LSG vs DC: ಲುಂಗಿ ಎನ್‌ಗಿಡಿ, ನಟರಾಜನ್ ಬಿಗುವಿನ ದಾಳಿ
ಲಕ್ನೋ: ಭರವಸೆಯ ವೇಗದ ಬೌಲರ್‌ಗಳ ಬಿಗುವಿನ ದಾಳಿಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ 19ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 141 ರನ್‌ಗಳಿಗೆ ಕಟ್ಟಿಹಾಕಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ಪಡೆದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭ ಕಳಪೆಯಾಗಿತ್ತು. ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಇನಿಂಗ್ಸ್ ಆರಂಭಿಸುವ ಜವಾಬ್ದಾರಿಯನ್ನು ಹೊತ್ತುಕೊಂಡ ರಿಷಭ್ ಪಂತ್ ಅವರಿಗೆ ಅದೃಷ್ಟ ಸಾಥ್ ನೀಡಲಿಲ್ಲ. ರಿಷಭ್ ಪಂತ್ ತಂಡದ ಮೊತ್ತ 19 ಆಗಿದ್ದಾಗ ನಾನ್ ಸ್ಟ್ರೈಕ್‌ನಲ್ಲಿ ಇದ್ದರು. ಆಗ ಮಿಚೆಲ್ ಮಾರ್ಷ್ ಪ್ಲೇಡ್ ಮಾಡಿದ ಚೆಂಡು ಮುಕೇಶ್ ಕುಮಾರ್ ಅವರ ಕೈಗೆ ಬಡೆದು ಸ್ಟಂಪ್‌ಗೆ ಮುತ್ತಿಟ್ಟಿತು. ರಿಷಭ್ ಆಗ ಕ್ರೀಸ್‌ನಿಂದ ಹೊರಗಿದ್ದರು. ಹೀಗಾಗಿ ಔಟ್ ಆದರು.

ಈ ಲೀಗ್‌ನಲ್ಲಿ ಇದಕ್ಕೂ ಮೊದಲು ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟ್ ಮಾಡುತ್ತಿದ್ದ ರಿಷಭ್ ಇದೇ ಮೊದಲ ಬಾರಿಗೆ ಆರಂಭಿಕರಾಗಿ ಕಣಕ್ಕೆ ಇಳಿದರು. ಆದರೂ ಸಹ ಇವರು ಬಿಗ್ ಇನಿಂಗ್ಸ್ ಕಟ್ಟುವ ಆಸೆ ನುಚ್ಚುನೂರಾಯಿತು.
ಭರ್ಜರಿ ಫಾರ್ಮ್‌ನಲ್ಲಿರುವ ಏಡನ್ ಮಾರ್ಕ್ರಾಮ್ ಅವರು ಕೇವಲ 11 ರನ್‌ಗಳಿಗೆ ಆಟ ಮುಗಿಸಿದರು. ಭರವಸೆಯ ಬ್ಯಾಟರ್‌ಗಳಾದ ಆಯುಷ್ ಬದೋನಿ (0), ನಿಕೋಲಸ್ ಪೂರನ್ (8) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಈ ವರೆಗೆ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಮಿಚೆಲ್ ಮಾರ್ಷ್ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ 35 ರನ್ ಸಿಡಿಸಿ ಕುಲ್‌ದೀಪ್ ಯಾದವ್ ಅವರಿಗೆ ವಿಕೆಟ್ ಒಪ್ಪಿಸಿದರು.
ಬೌಲರ್‌ಗಳ ಮಿಂಚು
ಮಧ್ಯಮ ಕ್ರಮಾಂಕದಲ್ಲಿ ಅಬ್ದುಲ್ ಸಮದ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಇವರು 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 36 ರನ್ ಬಾರಿಸಿ ಟಿ ನಟರಾಜ್ ಎಸೆತದಲ್ಲಿ ಲಾಂಗ್ ಆಫ್‌ನಲ್ಲಿ ಮಿಲ್ಲರ್‌ಗೆ ಕ್ಯಾಚ್ ನೀಡಿದರು. ಉಳಿದ ಬ್ಯಾಟರ್‌ಗಳು ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. ಅಂತಿಮವಾಗಿ ಎಲ್‌ಎಸ್‌ಜಿ 18.4 ಓವರ್‌ಗಳಲ್ಲಿ 141 ರನ್‌ಗಳಿಗೆ ಆಲೌಟ್ ಆಯಿತು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಲುಂಗಿ ಎನ್‌ಗಿಡಿ ಬಿಗುವಿನ ದಾಳಿ ನಡೆಸಿ 27 ರನ್ ನೀಡಿ 3 ವಿಕೆಟ್ ಕಬಳಿಸಿದರು. ಟಿ ನಟರಾಜನ್ ಸಹ 3, ಕುಲ್‌ದೀಪ್ ಯಾದವ್ 2 ವಿಕೆಟ್ ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications