IPL 2026: ಐಪಿಎಲ್ ಲೀಗ್ ಹಂತಕ್ಕೆ ಭಾನುವಾರ ತೆರೆ: 4ನೇ ಸ್ಥಾನಕ್ಕಾಗಿ ಕೆಕೆಆರ್, ರಾಜಸ್ಥಾನ್ ಫೈಟ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಲೀಗ್ ಹಂತದ ಪಂದ್ಯಗಳು ಭಾನುವಾರ ಮುಕ್ತಾಯವಾಗಲಿವೆ. ಸೂಪರ್ ಸಂಡೇಯ ಮಜಾವನ್ನು ಹೆಚ್ಚಿಸಲು ಡಬಲ್ ಡೆಕ್ಕರ್ ಪಂದ್ಯಗಳು ಸಿದ್ಧವಾಗಿವೆ. ಐಪಿಎಲ್ ರೋಚಕತೆ ಲೀಗ್ ಹಂತದ ಕೊನೆಯ ದಿನದ ವರೆಗೂ ಕಾಯ್ದುಕೊಂಡಿದೆ. ಭಾನುವಾರ ನಡೆಯುವ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಪ್ಲೇ ಆಫ್‌ಗೆ ಅವಕಾಶವನ್ನು ಪಡೆಯುವ ತಂಡ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.
ಭಾನುವಾರ ಮೊದಲ ಪಂದ್ಯ ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಕಾದಾಟವನ್ನು ನಡೆಸಲಿವೆ. ಈ ಪಂದ್ಯದಲ್ಲಿ ರಾಯಲ್ಸ್ ಗೆಲುವು ದಾಖಲಿಸಿದರೆ, ನೇರವಾಗಿ ಪ್ಲೇ ಆಫ್ ಪ್ರವೇಶಿಸುತ್ತದೆ. ಇನ್ನು ಮುಂಬೈ ಈಗಾಗಲೇ ಲೀಗ್ ಹಂತದಿಂದ ಹೊರ ನಡೆದಿದ್ದು, ಗೌರವಕ್ಕಾಗಿ ಆಡಲಿದೆ.

ವೈಭವ್ ಆಕರ್ಷಣೆ
ಮಧ್ಯಾಹ್ನ ನಡೆಯುವ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಮೇಲೆ ನೆಟ್ಟಿರಲಿವೆ. ಇವರು ಈ ಲೀಗ್‌ನಲ್ಲಿ 50ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಹೊಂದಿದ್ದಾರೆ. ಇವರ ಕಣ್ಣುಗಳು ಕ್ರಿಸ್ ಗೇಲ್ ದಾಖಲೆಯ ಮೇಲೆ ನೆಟ್ಟಿವೆ. ಈ ತಂಡದಲ್ಲಿ ಯಶಸ್ವಿ ಜೈಸ್ವಾಲ್, ಧ್ರುವ್ ಜುರೇಲ್, ರಿಯಾನ್ ಪರಾಗ್ ಅವರಂತಹ ಸ್ಟಾರ್ ಆಟಗಾರರು ಇದ್ದು ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಜೋಫ್ರಾ ಆರ್ಚರ್, ಸಂದೀಪ್ ಶರ್ಮಾ, ಬ್ರಿಜೇಶ್ ಶರ್ಮಾ ಅವರು ಬಿಗುವಿನ ದಾಳಿ ನಡೆಸುವ ಅನಿವಾರ್ಯತೆ ಇದೆ.
ಮುಂಬೈ ತಂಡ ಈಗಾಗಲೇ ಈ ಆವೃತ್ತಿಯಿಂದ ಹೊರ ನಡೆದಿದ್ದು, ಗೌರವಕ್ಕಾಗಿ ಆಡುತ್ತಿದೆ. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಈ ಲೀಗ್‌ನಲ್ಲಿ ಕೊನೆಯ ಬಾರಿಗೆ ಇಳಿಯಲಿದ್ದು, ಭರವಸೆ ಮೂಡಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ವಿಕೆಟ್ ಬೇಟೆ ನಡೆಸಿ ಅಬ್ಬರಿಸುವ ಅನಿವಾರ್ಯತೆ ಇದೆ.
