IPL 2026 Mini Auction: 1,355 ಆಟಗಾರರ ಹೆಸರು ನೊಂದಣೆ: 77 ಸ್ಲಾಟ್‌ಗಳಿಗಾಗಿ ಮಹಾಸಂಗ್ರಾಮ
ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಹರಾಜಿಗೆ ದಿನಗಣನೆ ಆರಂಭವಾಗಿದೆ. ಈ ಬಾರಿ ಮಿನಿ ಹರಾಜು ಡಿಸೆಂಬರ್ 16 ರಂದು ನಡೆಯಲಿದೆ. ಮಿನಿ ಹರಾಜಿನಲ್ಲಿ ಸುಮಾರು 1355 ಆಟಗಾರರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ವಿಶ್ವದ ಶ್ರೇಷ್ಠ ಆಟಗಾರರಿಂದ ಹಿಡಿದು, ದೇಶೀಯ ಟೂರ್ನಿಯಲ್ಲಿ ಅಬ್ಬರ ನಡೆಸಿರುವ ಆಟಗಾರರು ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಐಪಿಎಲ್ 2026 ರ ಮಿನಿ ಹರಾಜು ಡಿಸೆಂಬರ್ 26 ರಂದು ನಡೆಯಲಿದೆ. ಈ ಮಿನಿ ಹರಾಜಿನ ಕುರಿತು ಪ್ರಮುಖ ಅಪ್‌ಡೇಟ್ ಹೊರಬಿದ್ದಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಒಟ್ಟು 1,355 ಆಟಗಾರರು ಈ ಮಿನಿ ಹರಾಜಿಗೆ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ವೆಂಕಟೇಶ್ ಅಯ್ಯರ್, ಕ್ಯಾಮರೂನ್ ಗ್ರೀನ್, ಮಾಯಾಂಕ್ ಅಗರ್‌ವಾಲ್ ಮತ್ತು ಪೃಥ್ವಿ ಶಾ ಅವರಂತಹ ಕೆಲವು ಪ್ರಮುಖ ಆಟಗಾರರು ಸೇರಿದ್ದಾರೆ.

ಡಿಸೆಂಬರ್ 16 ರಂದು ನಡೆಯಲಿರುವ ಮಿನಿ ಹರಾಜಿನಲ್ಲಿ ಹಲವು ಸ್ಟಾರ್ ಆಟಗಾರರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಮಯಾಂಕ್ ಅಗರ್‌ವಾಲ್, ಕೆಎಸ್ ಭರತ್, ರವಿ ಬಿಷ್ಣೋಯಿ, ಆಕಾಶ್ ದೀಪ್, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಸರ್ಫರಾಜ್ ಖಾನ್, ಶಿವಂ ಮಾವಿ, ನವದೀಪ್ ಸೈನಿ, ಚೇತನ್ ಸಕಾರಿಯಾ, ರಾಹುಲ್ ತ್ರಿಪಾಠಿ, ಉಮೇಶ್ ಯಾದವ್ ಸೇರಿದಂತೆ ದೇಶದ ಸ್ಟಾರ್ ಆಟಗಾರರು ಸೇರಿದ್ದಾರೆ.
ಹರಾಜಿನಲ್ಲಿ 14 ದೇಶದ ಆಟಗಾರರು
ಹರಾಜಿಗೆ ನೊಂದಾಯಿಸಿಕೊಂಡ 1355 ಆಟಗಾರರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರರು ಸೇರಿದ್ದಾರೆ. ಆಸೀಸ್ ತಂಡದ ಪರ ಕ್ಯಾಮರೂನ್ ಗ್ರೀನ್, ಮ್ಯಾಥ್ಯೂ ಶಾರ್ಟ್, ಸ್ಟೀವನ್ ಸ್ಮಿತ್, ಜೋಶ್ ಇಂಗ್ಲಿಷ್ ಹರಾಜಿನಲ್ಲಿ ಪ್ರಮುಖ ಆಕರ್ಷಣೆ ಆಗಿದ್ದಾರೆ. ಇಂಗ್ಲೆಂಡ್ ತಂಡದ ಪರ ಜೇಮಿ ಸ್ಮಿತ್, ಜಾನಿ ಬೇರ್‌ಸ್ಟೋ, ನ್ಯೂಜಿಲೆಂಡ್ ತಂಡದ ರಚಿನ್ ರವೀಂದ್ರ, ಶ್ರೀಲಂಕಾ ತಂಡದ ವನಿಂದು ಹಸರಂಗ, ಮತೀಶ್ ಪತಿರಾಣ ಅವರುಗಳ ಹೆಸರುಗಳು ಸಹ ಸೇರಿವೆ.
ವರದಿಗಳ ಪ್ರಕಾರ ಕೇವಲ ಇಬ್ಬರು ಭಾರತೀಯ ಆಟಗಾರರ ಮೂಲ ಬೆಲೆ 2 ಕೋಟಿ ಆಗಿದೆ ಎಂದು ತಿಳಿದು ಬಂದಿದ್ದು, ಇದರಲ್ಲಿ ಸ್ಪಿನ್ ಬೌಲರ್ ರವಿ ಬಿಷ್ಣೋಯಿ, ವೆಂಕಟೇಶ್ ಅಯ್ಯರ್ ಸೇರಿದ್ದಾರೆ. ವಿದೇಶಿ ಆಟಗಾರರ ಪೈಕಿ ಸ್ಟೀವನ್ ಸ್ಮಿತ್, ಜೇಮಿ ಸ್ಮಿತ್, ಮುಜಿಬ್ ಉರ್ ರೆಹಮಾನ್, ನವಿನ್ ಉಲ್ ಹಕ್, ಸೀನ್ ಅಬೋಟ್, ಅಸ್ಟನ್ ಅಗರ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಮುಷ್ತಾಫಿಜುರ್ ರಹಮಾನ್, ಟಾಮ್ ಕರನ್, ಬೆನ್ ಡಕೆಟ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇರಿಲ್ ಮಿಚೆಲ್, ರಚಿನ್ ರವೀಂದ್ರಾ, ಲುಂಗಿ ಎನ್‌ಗಿಡಿ, ಮಹೇಶ್ ತೀಕ್ಷಣ, ಹಸರಂಗ ಅವರ ಮೂಲ ಬೆಲೆ 2 ಕೋಟಿ ರೂ. ಎಂದು ಕ್ರಿಕ್‌ಬಜ್ ವರದಿ ಮಾಡಿದೆ.

ಮಿನಿ ಹರಾಜಿಗೆ ಒಟ್ಟು 14 ದೇಶದ ಆಟಗಾರರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ಬಾಂಗ್ಲಾದೇಶ, ಐರ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಜಿಂಬಾಬ್ವೆ, ನೆದರ್ಲ್ಯಾಂಡ್ಸ್, ಸ್ಕಾಟ್ಲೆಂಡ್ ಮತ್ತು ಯುಎಸ್ಎ ದೇಶಗಳ ಆಟಗಾರರು ಸೇರಿದ್ದಾರೆ.
77 ಸ್ಥಾನಗಳಿಗೆ ಆಟಗಾರರ ಹುಡುಕಾಟ
ಆಟಗಾರರ ರಿಟೇನ್ಷನ್ ಲೀಸ್ಟ್ ನೀಡಲು ನವೆಂಬರ್ 15 ಕೊನೆಯ ದಿನವಾಗಿತ್ತು. 10 ಮಾಲೀಕರು ಸೇರಿ ಹರಾಜಿನಲ್ಲಿ ಒಟ್ಟು 237.55 ಕೋಟಿ ರೂ.ಗಳನ್ನು ಹರಾಜಿನಲ್ಲಿ ಹೂಡಲಿದ್ದಾರೆ. ಅಬುದಾಬಿಯಲ್ಲಿ ನಡೆಯಲಿರುವ ಮಿನಿ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 64.30 ಕೋಟಿ ರೂ.ಗಳೊಂದಿಗೆ ಕಣಕ್ಕೆ ಇಳಿಯಲಿದೆ. ಸಿಎಸ್‌ಕೆ 43.40 ಕೋಟಿ ರೂ.ಗಳನ್ನು ಹೊಂದಿದೆ. ಒಟ್ಟು 77 ಸ್ಥಾನಗಳಿಗೆ ಹರಾಜು ನಡೆಯಲಿದ್ದು, 31 ವಿದೇಶಿ ಆಟಗಾರರು ಸ್ಥಾನ ಪಡೆಯಲು ಸಿದ್ಧರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications