದೆ. ಇವರಿಗೆ ಕೆಕೆಆರ್ 9.20 ಕೋಟಿ ರೂ. ನೀಡಿದೆ. ಇವರು ತಮ್ಮ ಕಟರ್ ಹಾಗೂ ಸ್ಲೋವರ್ ಒನ್ ಎಸೆತಗಳಿಂದಲೇ ಹೆಸರುವಾಸಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications