Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಈ ಆಸೀಸ್‌ ಪ್ಲೇಯರ್‌ 4 ಪಂದ್ಯ ಆಡಲು ಮಾತ್ರ ಲಭ್ಯ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ನಡೆಯುತ್ತಿದೆ. ಈ ಸರಣಿಯ ಬಳಿಕ ಉಭಯ ತಂಡಗಳು ನಡುವೆ ಟಿ20 ಸರಣಿ ಆಡಲಾಗುತ್ತದೆ. ಇದೇ ವೇಳೆ ಐಪಿಎಲ್‌ 2026ರ ಮಿನಿ ಹರಾಜು ಸಹ ನಡೆಯಲಿದೆ. ಐಪಿಎಲ್‌ ಹರಾಜಿಗೆ 1355 ಆಟಗಾರರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ಧಾರೆ. ಈ ಬಾರಿಯ ಹರಾಜು ಡಿಸೆಂಬರ್ 16 ರಂದು ಅಬುದಾಬಿಯಲ್ಲಿ ನಡೆಯಲಿದೆ. ಈಗಾಗಲೇ ಹರಾಜಿನಲ್ಲಿ ನೊಂದಾಯಿಸಿಕೊಂಡ 40 ಆಟಗಾರರ ಮೂಲ ಬೆಲೆ 2 ಕೋಟಿ ಆಗಿದೆ. ಈ ಹರಾಜಿನಲ್ಲಿ ಹೆಸರನ್ನು ನೊಂದಾಯಿಸಿಕೊಂಡಿರುವ ಆಸ್ಟ್ರೇಲಿಯಾದ ಬ್ಯಾಟರ್‌ ಒಬ್ಬರು ಕೇವಲ ನಾಲ್ಕು ಪಂದ್ಯಗಳಿಗೆ ಮಾತ್ರ ಲಭ್ಯರಿರುವಾಗಿ ಹೇಳಿದ್ಧಾರೆ.

ಈಗಾಗಲೇ ಹರಾಜಿಗೆ ಹೆಸರು ನೊಂದಾಯಿಸಿಕೊಂಡ ಆಸ್ಟ್ರೇಲಿಯಾದ ವಿಕೆಟ್‌ ಕೀಪರ್ ಬ್ಯಾಟರ್ ಜೋಶ್‌ ಇಂಗ್ಲಿಷ್‌ ಕೇವಲ ನಾಲ್ಕು ಪಂದ್ಯಗಳಿಗೆ ಮಾತ್ರ ಲಭ್ಯರಿರುವುದಾಗಿ ತಿಳಿಸಿದ್ದಾರೆ. ಇವರು ತಮ್ಮ ಮೂಲ ಬೆಲೆಯನ್ನು 2 ಕೋಟಿ ಎಂದು ಹರಾಜಿನಲ್ಲಿ ನೊಂದಾಯಿಸಿಕೊಂಡಿದ್ದಾರೆ. ಈಗಾಗಲೇ ಜೋಶ್‌ ಇಂಗ್ಲಿಷ್‌ ತಮ್ಮ ಲಭ್ಯತೆಯ ಬಗ್ಗೆ ಬಿಸಿಸಿಐಗೆ ಅಪ್‌ಡೇಟ್‌ ನೀಡಿದ್ದಾರೆ ಎಂದು ಕ್ರಿಕ್‌ಬಜ್‌ ವರದಿ ಮಾಡಿದೆ. ಇವರು ಕೇವಲ ನಾಲ್ಕು ಪಂದ್ಯಗಳಿಗೆ ಮಾತ್ರ ಲಭ್ಯರಿರುವುದಾಗಿ ಬಿಸಿಸಿಐಗೆ ತಿಳಿಸಿದ್ದಾರೆ. ಇದರ ಹೊರತಾಗಿಯೂ, ಅವರು ತಮ್ಮ ಮೂಲ ಬೆಲೆಯನ್ನು ₹2 ಕೋಟಿ ಎಂದು ತಿಳಿಸಿದ್ದಾರೆ.

IPL 2026 Mega Auction Star Aussie Batter Josh Inglis Available for Only 4 Matches Due to Wedding

ನಾಲ್ಕೇ ಪಂದ್ಯ ಆಡುವುದು ಏಕೆ?

ಜೋಶ್‌ ಇಂಗ್ಲೀಷ್‌ ಟಾಪ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಮಾಡಬಲ್ಲ ಪ್ಲೇಯರ್. ಇವರು ತಮ್ಮ ಬಿರುಸಿನ ಬ್ಯಾಟಿಂಗ್ ನೆರವಿನಿಂದ ತಂಡಕ್ಕೆ ಆಧಾರವಾದರ ಆಟಗಾರ. ಇವರ ಅಬ್ಬರದ ಆಟದ ಪರಿಣಾಮವೇ ಕಳೆದ ಬಾರಿ ಪಂಜಾಬ್ ಕಿಂಗ್ಸ್‌ ತಂಡ ಫೈನಲ್‌ಗೆ ಅರ್ಹತೆ ಪಡೆದಿತ್ತು. ಆದರೆ ಇವರು ಈ ಬಾರಿ ಕೇವಲ 4 ಪಂದ್ಯಗಳಿಗೆ ಲಭ್ಯರಿರುವುದಾಗಿ ತಿಳಿಸಿದ್ದಾರೆ. ಇದಕ್ಕೇ ಕಾರಣ ಏನು ಎಂಬುದ ಸಹ ತಿಳಿದು ಬಂದಿದೆ.

30 ವರ್ಷದ ವಿಕೆಟ್‌ ಕೀಪರ್ ಬ್ಯಾಟರ್ ಜೋಶ್‌ ಇಂಗ್ಲಿಷ್‌ ಮದುವೆ ಆಗಲಿದ್ದಾರೆ. ಹೀಗಾಗಿ ಮುಂದಿನ ಬಾರಿಯ ಐಪಿಎಲ್‌ಗೆ ಸಂಪೂರ್ಣ ಲಭ್ಯರಿರುವುದಿಲ್ಲ ಎಂದು ತಿಳಿದು ಬಂದಿದೆ. ಜೋಶ್‌ ಇಂಗ್ಲೀಷ್‌ ಕಳೆದ ಆವೃತ್ತಿಯಲ್ಲಿ ಆಡಿದ 11 ಪಂದ್ಯಗಳಲ್ಲಿ 1 ಅರ್ಧಶತಕದ ನೆರವಿನಿಂದ 278 ರನ್‌ ಸಿಡಿಸಿದ್ದರು. ಈ ವೇಳೆ ಇವರ ಸ್ಟ್ರೈಕ್‌ ರೇಟ್‌ 162.57 ಇದೆ. ಹೀಗಾಗಿ ಇವರನ್ನು ಕೊಳ್ಳಲು ಈ ಬಾರಿ ಹರಾಜಿನಲ್ಲಿ ಮಾಲೀಕರು ಹಣದ ಹೊಳೆ ಹರಿಸಬಹುದಿತ್ತು. ಆದರೆ ಇವರು ಈಗ ಕೇವಲ 4 ಪಂದ್ಯಗಳಿಗೆ ಮಾತ್ರ ಲಭ್ಯರಿರುವುದರಿಂದ ಇವರಿಗೆ ಯಾರು ಕೊಳ್ಳುತ್ತಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

Story first published: Friday, December 5, 2025, 21:17 [IST]
Other articles published on Dec 5, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+