KKR vs SRH: ಮೊದಲ ಗೆಲುವಿನ ನಗೆ ಬೀರುವುದು ಯಾರು?
19ನೇ ಆವೃತ್ತಿಯ ಐಪಿಎಲ್ ದಿನಕಳೆದಂತೆ ರೋಚಕತೆ ಹೆಚ್ಚಿಸುತ್ತಿದೆ. ಈಗ ಒಂದು ಸುತ್ತಿನ ಪಂದ್ಯಗಳು ಮುಗಿದಿದ್ದು, ಗುರುವಾರ ಎರಡನೇ ಸುತ್ತಿನ ಪಂದ್ಯಗಳಿಗೆ ವೇದಿಕೆ ಸೃಷ್ಟಿಯಾಗಲಿದೆ. ಈ ವೇಳೆ ಪ್ರಸಕ್ತ ಐಪಿಎಲ್‌ನಲ್ಲಿ ಮೊದಲ ಗೆಲುವಿನ ಕನಸು ಕಾಣುತ್ತಿರುವ ಕೋಲ್ಕತ್ತ ನೈಟ್ ರೈಡರ್ಸ್ ( ಕೆಕೆಆರ್) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡಗಳು ಕಾದಾಟ ನಡೆಸಲಿವೆ.
ಕೆಕೆಆರ್ ಹಾಗೂ ಎಸ್‌ಆರ್‌ಎಚ್ ತಂಡಗಳು ತಾವು ಆಡಿರುವ ಮೊದಲ ಪಂದ್ಯದಲ್ಲಿ ಸೋಲು ಕಂಡಿವೆ. ಮುಂಬೈ ಇಂಡಿಯನ್ಸ್ ವಿರುದ್ಧ ನಿರಾಸೆ ಅನುಭವಿಸಿದ್ದ ಕೆಕೆಆರ್ ಹಾಗೂ ಆರ್‌ಸಿಬಿ ವಿರುದ್ಧ ಸೋತ ಎಸ್‌ಆರ್‌ಎಚ್ ತಂಡಗಳ ನಡುವಣ ಕಾದಾಟ ಎಲ್ಲರ ಚಿತ್ತ ಕದ್ದಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಶುಭಾರಂಭ ಮಾಡುವ ಕನಸು ಎರಡೂ ತಂಡದ್ದಾಗಿದೆ. ಉಭಯ ತಂಡಗಳು ಈಗಾಗಲೇ 30 ಬಾರಿ ಐಪಿಎಲ್‌ನಲ್ಲಿ ಮುಖಾಮುಖಿಯಾಗಿದ್ದು, 10 ಪಂದ್ಯಗಳನ್ನು ಎಸ್‌ಆರ್‌ಎಚ್ ಗೆದ್ದುಕೊಂಡಿದ್ದು, ಕೆಕೆಆರ್ 20 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಮುಂಬೈ ಇಂಡಿಯನ್ಸ್ ವಿರುದ್ಧ 220 ರನ್‌ಗಳನ್ನು ಕಲೆ ಹಾಕಿದರೂ ಜಯ ಸಾಧಿಸುವಲ್ಲಿ ವಿಫಲರಾಗಿರುವ ಕೋಲ್ಕತ್ತ ಎಸ್‌ಆರ್‌ಎಚ್ ವಿರುದ್ಧ ಆರ್ಭಟಿಸುವ ಆಸೆ ಹೊಂದಿದೆ. ಕೆಕೆಆರ್ ತಂಡದ ಪರ ಟಾಪ್ ಆರ್ಡರ್‌ನಲ್ಲಿ ಬ್ಯಾಟ್ ಮಾಡುವ ಫಿನ್ ಅಲೆನ್ ಹಾಗೂ ನಾಯಕ ಅಜಿಂಕ್ಯ ರಹಾನೆ ಕಳೆದ ಪಂದ್ಯದಲ್ಲಿ ತಮ್ಮ ಜವಾಬ್ದಾರಿಯನ್ನು ಅರಿತು ಬ್ಯಾಟ್ ಮಾಡಿದ್ದರು. ತವರಿನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಈ ಜೋಡಿ ಇದೇ ಆಟವನ್ನು ಆಡುವ ಅನಿವಾರ್ಯತೆ ಇದೆ.
