For Quick Alerts
ALLOW NOTIFICATIONS  
For Daily Alerts
 

IPL 2026: ಐಪಿಎಲ್‌ ಮಿನಿ ಹರಾಜಿಗೆ ಮುಹೂರ್ತ ಫಿಕ್ಸ್‌

ಐಪಿಎಲ್‌ 2026ರ ರಿಟೆನ್ಷನ್‌ ಲೀಸ್ಟ್‌ಗಳನ್ನು ಫ್ರಾಂಚೈಸಿಗಳು ರಿಲೀಸ್‌ ಮಾಡಿದ್ದಾರೆ. ಇದರಂತೆ ಹಲವು ಸ್ಟಾರ್‌ ಆಟಗಾರರು ಈ ಬಾರಿ ಮಿನಿ ಹರಾಜು ಪ್ರವೇಶಿಸಲಿದ್ದಾರೆ. ಈ ಬಾರಿ ಐಪಿಎಲ್‌ ಮಿನಿ ಹರಾಜು ಎಲ್ಲಿ ನಡೆಯುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಐಪಿಎಲ್ 2026 ರ ಮಿನಿ-ಹರಾಜು ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿದೆ ಎಂದು ಐಪಿಎಲ್ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಐಪಿಎಲ್ 2026 ರ ಅಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಎಲ್ಲ ತಂಡಗಳು ಸೇರಿ ಒಟ್ಟು 173 ಆಟಗಾರರುನ್ನು ಉಳಿಸಿಕೊಂಡಿವೆ. ಈ ವೇಳೆ 49 ವಿದೇಶಿ ಆಟಗಾರರು ಸಹ ಸೇರಿದ್ದಾರೆ. ಹರಾಜಿನಲ್ಲಿ ಒಟ್ಟು 77 ಆಟಗಾರರು ಫ್ರಾಂಚೈಸಿಗಳ ಹುಡುಕಾಟ ನಡೆಸಿದ್ದಾರೆ. ಈ ಆಟಗಾರರನ್ನು ಖರೀದಿ ಮಾಡಲು ಒಟ್ಟು 237 ಕೋಟಿ ರೂ. ಹಣವನ್ನು ಖರ್ಚು ಮಾಡಲಿದ್ದಾರೆ. ಈ ಬಾರಿ ಮಿನಿ ಹರಾಜು ನಡೆಯಲಿದ್ದು, ಮಾಲೀಕರು ಇದ್ದಕ್ಕಾಗಿ ಈಗಿನಿಂದಲೇ ಲೆಕ್ಕಾಚಾರವನ್ನು ಆರಂಭಿಸಿದ್ದಾರೆ. ಮತ್ತೊಮ್ಮೆ ಐಪಿಎಲ್‌ ಹರಾಜು ವಿದೇಶದಲ್ಲಿ ನಡೆಯುತ್ತಿದೆ.\

IPL 2026 Mini-Auction Set for December 16 in Abu Dhabi 173 Players Retained

ಐಪಿಎಲ್‌ ಹರಾಜಿನಲ್ಲಿ ಕೆಕೆಆರ್‌ 64.3 ಕೋಟಿ ರೂ.ಗಳೊಂದಿಗೆ ಅಂಗಳಕ್ಕೆ ಇಳಿಯಲಿದೆ. ಈ ವೇಳೆ ಕೆಕೆಆರ್‌ 13 ಸ್ಥಾನಗಳಿಗೆ ಹುಡುಕಾಟ ನಡೆಸಲಿದೆ. ಇನ್ನು ಇದರಲ್ಲಿ 6 ವಿದೇಶಿ ಆಟಗಾರರ ಸ್ಥಾನ ಸಹ ಖಾಲಿ ಇದೆ. ಕೆಕೆಆರ್‌ ಈ ಮಿನಿ ಹರಾಜಿನಲ್ಲಿ ಬಿಗ್ ಪ್ಲೇಯರ್‌ಗಳಿಗೆ ಕೆಕೆಆರ್ ಹಣದ ಹೊಳೆಯನ್ನು ಹರಿಸಲಿದೆ. ಇನ್ನು ಚೆನ್ನೈ ಸಹ 16 ಆಟಗಾರರನ್ನು ರಿಟೇನ್‌ ಮಾಡಿದ್ದು, 9 ಸ್ಥಾನಗಳಿಗಾಗಿ ಹರಾಜಿನಲ್ಲಿ ಹುಡುಕಾಟ ನಡೆಸಲಿದೆ.