ಎರಡನೇ ಹಾಗೂ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯ ಕೆಕೆಆರ್ ಪಾಲಿಗೆ ಮಹತ್ವದಾಗಿದೆ. ಮೊದಲ ಪಂದ್ಯದಲ್ಲಿ ರಾಯಲ್ಸ್ ಸುಲಭವಾಗಿ ಗೆದ್ದರೆ, ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಖಚಿತ ಪಡಿಸಿಕೊಂಡು ಮುನ್ನಡೆ ಸಾಧಿಸುತ್ತದೆ. ಮುಂಬೈ ಗೆಲುವು ದಾಖಲಿಸಿದರೆ, ಕೆಕೆಆರ್ ಹಾಗೂ ಪಂಜಾಬ್ ಕಿಂಗ್ಸ್ ಆಸೆಗಳು ಓಪನ್ ಆಗುತ್ತವೆ.
ಗೆಲುವಿನ ಒತ್ತಡದಲ್ಲಿ ಕೆಕೆಆರ್
19ನೇ ಆವೃತ್ತಿಯ ಐಪಿಎಲ್ ಆರಂಭದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಕೆಕೆಆರ್ ಲೀಗ್ ಹಂತದ ಕೊನೆಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಈ ತಂಡ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದರೆ ಪ್ಲೇ ಆಫ್ ಲೆಕ್ಕಾಚಾರ ಆರಂಭಿಸುತ್ತದೆ. ಕೆಕೆಆರ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಫಿನ್ ಅಲೆನ್, ಅಜಿಂಕ್ಯ ರಹಾನೆ, ಕಳೆದ ಪಂದ್ಯದ ಹೀರೋ ಮನೀಷ್ ಪಾಂಡೆ, ರಿಂಕು ಸಿಂಗ್ ಸಮಯೋಚಿತ ಬ್ಯಾಟಿಂಗ್ ನಡೆಸಬೇಕಿದೆ. ಇನ್ನು ಕಾರ್ತಿಕ್ ತ್ಯಾಗಿ ವೈಭವ್ ಆರೋರಾ ಬಿಗುವಿನ ವೇಗದ ದಾಳಿ ಸಂಘಟಿಸಬೇಕಿದೆ. ಸ್ಪಿನ್ ಬೌಲರ್‌ಗಳು ಕಳೆದ ಕೆಲವು ಪಂದ್ಯಗಳಿಂದ ಸ್ಥಿರ ಪ್ರದರ್ಶನ ನೀಡುತ್ತಿದ್ದ ತಂಡದ ಮನೋಬಲ ಹೆಚ್ಚಿಸಿದೆ.

ಈ ಆವೃತ್ತಿಯ ಆರಂಭದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ಗೂ ಇದು ಅನೌಪಚಾರಿಕ ಪಂದ್ಯವಾಗಿದೆ. ಡೆಲ್ಲಿ ಸಹ ಪ್ಲೇ ಆಫ್ ಲೆಕ್ಕಾಚಾರ ನಡೆಸುತ್ತಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಅಂತರದ ಗೆಲುವು ದಾಖಲಿಸಿ, ಪಂಜಾಬ್, ರಾಜಸ್ಥಾನ್ ತಂಡಗಳು ಸೋಲು ಕಂಡಲ್ಲಿ ಅಕ್ಷರ್ ಪಟೇಲ್ ಪಡೆಯ ಮುನ್ನಡೆಯ ಕನಸಿಗೆ ರೆಕ್ಕೆ ಬರುತ್ತದೆ. ಸದ್ಯ ಕ್ಯಾಪಿಟಲ್ಸ್ 12 ಅಂಕಗಳನ್ನು ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications