IPL 2026: ಸೋಲಿನ ನೋವಿನ ಮಧ್ಯೆ ಹಾರ್ದಿಕ್‌ಗೆ ದಂಡದ ಬರೆ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರೋಚಕ ಘಟ್ಟದತ್ತ ಮುಖ ಮಾಡಿದೆ. ಬುಧವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೋಲನ್ನು ಕಂಡಿತು. ಈ ಸೋಲಿನ ಕಹಿಯನ್ನು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ನೆನಪು ಹಾರುವ ಮುನ್ನವೇ ಮತ್ತೊಂದು ಪೆಟ್ಟು ಬಿದ್ದಿದೆ.
ಐಪಿಎಲ್ ಸಮಯದಲ್ಲಿ ನಾಯಕರಿಗೆ ಪೆಟ್ಟು, ದಂಡ ಬಿದ್ದಾಗ ಎಲ್ಲರ ತಲೆಯಲ್ಲಿ ನಿಧಾನಗತಿಯ ಓವರ್ ಎಸೆದಿದ್ದಾಕ್ಕಾಗಿ ದಂಡ ವಿಧಿಸಲಾಗಿದೆ ಎಂದು ಬರುತ್ತದೆ. ಆದರೆ ನೀವು ಊಹಿಸಿದ್ದು ತಪ್ಪಾಗಿದೆ. ಪಂದ್ಯದ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಅವರು ಮಾಡಬಾರದ ಕೆಲಸವನ್ನು ಮಾಡಿದರು.

ದಂಡ ಹಾಕಲು ಕಾರಣ ಏನು?
ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಆತಿಥೇಯ ಕೆಕೆಆರ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 147 ರನ್ ಸೇರಿಸಿತು. ಗುರಿಯನ್ನು ಬೆನ್ನಟ್ಟಿದ ಕೆಕೆಆರ್ 18.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಕಲೆ ಹಾಕಿ ಜಯ ಸಾಧಿಸಿತು. ಈ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಇನಿಂಗ್ಸ್‌ನ 10ನೇ ಓವರ್ ಮಾಡಿದರು.
ಹಾರ್ದಿಕ್ ಪಾಂಡ್ಯ 10ನೇ ಓವರ್ ಬೌಲಿಂಗ್ ಮಾಡಲು ಮುಂದಾದರು. ಈ ವೇಳೆ ಓವರ್‌ನ ಎರಡನೇ ಎಸೆತವನ್ನು ರೋವ್‌ಮನ್ ಪೋವೆಲ್‌ಗೆ ಎಸೆದ ಎಸೆತವನ್ನು ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್ ಬೌಂಡರಿಯತ್ತ ಬಿಗ್ ಹಿಟ್ ಬಾರಿಸಿದರು. ಈ ಕ್ಷೇತ್ರದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ದೀಪಕ್ ಚಾಹರ್ ಹಾಗೂ ರಾಬಿನ್ ಮಿಂಜ್ ಸಮನ್ವಯದ ಕೊರತೆಯಿಂದಾಗಿ ಕ್ಯಾಚ್ ಕೈ ಬಿಟ್ಟರು. ಇದೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಕೈಯಿಂದ ಬೇಲ್ಸ್ ಕೆಡವಿದರು. ಇದರಿಂದ ಇವರು ದಂಡಗೆ ಒಳಗಾಗಿದ್ದಾರೆ.
ಹಾರ್ದಿಕ್ ಪಾಂಡ್ಯ ಮಾಡಿದ ತಪ್ಪೇನು?
ಪಂದ್ಯದ ಸಮಯದಲ್ಲಿ ಕ್ರಿಕೆಟ್ ಉಪಕರಣಗಳು ಅಥವಾ ಬಟ್ಟೆ, ನೆಲದ ಉಪಕರಣಗಳು ಮತ್ತಿತರ ದುರುಪಯೋಗಕ್ಕೆ ಸಂಬಂಧಿಸಿದ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ಅನ್ನು ಹಾರ್ದಿಕ್ ಪಾಂಡ್ಯ ಉಲ್ಲಂಘಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಅವರಿಗೆ ಪಂದ್ಯ ಶುಲ್ಕದ 10 ಪ್ರತಿಶತ ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ ಎಂದು ಐಪಿಎಲ್ ಹೇಳಿಕೆ ನೀಡಿದೆ.

ಬೆನ್ನು ನೋವಿನಿಂದ ಹಾರ್ದಿಕ್ ಪಾಂಡ್ಯ ಕೆಲವು ಪಂದ್ಯಗಳಿಂದ ಅಲಭ್ಯರಾಗಿದ್ದರು. ಇವರು ಮೈದಾನಕ್ಕೆ ಮರಳಿದ ಬಳಿಕವೂ ಇವರ ಪ್ರದರ್ಶನದಲ್ಲಿ ಸ್ಥಿರತೆ ಕಾಣಲಿಲ್ಲ. ಇವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಆಧಾರವಾಗಲಿಲ್ಲ. ಈ ಪಂದ್ಯದಲ್ಲಿ, ಹಾರ್ದಿಕ್ ಪಾಂಡ್ಯ 27 ಎಸೆತಗಳಲ್ಲಿ 26 ರನ್‌ಗಳ ಸಣ್ಣ ಇನ್ನಿಂಗ್ಸ್ ಕಟ್ಟಿದರು, ಅಲ್ಲದೆ ಎರಡು ಓವರ್‌ಗಳಲ್ಲಿ 13 ರನ್‌ಗಳನ್ನು ನೀಡಿ, ವಿಕೆಟ್ ಪಡೆಯುವಲ್ಲಿ ವಿಫಲರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications