IPL 2026: ಮುಸ್ತಾಫಿಜುರ್ ಬದಲಿಗೆ ಜಿಂಬಾಬ್ವೆ ಬೌಲರ್‌ಗೆ ಮಣೆ ಹಾಕಿದ ಕೆಕೆಆರ್
ಇಂಡಿಯನ್ ಪ್ರೀಮಿಯರ್ ಲೀಗ್‌ನ 19 ನೇ ಸೀಸನ್ ಮಾರ್ಚ್ 28 ರಂದು ಆರಂಭವಾಗಲಿದ್ದು, ಈ ಲೀಗ್‌ಗಾಗಿ ಸಿದ್ಧತೆಗಳು ನಡೆದಿವೆ. 10 ತಂಡಗಳು ಈಗಾಗಲೇ ತಮ್ಮ ಅಭ್ಯಾಸ ಶಿಬಿರವನ್ನು ಆರಂಭಿಸಿವೆ. ಶುಕ್ರವಾರ ಸಂಜೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬಾಂಗ್ಲಾದೇಶದ ಬೌಲರ್ ಮುಸ್ತಾಫಿಜುರ್ ರಹಮಾನ್ ಬದಲಿಗೆ ಬೇರೆ ಆಟಗಾರನಿಗೆ ಮಣೆ ಹಾಕಿದೆ. ಈ ವೇಳೆ ಕೆಕೆಆರ್ ಜಿಂಬಾಬ್ವೆ ತಂಡದ ವೇಗದ ಬೌಲರ್ ಬ್ಲೆಸಿಂಗ್ ಮುಜಾರಬಾನಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.
ಜಿಂಬಾಬ್ವೆ ತಂಡದ ವೇಗಿ ಬ್ಲೆಸಿಂಗ್ ಮುಜಾರಬಾನಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಮನಮೋಹಕ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಮುಜಾರಬಾನಿ ಈ ಹಿಂದೆ ಪಾಕಿಸ್ತಾನದಲ್ಲಿ ನಡೆಯಲಿರುವ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಪರ ಆಡಲು ನಿರ್ಧರಿಸಲಾಗಿತ್ತು. ಆದರೆ ಅವರು ಈಗ ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಪರ ಆಡಲು ಮುಂದಾಗಿದ್ದಾರೆ.

ಇತ್ತೀಚಿಗೆ ಐಪಿಎಲ್ ವೇಳಾಪಟ್ಟಿಗಳು ಬಿಡುಗಡೆ ಆದವು. ಈ ವೇಳೆ ಎಲ್ಲರ ಕಣ್ಣುಗಳು ಕೆಕೆಆರ್ ತಂಡದ ಮೇಲಿತ್ತು. ಕೋಲ್ಕತ್ತಾ ಮುಸ್ತಾಫಿಜುರ್ ಅವರ ಬದಲಿಗೆ ಯಾವ ಆಟಗಾರನಿಗೆ ಮಣೆ ಹಾಕುತ್ತದೆ ಎಂಬುದೇ ಕುತೂಹಲ ಮೂಡಿಸಿತ್ತು. ಐಪಿಎಲ್ ವೇಳಾಪಟ್ಟಿಗಳು ಬಿಡುಗಡೆ ಆದ ಮೇಲೆ ಮುಸ್ತಾಫಿಜುರ್ ಸ್ಥಾನ ತುಂಬುವುದು ಯಾರು ಎಂಬ ಪ್ರಶ್ನೆ ಉದ್ಭವಿಸಿತ್ತು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬ್ಲೆಸಿಂಗ್ ಮುಜಾರಬಾನಿ ಅವರು ಮಾರ್ಚ್ 17 ರಂದು ತಂಡವನ್ನು ಸೇರಲಿದ್ದಾರೆ ಎಂದು ಕೆಕೆಆರ್ ಘೋಷಿಸಿತು.
ಐಪಿಎಲ್ ಆಡಲಿರುವ ಜಿಂಬಾಬ್ವೆ ವೇಗಿ
ಐಪಿಎಲ್ 2026ರ ಹರಾಜಿನಲ್ಲಿ ಬ್ಲೆಸಿಂಗ್ ಮುಜಾರಬಾನಿ ಬಿಕರಿ ಆಗದೇ ಇದ್ದಾಗ, ಪಿಎಸ್‌ಎಲ್‌ನ ಇಸ್ಲಾಮಾಬಾದ್ ಯುನೈಟೆಡ್ ತಂಡ ಇವರಿಗೆ ಮಣೆ ಹಾಕಿತ್ತು. ಅದರಂತೆ ಜಿಂಬಾಬ್ವೆ ವೇಗಿ ಪಿಎಸ್‌ಎಲ್‌ನಲ್ಲಿ ಆಡಲು ಸಜ್ಜಾಗಿದ್ದರು. ಕೆಕೆಆರ್ ತಂಡ ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡ ಮೇಲೆ ಇವರು ಇನ್ನು ಐಪಿಎಲ್‌ನಲ್ಲಿ ಆಡುವುದನ್ನು ನೋಡಬಹುದಾಗಿದೆ.

ಐಪಿಎಲ್ ಹಾಗೂ ಪಿಎಸ್‌ಎಲ್ ಸತತ ಎರಡನೇ ವರ್ಷ ಏಕಕಾಲದಲ್ಲಿ ಆರಂಭವಾಗುತ್ತಿವೆ. ಪಿಎಸ್‌ಎಲ್ ತಂಡದ ಭಾಗವಾಗಿದ್ದ ಆಟಗಾರ ಐಪಿಎಲ್ ತಂಡ ಸೇರುತ್ತಿರುವುದು ಇದೇ ಮೊದಲಲ್ಲ. ಕಳೆದ ಆವೃತ್ತಿಯಲ್ಲೂ ದಕ್ಷಿಣ ಆಫ್ರಿಕಾದ ಕಾರ್ಬಿನ್ ಬಾಷ್ ಸಹ ಇದೇ ರೀತಿ ಮಾಡಿದ್ದರು.
ಬ್ಲೆಸಿಂಗ್ ಮುಜಾರಬಾನಿ ಸಾಧನೆ
29 ವರ್ಷದ ಜಿಂಬಾಬ್ವೆ ಬ್ಲೆಸಿಂಗ್ ಮುಜಾರಬಾನಿ ಆಟಗಾರ ತಮ್ಮ ವೇಗದ ಬೌಲಿಂಗ್‌ನಿಂದಲೇ ಸದ್ದು ಮಾಡಿದ್ದಾರೆ. ಈ ವರೆಗೆ ಇವರು ಜಿಂಬಾಬ್ವೆ ತಂಡದ ಪರ 18 ಟೆಸ್ಟ್ ಪಂದ್ಯಗಳನ್ನು ಆಡಿದ್ದು 67 ವಿಕೆಟ್, 57 ಏಕದಿನ ಪಂದ್ಯಗಳನ್ನು ಆಡಿದ್ದು 70 ವಿಕೆಟ್ ಕಬಳಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ ಇವರು 89 ಪಂದ್ಯಗಳಲ್ಲಿ 106 ವಿಕೆಟ್ ಪಡೆದಿದ್ದಾರೆ. ಭಾರತದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಬ್ಲೆಸಿಂಗ್ ಮುಜಾರಬಾನಿ ಆಡಿದ 6 ಪಂದ್ಯಗಳಲ್ಲಿ 13 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications