For Quick Alerts
ALLOW NOTIFICATIONS  
For Daily Alerts
 

KL Rahul: ಕನ್ನಡಿಗನನ್ನು ತಂಡಕ್ಕೆ ಸೇರಿಸಿಕೊಳ್ಳಲು 2 ತಂಡಗಳು ಪ್ಲ್ಯಾನ್

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಇತ್ತೀಚಿಗಷ್ಠ ಮುಗಿದಿದೆ. ಈಗ ಮುಂದಿನ ಐಪಿಎಲ್‌ಗೆ ಭರದ ಸಿದ್ಧತೆಗಳು ನಡೆದಿವೆ. ಈಗ ಐಪಿಎಲ್‌ ಟ್ರೇಡ್‌ ವಿಂಡೋ ಸಹ ಓಪನ್‌ ಆಗಿದೆ. ಈ ವೇಳೆ ಐಪಿಎಲ್‌ ಫ್ರಾಂಚೈಸಿಗಳು ತಮ್ಮ ತಂಡವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಪ್ಲ್ಯಾನ್ ಮಾಡಿಕೊಳ್ಳುತ್ತಿವೆ. ಇದೇ ವೇಳೆಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸ್ಟಾರ್ ಆಟಗಾರ ಕೆಎಲ್ ರಾಹುಲ್‌ ಮೇಲೆ ಹಲವು ತಂಡಗಳು ಕಣ್ಣು ನೆಟ್ಟಿವೆ.

ಕನ್ನಡಿಗ ಕೆಎಲ್ ರಾಹುಲ್‌ ಅವರನ್ನು ಆರ್‌ಸಿಬಿ ತಂಡಕ್ಕೆ ಸೇರಿಸಿಕೊಳ್ಳುವಂತೆ ಕೂಗು ಐಪಿಎಲ್‌ ಮೆಗಾ ಹರಾಜಿಗಿಂತ ಮುನ್ನ ಕೇಳಿ ಬಂದಿತ್ತು. ಆದರೆ ಇವರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಆರ್‌ಸಿಬಿ ವಿಫಲವಾಗಿತ್ತು. ಆದರೆ ಮುಂದಿನ ಬಾರಿಯ ಐಪಿಎಲ್‌ಗೂ ಮುನ್ನ ಟ್ರೇಡ್‌ ಮೂಲಕ ಆರ್‌ಸಿಬಿ ಖರೀದಿಸುತ್ತಾ ಎಂಬ ಮಾತುಗಳು ಇದ್ದವು. ಆದರೆ ಇದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಈ ಸ್ಟಾರ್‌ ಪ್ಲೇಯರ್‌ನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಈಗ ಎರಡು ತಂಡಗಳು ಕಣ್ಣು ನೆಟ್ಟಿವೆ.

IPL 2026 KKR CSK lock horns in fierce battle to trade KL Rahul offering captaincy

ಐಪಿಎಲ್‌ನ ಮಾಜಿ ಚಾಂಪಿಯನ್‌ಗಳಾದ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡಗಳು ಸ್ಟಾರ್ ಪ್ಲೇಯರ್‌ ಕೆಎಲ್ ರಾಹುಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪ್ಲ್ಯಾನ್ ಮಾಡಿವೆ. ಕೆಎಲ್ ರಾಹುಲ್ ಅವರಿಗೆ ಹೆಚ್ಚಿನ ಅಭಿಮಾನಿಗಳ ಬಳಗವಿದೆ. ಅಲ್ಲದೆ ಇವರು 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಧಾರವಾಗಿದ್ದರು.

ಇಂಗ್ಲೆಂಡ್ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ

ಇಂಗ್ಲೆಂಡ್‌ ಪ್ರವಾಸದಲ್ಲಿ ಟೀಮ್‌ ಇಂಡಿಯಾದ ಪರ ಆರಂಭಿಕರಾಗಿ ಕಾಣಿಸಿಕೊಂಡಿದ್ದ ಕೆಎಲ್ ರಾಹುಲ್‌ ಆಂಡರ್ಸನ್‌, ತೆಂಡೂಲ್ಕರ್ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ಅಲ್ಲದೆ ಸರಣಿಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಎರಡನೇ ಭಾರತೀಯ ಬ್ಯಾಟರ್‌ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ. ಇವರ ಈ ಪ್ರದರ್ಶನ ಇವರತ್ತ ಫ್ರಾಂಚೈಸಿಗಳು ನೋಡುವಂತೆ ಮಾಡಿವೆ.

IPL 2026 KKR CSK lock horns in fierce battle to trade KL Rahul offering captaincy

ಡಿಎನ್‌ಎ ವರದಿಗಳ ಪ್ರಕಾರ ಸಿಎಸ್‌ಕೆ ಹಾಗೂ ಕೆಕೆಆರ್‌ ತಂಡಗಳು ಕೆಎಲ್ ರಾಹುಲ್‌ ಅವರಿಗೆ ತಮ್ಮ ತಂಡಕ್ಕೆ ಸೇರಿಸಿಕೊಂಡು ಕ್ಯಾಪ್ಟನ್ಸಿ ನೀಡಲು ಪ್ಲ್ಯಾನ್ ಮಾಡಿಕೊಳ್ಳುತ್ತಿವೆ. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ರಾಹುಲ್‌ ಅವರಿಗೆ ನಾಯಕತ್ವವನ್ನು ನೀಡಿಲ್ಲ. ಕಳೆದ ಆವೃತ್ತಿಯಲ್ಲಿ ಈ ತಂಡವನ್ನು ಅಕ್ಷರ್ ಪಟೇಲ್ ಮುನ್ನಡೆಸಿದ್ದರು. ಚೆನ್ನೈ ತಂಡ ಎಂಎಸ್‌ ಧೋನಿ ಅವರ ಬದಲಿ ಆಟಗಾರನನ್ನು ಹುಡುಕುತ್ತಿದೆ. ಹೀಗಾಗಿ ಮ್ಯಾನೇಜ್ಮೆಂಟ್‌ ಕನ್ನಡಿಗನ ಮೇಲೆ ಕಣ್ಣು ನೆಟ್ಟಿದೆ.

ಐಪಿಎಲ್‌ನಲ್ಲಿ ರಾಹುಲ್ ಸಾಧನೆ

ಐಪಿಎಲ್‌ನಲ್ಲಿ ರಾಹುಲ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 145 ಪಂದ್ಯಗಳಲ್ಲಿ 46ರ ಸರಾಸರಿಯಲ್ಲಿ 5222 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 5 ಶತಕ ಹಾಗೂ 40 ಅರ್ಧಶತಕಗಳು ಸೇರಿವೆ. ಇವರ ಬ್ಯಾಟ್‌ನಿಂದ 452 ಬೌಂಡರಿ, 208 ಸಿಕ್ಸರ್‌ ಬಾರಿಸಿದ್ದಾರೆ.

Story first published: Wednesday, August 6, 2025, 10:00 [IST]
Other articles published on Aug 6, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+