Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಅಂಕಪಟ್ಟಿಯಲ್ಲಿ RCB ಯಾವ ಸ್ಥಾನದಲ್ಲಿದೆ? ಆರೆಂಜ್‌, ಪರ್ಪಲ್‌ ಕ್ಯಾಪ್‌ ಬಗ್ಗೆ ಮಾಹಿತಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಿದೆ. 10 ತಂಡಗಳು ಸಹ ತಲಾ ಒಂದೊಂದು ಪಂದ್ಯವನ್ನು ಆಡಿವೆ. ಐದು ತಂಡಗಳು ಶುಭಾರಂಭ ಮಾಡಿದರೆ, ಇನ್ನು ಐದು ತಂಡಗಳು ಗೆಲುವಿನ ಆರಂಭವನ್ನು ಪಡೆಯಲು ಪ್ಲ್ಯಾನ್ ಮಾಡಿಕೊಂಡಿವೆ. ಈ ವೇಳೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ. ಆರೆಂಜ್‌ ಹಾಗೂ ಪರ್ಪಲ್‌ ಕ್ಯಾಪ್‌ ರೇಸ್‌ನಲ್ಲಿ ಯಾರು ಮುಂದಿದ್ದಾರೆ ಎಂಬ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಗುರುವಾರ ಐಪಿಎಲ್‌ ಲೀಗ್‌ ಹಂತದಲ್ಲಿ ತಂಡಗಳು ಎರಡನೇ ಪಂದ್ಯವನ್ನು ಆಡಲಿವೆ. ಇದಕ್ಕೂ ಮುನ್ನ ಸದ್ಯ ಯಾವ ತಂಡ ಅಂಕ ಪಟ್ಟಿಯಲ್ಲಿ ಯಾವ ಸ್ಥಾನದಲ್ಲಿದೆ. ಎಂಬ ಕುತೂಹಲ ಇರುವುದು ಸಹಜ ಅದಕ್ಕೆ ಉತ್ತರ ಇಲ್ಲಿದೆ.

IPL 2026

ರಾಜಸ್ಥಾನ ರಾಯಲ್ಸ್‌, ರಾಯಲ್ ಚಾಲೆಂಜರ್ಸ್‌ ಬೆಂಗಳೂರ (ಆರ್‌ಸಿಬಿ), ಡೆಲ್ಲಿ ಕ್ಯಾಪಿಟಲ್ಸ್‌ (ಡಿಸಿ), ಮುಂಬೈ ಇಂಡಿಯನ್ಸ್‌, ಪಂಜಾಬ್ ಕಿಂಗ್ಸ್‌ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿವೆ. ಆದರೆ ರನ್‌ ರೇಟ್‌ ಆಧಾರದಲ್ಲಿ ಕೆಲವು ತಂಡಗಳ ಬಲಾಢ್ಯವಾಗಿದ್ದು ಮುನ್ನಡೆ ಕಾಯ್ದುಕೊಂಡಿವೆ. ಈ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ತಂಡ ರಾಜಸ್ಥಾನ್. ಆರ್‌ಆರ್‌ ತಂಡ ಸಿಎಸ್‌ಕೆ ಯನ್ನು ಮಣಿಸಿ ಅಬ್ಬರಿಸಿದೆ. ಈ ವೇಳೆ ಈ ತಂಡದ ರನ್‌ರೇಟ್‌ 4.171 ಆಗಿದ್ದು ಮೊದಲ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಆರ್‌ಸಿಬಿ (2.907) ಇದೆ. ಡಿಸಿ ಮೂರನೇ ಸ್ಥಾನ, ಮುಂಬೈ ನಾಲ್ಕನೇ ಸ್ಥಾನ, ಪಂಜಾಬ್‌ ಐದನೇ ಸ್ಥಾನದಲ್ಲಿದೆ.

ಮೊದಲ ಗೆಲುವಿನ ಹುಡುಕಾಟ

ಗುಜರಾತ್ ಟೈಟಾನ್ಸ್‌, ಕೋಲ್ಕತ್ತ ನೈಟ್‌ ರೈಡರ್ಸ್, ಲಕ್ನೋ ಸೂಪರ್‌ ಜೈಂಟ್ಸ್‌, ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ತನ್ನ ಮೊದಲ ಗೆಲುವಿನ ಹುಡುಕಾಟದಲ್ಲಿವೆ.

ಆರೆಂಜ್‌ ಕ್ಯಾಪ್‌

ಸದ್ಯ ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ರಯಾನ್‌ ರಿಕಲ್ಟನ್‌ ಮುಂಚೂಣಿಯಲ್ಲಿದ್ದಾರೆ. ಇವರು ಮೊದಲ ಪಂದ್ಯದಲ್ಲಿ 81 ರನ್‌ ಸಿಡಿಸಿದ್ದು ಅಗ್ರ ಸ್ಥಾನದಲ್ಲಿದೆ.

ಗರಿಷ್ಠ ರನ್‌ ಸಾಧಕರು

ರಯಾನ್‌ ರಿಕಲ್ಟನ್‌, ಎಂಐ, 81 ರನ್‌
ಇಶಾನ್‌ ಕಿಶನ್‌, ಎಸ್‌ಆರ್‌ಎಚ್‌, 80 ರನ್‌
ರೋಹಿತ್ ಶರ್ಮಾ, ಎಂಐ, 78 ರನ್‌
ಕೂಪರ್ ಕಾನೋಲಿ, ಪಂಜಾಬ್‌, 72 ರನ್‌
ಸಮೀರ್ ರಿಜ್ವಿ, ಡಿಸಿ, 70 ರನ್‌

ಪರ್ಪಲ್‌ ಕ್ಯಾಪ್‌

ಪರ್ಪಲ್‌ ಕ್ಯಾಪ್ ರೇಸ್‌ನಲ್ಲಿ ಆರ್‌ಸಿಬಿ ತಂಡದ ವೇಗಿ ಜೇಕಬ್ ಡಫಿ ಮೊದಲ ಸ್ಥಾನದಲ್ಲಿದ್ದಾರೆ. ಇವರು ಎಸ್‌ಆರ್‌ಎಚ್‌ ವಿರುದ್ಧದ ಪಂದ್ಯದಲ್ಲಿ ಮೂರು ವಿಕೆಟ್‌ ಪಡೆದು ಬೀಗಿದ್ದಾರೆ.

ಹೆಚ್ಚು ವಿಕೆಟ್‌ ಪಡೆದ ಬೌಲರ್ಸ್‌

ಜೇಕಬ್‌ ಡಫಿ, ಆರ್‌ಸಿಬಿ, 3 ವಿಕೆಟ್‌
ಟಿ ನಟರಾಜನ್‌, ಡಿಸಿ, 3 ವಿಕೆಟ್‌
ಪ್ರಸಿದ್ಧ್ ಕೃಷ್ಣ, ಜಿಟಿ, 3 ವಿಕೆಟ್‌
ಲುಂಗಿ ಎನ್‌ಗಿಡಿ, ಡಿಸಿ, 3 ವಿಕೆಟ್
ವಿಜಯ್‌ ಕುಮಾರ್ ವೈಶಾಕ್‌, ಪಂಜಾಬ್‌, 3

Story first published: Thursday, April 2, 2026, 10:04 [IST]
Other articles published on Apr 2, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+