ಸನ್‌ರೈಸರ್ಸ್‌ ಹೈದರಾಬಾದ್ ತಂಡ 25.5 ಕೋಟಿ ರೂಗಳೊಂದಿಗೆ 10 ಆಟಗಾರರ ಹುಡುಕಾಟ ನಡೆಸಲಿದೆ. ಈ ವೇಳೆ 2 ವಿದೇಶಿ ಆಟಗಾರರನ್ನು ಖರೀದಿಸಬಹುದಾಗಿದೆ. ಎಸ್‌ಆರ್‌ಎಚ್‌ ಒಟ್ಟು 15 ಆಟಗಾರರನ್ನು ರಿಟೇನ್ ಮಾಡಿಕೊಂಡಿದೆ. ಇನ್ನು ಲಕ್ನೋ ಸೂಪರ್ ಜೈಂಟ್ಸ್‌ 19 ಆಟಗಾರರನ್ನು ರಿಟೇನ್‌ ಮಾಡಿದೆ. ಲಕ್ನೋ ವಿದೇಶಿ ಆಟಗಾರರು ಸೇರಿದಂತೆ ಒಟ್ಟು 6 ಸ್ಥಾನಗಳನ್ನು ಭರ್ತಿ ಮಾಡಲು 22.95 ಕೋಟಿ ರೂ. ಖರ್ಚು ಮಾಡಲಿದೆ.

ಆರ್‌ಸಿಬಿ 8 ಸ್ಥಾನಕ್ಕಾಗಿ ಹುಡುಕಾಟ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 8 ಸ್ಥಾನಗಳನ್ನು ಹರಾಜಿನಲ್ಲಿ ಭರ್ತಿ ಮಾಡಿಕೊಳ್ಳಲಿದೆ. ಈ ವೇಳೆ 2 ವಿದೇಶಿ ಆಟಗಾರರನ್ನು ಆರ್‌ಸಿಬಿ ಕೊಳ್ಳಬಹುದಾಗಿದೆ. ಈ ವೇಳೆ ಹಾಲಿ ಚಾಂಪಿಯನ್‌ ಆರ್‌ಸಿಬಿ ಒಟ್ಟಾರೆ 16.4 ಕೋಟಿ ರೂ. ಹಣವನ್ನು ಖರ್ಚು ಮಾಡಲಿದೆ. ಡೆಲ್ಲಿ ಕ್ಯಾಪಿಟಲ್ಸ್‌ ಸಹ 17 ಆಟಗಾರರನ್ನು ಉಳಿಸಿಕೊಂಡಿದ್ದು, ಹರಾಜಿನಲ್ಲಿ 8 ಸ್ಥಾನಗಳನ್ನು ತುಂಬಲು ತಯಾರಿ ನಡೆಸಿದೆ. ಇದಕ್ಕಾಗಿ ಡೆಲ್ಲಿ ಬಳಿ ಒಟ್ಟು 21.8 ಕೋಟಿ ರೂಪಾಯಿ ಲಭ್ಯವಿದೆ.

ರಾಜಸ್ಥಾನ ರಾಯಲ್ಸ್‌ ಸಹ ಅಳೆದು ತೂಗಿ ಆಟಗಾರರನ್ನು ರಿಲೀಸ್‌ ಮಾಡಿದೆ. ಆರ್‌ಆರ್‌ ಒಟ್ಟು 9 ಸ್ಥಾನಗಳನ್ನು ಫಿಲ್ ಮಾಡಿಕೊಳ್ಳಲು ಹರಾಜಿನಲ್ಲಿ 16.05 ಕೋಟಿ ಹಣವನ್ನು ವ್ಯಯಮಾಡಲಿದೆ. ಇನ್ನು ಗುಜರಾತ್ ಸಹ 5 ಸ್ಲಾಟ್‌ ತುಂಬಿಸಿಕೊಳ್ಳಲು 12.9 ಕೋಟಿ ಹಣ ಖರ್ಚು ಮಾಡಲಿದೆ. ಪಂಜಾಬ್ ಹರಾಜಿನಲ್ಲಿ 4 ಸ್ಥಾನಕ್ಕಾಗಿ ಹುಡುಕಾಟ ನಡೆಸಿದರೆ, ಮುಂಬೈ ಇಂಡಿಯನ್ಸ್‌ 5 ಸ್ಥಾನಕ್ಕಾಗಿ ಬಾಜಿ ಕೂಗಲಿದೆ.

Story first published: Sunday, November 16, 2025, 11:27 [IST]
Other articles published on Nov 16, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+