For Quick Alerts
ALLOW NOTIFICATIONS  
For Daily Alerts
 

ಇಶಾನ್‌ ಕಿಶನ್‌ ಸೊಗಸಾದ ಆಟ: ಆರ್‌ಸಿಬಿಗೆ 202 ರನ್‌ ಗುರಿ ನೀಡಿದ ಸನ್‌ರೈಸರ್ಸ್‌

ಬೆಂಗಳೂರು: ನಾಯಕ ಇಶಾನ್‌ ಕಿಶನ್‌ ಬಾರಿಸಿದ ಅರ್ಧಶತಕ ಹಾಗೂ ಅನಿಕೇತ್ ವರ್ಮಾ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 19ನೇ ಆವೃತ್ತಿಯ ಐಪಿಎಲ್‌ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ 202 ರನ್‌ಗಳ ಗುರಿಯನ್ನು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ನೀಡಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರ ನಿರ್ಧಾರವನ್ನು ವೇಗದ ಬೌಲರ್‌ಗಳು ಸಮರ್ಥಿಸಿಕೊಳ್ಳುವಲ್ಲಿ ಸಫಲರಾದರು. ಈ ವೇಳೆ ವೇಗದ ಬೌಲರ್‌ ಜಾಕಬ್ ಡಫಿ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದರು. ಇವರು ಟಾಪ್‌ ಆರ್ಡರ್ ಸ್ಫೋಟಕ ಬ್ಯಾಟರ್‌ ಅಭಿಷೇಕ್‌ ಶರ್ಮಾ ಅವರಿಗೆ ಖೆಡ್ಡಾ ತೋಡಿದರು.

IPL 2026

ತಮ್ಮ ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಡಫಿ ಭರವಸೆಯ ಬ್ಯಾಟರ್‌ ಟ್ರಾವಿಸ್ ಹೆಡ್‌ ಅವರಿಗೆ ಪೆವಿಲಿಯನ್‌ ಹಾದಿ ತೋರಿಸುವಲ್ಲಿ ಸಫಲರಾದರು. ಟ್ರಾವಿಸ್ ಹೆಡ್‌ 2 ಬೌಂಡರಿ ನೆರವಿನಿಂದ 11 ರನ್‌ ಬಾರಿಸಿ ಔಟ್ ಆದರು. ಐದನೇ ಓವರ್ ಬೌಲ್‌ ಮಾಡಿದ ಡಫಿ ಈ ಓವರ್‌ನಲ್ಲಿ ಆಲ್‌ರೌಂಡರ್ ಆಟಗಾರ ನಿತೀಶ್‌ ಕುಮಾರ್ ರೆಡ್ಡಿ ಅವರಿಗೆ ಬ್ಯಾಕ್‌ ಆಫ್‌ ಲೆಂಥ್ ಎಸೆತವನ್ನು ಹಾಕಿ ಔಟ್ ಮಾಡಿದರು.

ಇಶಾನ್‌ ಅಬ್ಬರ

ಪವರ್‌ ಪ್ಲೇನಲ್ಲಿ 29 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಎಸ್‌ಆರ್‌ಎಚ್‌ ತಂಡಕ್ಕೆ ನಾಯಕ ಇಶಾನ್‌ ಕಿಶನ್‌ ಹಾಗೂ ಹೆನ್ರಿಕ್ ಕ್ಲಾಸೇನ್‌ ಜೋಡಿ ಆಧಾರವಾಯಿತು. ಈ ಜೋಡಿ ಆರಂಭದಲ್ಲಿ ತಾಳ್ಮೆಯಿಂದ ಇನಿಂಗ್ಸ್‌ ಕಟ್ಟುತ್ತಾ ಸಾಗಿತು. ಬಳಿಕ ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿದರು. ಈ ಜೋಡಿ 53 ಎಸೆತಗಳಲ್ಲಿ 97 ರನ್‌ ಸೇರಿಸಿತು. ಈ ಹಂತದಲ್ಲಿ ರೊಮಾರಿಯೋ ಶೆಫರ್ಡ್‌ ಎಸೆದ ಸ್ಲೋವರ್‌ ಆಫ್‌ಕಟರ್‌ ಎಸೆತವನ್ನು ತಪ್ಪಾಗಿ ಗ್ರಹಿಸಿದ ಕ್ಲಾಸೇನ್ ಡೀಪ್‌ ಮಿಡ್‌ ವಿಕೆಟ್‌ನಲ್ಲಿ ಫಿಲ್‌ ಸಾಲ್ಟ್‌ ಹಿಡಿದ ಅಮೋಘ ಕ್ಯಾಚ್‌ಗೆ ಬಲಿಯಾದರು. ಕ್ಲಾಸೇನ್‌ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 31 ರನ್‌ ಬಾರಿಸಿ ಔಟ್ ಆದರು.

IPL 2026

ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕ ಇಶಾನ್‌ ಕಿಶನ್‌ ಸೊಗಸಾದ ಬ್ಯಾಟಿಂಗ್ ನಡೆಸಿದರು. ಇವರು 38 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್ ಸಹಾಯದಿಂದ 80 ರನ್‌ ಸಿಡಿಸಿದಾಗ ಅಭಿನಂದನ್‌ ಸಿಂಗ್ ಅವರ ಎಸೆತದಲ್ಲಿ ಫಿಲ್ ಸಾಲ್ಟ್‌ ಹಿಡಿದ ಅಮೋಘ ಕ್ಯಾಚ್‌ಗೆ ಬಲಿಯಾದರು.

ಅನಿಕೇತ್ ವರ್ಮಾ 18 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್‌ ಸಹಾಯದಿಂದ 43 ರನ್‌ ಬಾರಿಸಿದರು. ಅಂತಿಮವಾಗಿ ಸನ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 201 ರನ್‌ ಕಲೆ ಹಾಕಿತು.

ಆರ್‌ಸಿಬಿ ಪರ ಜಾಕಬ್ ಡಫಿ ಹಾಗೂ ರೊಮಾರಿಯೋ ಶೆಫರ್ಡ್ ತಲಾ 3 ವಿಕೆಟ್‌ ಪಡೆದರು.

ಕಪ್ಪು ಪಟ್ಟಿ ಧರಿಸಿದ್ದು ಏಕೆ?

ಕಳೆದ ವರ್ಷ ಆರ್‌ಸಿಬಿ ಟ್ರೋಫಿ ಗೆದ್ದಾಗ ಅಭಿಮಾನಿಗಳು ಸಂತೋಷ ಪಟ್ಟರು. ಆರ್‌ಸಿಬಿ ಚಾಂಪಿಯನ್‌ ಆದ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದರು. ಆರ್‌ಸಿಬಿ ಸಾಕಷ್ಟು ಟೀಕೆಗಳನ್ನು ಎದುರಿಸಿತು. ಈಗ, ಮಡಿದವರಿಗೆ ಗೌರವ ಸಲ್ಲಿಸಲು, ಆರ್‌ಸಿಬಿ ಕಪ್ಪು ತೋಳುಪಟ್ಟಿ ಧರಿಸಿ ಮೈದಾನಕ್ಕೆ ಇಳಿಯಿತು. ಅಲ್ಲದೆ ಕಾಲ್ತುಳಿತದಲ್ಲಿ ಮೃತ ಪಟ್ಟವರ ಗೌರವಾರ್ಥ ಬಿಸಿಸಿಐ ಉದ್ಘಾಟನಾ ಪಂದ್ಯವನ್ನು ರದ್ದುಗೊಳಿಸಿತ್ತು.

Story first published: Saturday, March 28, 2026, 21:28 [IST]
Other articles published on Mar 28, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+