Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KKR vs PBKS: ಪಂದ್ಯಕ್ಕೆ ಮಳೆ ಅಡ್ಡಿ, ರದ್ದು; ಉಭಯ ತಂಡಗಳಿಗೂ ತಲಾ ಒಂದು ಅಂಕ

ಕೋಲ್ಕತ್ತ ನೈಟ್‌ ರೈಡರ್ಸ್ (ಕೆಕೆಆರ್‌) ಹಾಗೂ ಪಂಜಾಬ್ ಕಿಂಗ್ಸ್‌ (ಪಿಬಿಕೆಎಸ್) ನಡುವಣ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದೆ. 19ನೇ ಆವೃತ್ತಿಯ 12ನೇ ಪಂದ್ಯಕ್ಕೆ ವರುಣ ಕಾಟ ನೀಡಿದ್ದಾನೆ. ಪಂಜಾಬ್ ಹಾಗೂ ಕೋಲ್ಕತ್ತ ನಡುವಣ ಕಾಳಗ ಮಳೆಯ ಕಾರಣ ಸ್ಥಗಿತಗೊಂಡಿತ್ತು. ಇದು ಅಭಿಮಾನಿಗಳ ನಿರೀಕ್ಷೆಗಳನ್ನು ಹುಸಿಗೊಳಿಸಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವು ಸಮಯಕ್ಕೆ ಸರಿಯಾಗಿ ಪ್ರಾರಂಭವಾಯಿತು. ಈ ಪಂದ್ಯದಲ್ಲಿ ಜಯ ಸಾಧಿಸುವ ಇರಾದೆಯಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಕಣಕ್ಕೆ ಇಳಿಯಿತು. ಕೆಕೆಆರ್‌ ನಾಯಕ ಅಜಿಂಕ್ಯ ರಹಾನೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡರು. ಆದರೆ ಇವರ ನಿರ್ಧಾರ ತಪ್ಪು ಎಂದು ಸಾಬೀತಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಪಂಜಾಬ್ ಕಿಂಗ್ಸ್ ಬೌಲರ್‌ ಸ್ವಿಂಗ್ ಎಸೆತಗಳನ್ನು ಎದುರಿಸುವಲ್ಲಿ ಆತಿಥೇಯ ಕೆಕೆಆರ್ ಬ್ಯಾಟರ್‌ಗಳು ವಿಫಲರಾದರು.

IPL 2026

ಕ್ಸೇವಿಯರ್ ಬಾರ್ಟ್ಲೆಟ್ ಎರಡನೇ ಓವರ್‌ನಲ್ಲಿ ಫಿನ್ ಅಲೆನ್ ಮತ್ತು ಕ್ಯಾಮರೂನ್ ಗ್ರೀನ್ ಅವರನ್ನು ಔಟ್ ಮಾಡಿದರು. ಈ ಆಟಗಾರರು ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಎಡವಿದರು. 3.4 ಓವರ್‌ಗಳ ಆಟ ಆದಾಗ ಕೆಕೆಆರ್‌ 2 ವಿಕೆಟ್‌ಗೆ 25 ರನ್‌ ಸೇರಿಸಿತ್ತು. ಆಗ ಮಳೆ ಪಂದ್ಯಕ್ಕೆ ಕಾಟ ನೀಡಿತು. ಹೀಗಾಗಿ ಆಟಗಾರರು ಮೈದಾನದಿಂದ ಹೊರ ನಡೆದರು. ಇದಕ್ಕೂ ಮೊದಲು ಉಭಯ ತಂಡಗಳು ಅಭ್ಯಾಸ ಅವಧಿಗೂ ಮಳೆ ಕಾಟ ನೀಡಿತ್ತು.

ಬಿಟ್ಟು ಬಿಡದೇ ಮಳೆ ಆರಂಭವಾದಾಗ ಪಂದ್ಯ ಈಗ ನಡೆಯಬಹುದು ಆ ಮೇಲೆ ನಡೆಯಬಹುದು ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಪಂದ್ಯವು ಮಳೆಯಿಂದ ಪ್ರಭಾವಿತವಾಗಿದ್ದರೆ, ನಿಯಮಗಳ ಪ್ರಕಾರ ಕನಿಷ್ಠ 5-ಓವರ್‌ಗಳ ಪಂದ್ಯದ ಕಟ್-ಆಫ್ ಸಮಯ ನೀಡಲಾಗುತ್ತದೆ. ಕಟ್ ಆಫ್‌ ಸಮಯದ ವರೆಗೂ ಮಳೆ ನಿಲ್ಲದೇ ಇದ್ದಾಗ ಪಂದ್ಯವನ್ನು ರದ್ದುಗೊಳಿಸಲಾಯಿತು.

ಪಂಜಾಬ್‌ಗೆ ಅಗ್ರಸ್ಥಾನ

ಪಂಜಾಬ್‌ ಕಿಂಗ್ಸ್‌ ಆಡಿರುವ 3 ಪಂದ್ಯಗಳಲ್ಲಿ 2 ಗೆಲುವು, 1 ಪಂದ್ಯ ರದ್ದಾಗಿದ್ದು, 5 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ಕೆಕೆಆರ್‌ ಈ ಒಂದು ಅಂಕದ ಮೂಲಕ ಅಂಕ ಪಟ್ಟಿಯಲ್ಲಿ ಕೊಂಚ ಬಡ್ತಿ ಪಡೆದಿದೆ.

Story first published: Tuesday, April 7, 2026, 1:48 [IST]
Other articles published on Apr 7, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+