Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಕೆಎಲ್‌ ರಾಹುಲ್‌, ದೇವದತ್ ಪಡಿಕ್ಕಲ್‌ ಮಿಂಚು, ಯಶ್‌ ರಾಜ್ ಭರವಸೆ; ಇಲ್ಲಿದೆ ಐಪಿಎಲ್‌ನಲ್ಲಿ ಕನ್ನಡಿಗರ ಸಾಧನೆಯ ವರದಿ

19ನೇ ಆವೃತ್ತಿಯ ಐಪಿಎಲ್ ಇತಿಹಾಸ ಪುಟ ಸೇರಿದೆ. ಈ ಬಾರಿ ನಡೆದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಭರ್ಜರಿ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಲೀಗ್‌ನಲ್ಲಿ ಹಲವು ಯುವ ಹಾಗೂ ಅನುಭವಿ ಆಟಗಾರರು ಸ್ಥಿರ ಪ್ರದರ್ಶನ ನೀಡಿದ್ದಾರೆ. 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಕರ್ನಾಟಕದ ಆಟಗಾರರು ಸಹ ಅಮೋಘ ಪ್ರದರ್ಶನ ನೀಡಿದ್ದಾರೆ.

ಕರ್ನಾಟಕದ ಆಟಗಾರರು ಸ್ಥಿರ ಪ್ರದರ್ಶನ ನೀಡಿದ್ದಾರೆ. ಹಲವು ತಂಡಗಳ ಪರ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಕನ್ನಡಿಗರು ತಂಡದ ಜಯದಲ್ಲಿ ಮಿಂಚಿದ್ದಾರೆ. 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಕನ್ನಡಿಗರ ಸಾಧನೆಯ ಬಗ್ಗೆ ವರದಿ ಇಲ್ಲಿದೆ.

IPL 2026

ಯಶ್ ರಾಜ್ ಪುಂಜಾ

ಈ ಬಾರಿಯ ಐಪಿಎಲ್‌ನಲ್ಲಿ ಎಲ್ಲರ ಚಿತ್ತ ಕದ್ದ ಯುವ ಆಟಗಾರ ಕರ್ನಾಟಕದ ಸ್ಪಿನ್ ಬೌಲರ್‌ ಯಶ್ ರಾಜ್ ಪುಂಜಾ. 18 ವರ್ಷದ ಯಶ್ ರಾಜ್ ಪುಂಜಾ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುವ ಅವಕಾಶವನ್ನು ಪಡೆದ ಆಟಗಾರ. ಇವರು ತಮಗೆ ತಂಡ ನೀಡಿದ್ದ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸಿದ್ದಾರೆ. ಇವರು ಆಡಿದ 8 ಪಂದ್ಯಗಳಲ್ಲಿ 9 ವಿಕೆಟ್‌ ಪಡೆದು ಬೀಗಿದ್ದಾರೆ.

ಮನೀಶ್ ಪಾಂಡೆ

19ನೇ ಆವೃತ್ತಿಯ ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆಯುವಲ್ಲಿ ವಿಫಲರಾಗಿ ಕೊನೆಯ ಕೆಲವು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆದರು. ಇವರು ಆಡಿದ 6 ಪಂದ್ಯ, 70 ರನ್‌ ಸಿಡಿಸಿದ್ದಾರೆ. ಅಲ್ಲದೆ ಹಲವು ಅಮೋಘ ಕ್ಯಾಚ್ ಪಡೆದಿದ್ದಾರೆ. ಇವರಿಗೆ ಆರ್‌ಸಿಬಿ ವಿರುದ್ಧ ಪಡೆದ ಅಮೋಘ ಕ್ಯಾಚ್‌ಗೆ ಪ್ರಶಸ್ತಿಯೂ ಲಭಿಸಿದೆ.

ವಿಜಯ್ ಕುಮಾರ್ ವೈಶಾಖ್

ಪಂಜಾಬ್ ಕಿಂಗ್ಸ್ ತಂಡದ ಪರ ಕಣಕ್ಕೆ ಇಳಿದ ವಿಜಯ್ ಕುಮಾರ್ ವೈಶಾಖ್, ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಲು ಹೆಸರುವಾಸಿ. ಇವರು ಆಡಿದ 10 ಪಂದ್ಯ 9 ವಿಕೆಟ್‌ ಪಡೆದಿದ್ದಾರೆ.

ಪ್ರಸಿದ್ಧ್ ಕೃಷ್ಣ

ಗುಜರಾತ್ ಟೈಟಾನ್ಸ್ ತಂಡ ಈ ಬಾರಿಯ ಫೈನಲ್‌ ವರೆಗೂ ಸಾಗುವಲ್ಲಿ ಪ್ರಸಿದ್ಧ್ ಕೃಷ್ಣ ಕಾಣಿಕೆ ಅಪಾರ. ಇವರು ಮಧ್ಯದ ಓವರ್‌ ಹಾಗೂ ಡೆತ್‌ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಬಲ್ಲ ಕ್ಷಮತೆ ಹೊಂದಿದ್ದಾರೆ. ಪ್ರಸಿದ್ಧ 19ನೇ ಆವೃತ್ತಿಯಲ್ಲಿ ಆಡಿದ 12 ಪಂದ್ಯಗಳಲ್ಲಿ 16 ವಿಕೆಟ್‌ ಪಡೆದು ಭರವಸೆ ಮೂಡಿಸಿದ್ದಾರೆ.

ಕೆಎಲ್‌ ರಾಹುಲ್

ಡೆಲ್ಲಿ ಕ್ಯಾಪಿಟಲ್ಸ್ ಪರ ಅನುಭವಿ ಬ್ಯಾಟರ್ ಕೆಎಲ್ ರಾಹುಲ್ ಸಹ ಕಮಾಲ್ ಪ್ರದರ್ಶನ ನೀಡಿದ್ದಾರೆ. ಇವರು ನೆಲಕಚ್ಚಿ ನಿಂತು ಬಿಗ್ ಇನಿಂಗ್ಸ್‌ ಕಟ್ಟುವಲ್ಲಿ ಹೆಸರುವಾಸಿ. ಕೆಎಲ್ ರಾಹುಲ್ ಆಡಿದ 14 ಪಂದ್ಯಗಳಲ್ಲಿ 45ರ ಸರಾಸರಿಯಲ್ಲಿ 593 ರನ್‌ ಸಿಡಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 5 ಅರ್ಧಶತಕಗಳು ಸೇರಿವೆ. ಇವರ ಕ್ಲಾಸಿಕ್ ಆಟದಲ್ಲಿ 56 ಬೌಂಡರಿ, 31 ಸಿಕ್ಸರ್‌ಗಳು ಮೂಡಿ ಬಂದಿವೆ. ಇದೇ ತಂಡದ ಪರ ಆಡಿದ ಕರುಣ್‌ ನಾಯರ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.

ದೇವದತ್ ಪಡಿಕ್ಕಲ್‌

ಆರ್‌ಸಿಬಿ ಈ ಬಾರಿ ಐಪಿಎಲ್‌ ಚಾಂಪಿಯನ್‌ ಪಟ್ಟವನ್ನು ಅಲಂಕರಿಸುವಲ್ಲಿ ಕರ್ನಾಟಕದ ಭರವಸೆಯ ಆಟಗಾರ ದೇವದತ್ ಪಡಿಕ್ಕಲ್ ಪಾತ್ರ ದೊಡ್ಡದು. ಇವರು ಲೀಗ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಮಿಂಚಿದ್ದಾರೆ. ಅಲ್ಲದೆ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಆಟಗಾರ. ದೇವದತ್ ಆಡಿದ 16 ಪಂದ್ಯಗಳಲ್ಲಿ 33ರ ಸರಾಸರಿಯಲ್ಲಿ 464 ರನ್‌ ಸಿಡಿಸಿದ್ದಾರೆ. ಇದರಲ್ಲಿ 3 ಅರ್ಧಶತಕಗಳು ಸೇರಿವೆ.

Story first published: Tuesday, June 2, 2026, 13:00 [IST]
Other articles published on Jun 2, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+