IPL 2026: 19ನೇ ಆವೃತ್ತಿ ಮಾರ್ಚ್ 26 ರಿಂದ ಮೇ 31 ರವರೆಗೆ ಸಾಧ್ಯತೆ
ಅಬುದಾಭಿಯಲ್ಲಿ ಮಂಗಳವಾರ (ಡಿ.16) ಐಪಿಎಲ್ 2026ರ ಮಿನಿ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ 10 ತಂಡಗಳು ತಮ್ಮ ತಂಡಗಳಿಗೆ ಅಗತ್ಯ ಇರುವ ಸ್ಟಾರ್ ಆಟಗಾರರ ಹುಡುಕಾಟ ನಡೆಸಲಿದ್ದಾರೆ. 77 ಸ್ಥಾನಕ್ಕಾಗಿ 369 ಆಟಗಾರರು ಹರಾಜು ಅಂಗಳ ಪ್ರವೇಶಿಸಲಿದ್ದಾರೆ. ಈ ಹರಾಜಿಗೆ ಒಂದು ದಿನದ ಮುನ್ನ ಬಿಸಿಸಿಐ 19ನೇ ಆವೃತ್ತಿಯ ಐಪಿಎಲ್‌ನ ದಿನಾಂಕದ ಮಾಹಿತಿ ಸಿಕ್ಕಿದೆ. ಈ ಬಾರಿಯ ಐಪಿಎಲ್ ಮಾರ್ಚ್ 26 ರಿಂದ ಆರಂಭವಾಗಿ ಮೇ 31ರ ವರೆಗೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಐಪಿಎಲ್ ಮಿನಿ ಹರಾಜಿಗೂ ಮುನ್ನ ನಡೆದ ಸಭೆಯಲ್ಲಿ ಐಪಿಎಲ್ ಮಾಲೀಕರಿಗೆ ಈ ಮಾಹಿತಿಯನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ ಬಾರಿಯ ಐಪಿಎಲ್ ಮಾರ್ಚ್ 26 ರಿಂದ ಮೇ 31ರ ವರೆಗೆ ನಡೆಯಲಿದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಮಂಗಳವಾರ ನಡೆಯಲಿರುವ ಹರಾಜಿನ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಲೀಗ್ ಸಿಇಒ ಹೇಮಾಂಗ್ ಅಮೀನ್ ಅವರು ಐಪಿಎಲ್ ಸೀಸನ್ 19 ರ ದಿನಾಂಕಗಳನ್ನು ಘೋಷಿಸಿದರು ಎಂದು ತಿಳಿದು ಬಂದಿದೆ. ಸಂಪ್ರದಾಯದ ಅನುಸಾರವಾಗಿ ಹಾಲಿ ಚಾಂಪಿಯನ್ ತವರಿನಲ್ಲಿ ಮೊದಲ ಪಂದ್ಯ ನಡೆಯಲಿದೆ.

ಹರಾಜಿನ ಅಂಗಳಕ್ಕೆ ಎಂಟ್ರಿ ನೀಡುವ ಆಟಗಾರರ ಸಂಖ್ಯೆಯಲ್ಲಿ ಏರಿಕೆ ಆಗಿದೆ. ಈ ಮೊದಲು 350 ಆಟಗಾರರು ಅಖಾಡ ಪ್ರವೇಶಿಸಲಿದ್ದಾರೆ ಎಂದಾಗಿತ್ತು. ಆದರೆ ಈಗ ಇನ್ನು 19 ಆಟಗಾರರನ್ನು ಪಟ್ಟಿಗೆ ಸೇರಿಸಲಾಗಿದೆ. ಹರಾಜು ಪಟ್ಟಿಗೆ ಸೇರಿದ ಆಟಗಾರರಲ್ಲಿ ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಅಭಿಮನ್ಯು ಈಶ್ವರನ್, ಮಣಿಶಂಕರ್ ಮುರಾ ಸಿಂಗ್, ವಿರಂದೀಪ್ ಸಿಂಗ್, ಚಾಮಾ ಮಿಲಿಂದ್, ಕೆಎಲ್ ಶ್ರೀಜಿತ್, ಎಥನ್ ಬಾಷ್, ಕ್ರಿಸ್ ಗ್ರೀನ್, ಸ್ವಸ್ತಿಕ್ ಚಿಕಾರಾ ಸೇರಿದ್ದಾರೆ.
ಈ ಬಾರಿಯ ಐಪಿಎಲ್ ಹಾಗೂ ಪಾಕಿಸ್ತಾನ ಸೂಪರ್ ಲೀಗ್ ಎರಡೂ ಲೀಗ್‌ಗಳು ಒಂದೇ ದಿನ ಆರಂಭವಾಗುವ ಸಾಧ್ಯತೆ ಇದೆ. ಕಳೆದ ವರ್ಷವೂ ಇದೇ ರೀತಿಯ ಸನ್ನಿವೇಶವು ನಿರ್ಮಾಣವಾಗಿತ್ತು. ಆದರೆ ಉಭಯ ಲೀಗ್‌ಗಳು ಇದೇ ಮೊದಲ ಬಾರಿಗೆ ಒಂದೇ ದಿನ ಆರಂಭವಾಗಬಹುದು ಎಂದು ತಿಳಿದು ಬಂದಿದೆ.
40 ಆಟಗಾರರ ಮೂಲ ಬೆಲೆ 2 ಕೋಟಿ
ಈ ಬಾರಿಯ ಹರಾಜಿನಲ್ಲಿ ₹2 ಕೋಟಿ ಮೂಲ ಬೆಲೆಯ 40 ಆಟಗಾರರು ಅಖಾಡ ಪ್ರವೇಶಿಸಲಿದ್ದಾರೆ. ಇನ್ನು ₹1.50 ಕೋಟಿಯ 9 ಆಟಗಾರರು, ₹1.25 ಕೋಟಿಯ 4 ಆಟಗಾರರು, ₹1 ಕೋಟಿಯ 17 ಆಟಗಾರರು, ₹75 ಲಕ್ಷದ 42 ಆಟಗಾರರು, ₹50 ಲಕ್ಷದ 4 ಆಟಗಾರರು ₹40 ಲಕ್ಷದ 7 ಹಾಗೂ ಹರಾಜಿನಲ್ಲಿ 227 ಆಟಗಾರರ ಮೂಲ ಬೆಲೆಯ 227 ಆಟಗಾರರು ಇದ್ದಾರೆ. ಈ ಬಾರಿ ನಡೆಯುವ ಮಿನಿ ಹರಾಜಿನಲ್ಲಿ ಯಾರು ಶ್ರೀಮಂತ ಆಟಗಾರ ಆಗುತ್ತಾರೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications