ಮಂಗಳವಾರ ಅಬುಧಾಬಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಿನಿ ಹರಾಜು ನಡೆಯಲಿದೆ. ಸತತ ಮೂರನೇ ಬಾರಿಗೆ ಹರಾಜು ವಿದೇಶದಲ್ಲಿ ನಡೆಯುತ್ತಿದೆ. ಇದಕ್ಕೂ ಮೊದಲು 2024ರ ಹರಾಜು ದುಬೈನಲ್ಲಿ, 2025ರ ಹರಾಜು ಜೆಡ್ಡಾದಲ್ಲಿ ನಡೆದಿತ್ತು. ಈ ಬಾರಿಯ ಮಿನಿ ಹರಾಜು ಅಬುಧಾಬಿಯಲ್ಲಿ ಡಿಸೆಂಬರ್ 16 ರಂದು ನಡೆಯಲಿದೆ.
ಒಂದು ದಿನದ ಹರಾಜಿನಲ್ಲಿ 350ಕ್ಕೂ ಹೆಚ್ಚು ಆಟಗಾರರು ಅಖಾಡ ಪ್ರವೇಶಿಸಲಿದ್ದಾರೆ. ಇದರಲ್ಲಿ 40 ಆಟಗಾರರ ಮೂಲ ಬೆಲೆ 2 ಕೋಟಿ ಆಗಿದೆ. ಈ ಆಟಗಾರರನ್ನು ತಮ್ಮ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಮಾಲೀಕರು ಹರಸಾಹ ಪಡಲಿದ್ದಾರೆ. ಇದೇ ಪಟ್ಟಿಯಲ್ಲಿ ಸ್ಟಾರ್ ಆಟಗಾರರು ಇದ್ದು ಎಲ್ಲರ ಗಮನ ಸೆಳೆದಿದ್ದಾರೆ.

ಈ ಬಾರಿ ಹರಾಜು ಅಂಗಳ ಪ್ರವೇಶಿಸಲಿರುವ ಶ್ರೀಮಂತ ತಂಡ ಎಂಬ ಹೆಗ್ಗಳಿಕೆ ಕೆಕೆಆರ್ ತಂಡದ್ದಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ₹64.3 ಕೋಟಿಗಳನ್ನು ಹೊಂದಿದೆ. ಅಲ್ಲದೆ ಹರಾಜಿನಲ್ಲಿ 13 ಆಟಗಾರರನ್ನು ಕೊಳ್ಳಬಹುದಾಗಿದೆ. ಅಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಹ ಹರಾಜಿಗೆ ₹43.4 ಕೋಟಿಯೊಂದಿಗೆ ಪ್ರವೇಶಿಸಲಿದ್ದು, 9 ಆಟಗಾರರನ್ನು ಕೊಳ್ಳಬಹುದಾಗಿದೆ. ಈ ಬಾರಿಯ ಹರಾಜಿನಲ್ಲಿ ಅತಿ ಕಡಿಮೆ ಹಣವನ್ನು ಮುಂಬೈ ಇಂಡಿಯನ್ಸ್ ಹೊಂದಿದೆ. ಮುಂಬೈ ₹2.75 ಕೋಟಿಗಳೊಂದಿಗೆ ಅಂಗಳ ಪ್ರವೇಶಿಸಲಿದೆ.
ಈ ಬಾರಿಯ ಹರಾಜಿನಲ್ಲಿ ಕ್ಯಾಮರೂನ್ ಗ್ರೀನ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇವರು ಭಾರೀ ಮೊತ್ತವನ್ನು ಜೇಬಿಗೆ ಇಳಿಸಿಕೊಳ್ಳುವ ಸಾಧ್ಯತೆ ಇದೆ. ಡೇವನ್ ಕಾನ್ವೆ, ರಚಿನ್ ರವೀಂದ್ರ, ಡೇವಿಡ್ ಮಿಲ್ಲರ್, ವೆಂಕಟೇಶ್ ಅಯ್ಯರ್, ರವಿ ಬಿಷ್ಣೋಯ್ ಅವರು 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜು ಅಂಗಳ ಪ್ರವೇಶಿಸಲಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಿ 16.4 ಕೋಟಿ ರೂಪಾಯಿ ಇದೆ. ಈ ವೇಳೆ ಆರ್‌ಸಿಬಿ ಒಟ್ಟು 8 ಆಟಗಾರರನ್ನು ಖರೀದಿಸಬಹುದಾಗಿದೆ. ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಆರ್‌ಸಿಬಿ ಪ್ಲ್ಯಾನ್ ಮಾಡಿದೆ.
ಐಪಿಎಲ್ 2026ರ ಹರಾಜು ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದ್ದು, ಇದರ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೋಡಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ.
| ತಂಡದ ಹೆಸರು | ಉಳಿದಿರುವ ಪರ್ಸ್ (ಕೋಟಿ ರೂ. ಗಳಲ್ಲಿ) | ಉಳಿದಿರುವ ಸ್ಲಾಟ್‌ಗಳು |
|---|---|---|
| ಕೋಲ್ಕತ್ತಾ ನೈಟ್ ರೈಡರ್ಸ್ | 64.3 | 13 |
| ಮುಂಬೈ ಇಂಡಿಯನ್ಸ್ | 2.75 | 5 |
| ಲಕ್ನೋ ಸೂಪರ್ ಜೈಂಟ್ಸ್ | 22.95 | 6 |
| ರಾಯಲ್ ಚಾಲೆಂಜರ್ಸ್ ಬೆಂಗಳೂರು | 16.4 | 8 |
| ರಾಜಸ್ಥಾನ ರಾಯಲ್ಸ್ | 16.05 | 9 |
| ಚೆನ್ನೈ ಸೂಪರ್ ಕಿಂಗ್ಸ್ | 43.4 | 9 |
| ದೆಹಲಿ ಕ್ಯಾಪಿಟಲ್ಸ್ | 21.8 | 8 |
| ಪಂಜಾಬ್ ಕಿಂಗ್ಸ್ | 1.5 | 4 |
| ಸನ್‌ರೈಸರ್ಸ್ ಹೈದರಾಬಾದ್ | 25.5 | 10 |
| ಗುಜರಾತ್ ಟೈಟನ್ಸ್ | 12.9 | 5 |