ಒತ್ತಡದಲ್ಲಿ ಗ್ರೀನ್
ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಕ್ಯಾಮರೂನ್ ಗ್ರೀನ್ ರನ್ ಕಲೆ ಹಾಕಿ ತಂಡಕ್ಕೆ ಆಧಾರವಾಗಬೇಕಿದೆ. ಇವರಿಗೆ ಕೆಕೆಆರ್ ಭಾರೀ ಮೊತ್ತವನ್ನು ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ವಿಕೆಟ್ ಕೀಪರ್ ಬ್ಯಾಟರ್ ಅಂಗ್‌ಕ್ರಿಶ್ ರಘುವಂಶಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ಇವರ ಮೇಲೂ ಎಲ್ಲರ ಕಣ್ಣು ನೆಟ್ಟಿದೆ. ಉಳಿದ ಬ್ಯಾಟರ್‌ಗಳು ತಮ್ಮ ಜವಾಬ್ದಾರಿ ಅರಿತು ಆಡಿದರೆ ಜಯ ಸಾಧ್ಯ.
ವೇಗದ ಬೌಲಿಂಗ್ ವಿಭಾಗವನ್ನು ವೈಭವ್ ಆರೋರಾ, ಬ್ಲೆಸ್ಸಿಂಗ್ ಮುಜರಬಾನಿ, ಕಾರ್ತಿಕ್ ತ್ಯಾಗಿ ವಹಿಸಿಕೊಳ್ಳಲಿದ್ದು ಬಿಗುವಿನ ದಾಳಿ ನಡೆಸುವ ಅನಿವಾರ್ಯತೆ ಇದೆ. ಇನ್ನು ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡಬೇಕಿದೆ. ಅಂದಾಗ ಮಾತ್ರ ಕೆಕೆಆರ್ ಪೂರ್ಣ ಅಂಕ ಕಲೆ ಹಾಕುವ ಆಸೆ ಫಲಿಸುತ್ತದೆ.
ಇಶಾನ್ ಆಕರ್ಷಣೆ
ಸನ್‌ರೈಸರ್ಸ್ ತಂಡದ ಆರಂಭಿಕ ಆಟಗಾರರಾ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಜೋಡಿ ಮೊದಲ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ರನ್ ಬರ ಅನುಭವಿಸಿತ್ತು. ಇವರು ಸ್ಥಿರ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ. ಇನ್ನು ಹಂಗಾಮಿ ನಾಯಕ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದರು. ಅಲ್ಲದೆ ಯುವ ಆಟಗಾರ ಅನಿಕೇತ್ ವರ್ಮಾ ಸಹ ತಮ್ಮ ಜವಾಬ್ದಾರಿ ಅರಿತು ಬ್ಯಾಟ್ ಮಾಡಿದ್ದರು. ಉಳಿದ ಬ್ಯಾಟರ್‌ಗಳು ನೆಲಕಚ್ಚಿನಿಂತು ಬ್ಯಾಟ್ ಮಾಡುವ ಅನಿವಾರ್ಯತೆ ಇದೆ.

ಎಸ್‌ಆರ್‌ಎಚ್ ತಂಡದಲ್ಲಿ ನಿತೀಶ್ ಕುಮಾರ್ ರೆಡ್ಡಿ, ಜಯ್‌ದೇವ್ ಉನಾದ್ಕಟ್, ಡೇವಿಡ್ ಪೇನ್, ಹರ್ಷಲ್ ಪಟೇಲ್ ಅವತಂಹ ಬೌಲರ್‌ಗಳು ಶಿಸ್ತು ಬದ್ಧ ದಾಳಿಯನ್ನು ನಡೆಸಿದರೆ ಮಾತ್ರ ಗೆಲುವಿನ ಕನಸು ಫಲಿಸುತ್ತದೆ.
ಪಂದ್ಯದ ಸಮಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೋ ಹಾಟ್ ಸ್ಟಾರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications