Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಶಾರ್ದೂಲ್ ಕೈ ಬಿಟ್ಟು, ಶಮಿ ಕೈ ಹಿಡಿದ LSG?

ಇಂಡಿಯನ್ ಪ್ರೀಮಿಯರ್ ಲೀಗ್‌ ರಿಟೇನ್ಷನ್‌ ಪಟ್ಟಿ ಬಿಡುಗಡೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 15ರೊಳಗೆ ಐಪಿಎಲ್‌ನ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಐಪಿಎಲ್ ಕಾರ್ಯಕಾರಿ ಮಂಡಳಿಗೆ ನೀಡಲಿದೆ. ಇದಕ್ಕೂ ಮೊದಲು ಪ್ರಸಕ್ತ ಐಪಿಎಲ್‌ನ ಮೊದಲ ಟ್ರೇಡ್‌ ಸಹ ನಡೆದು ಹೋಗಿದೆ. ಲಕ್ನೋ ಸೂಪರ್ ಜೈಂಟ್ಸ್ ತೆಕ್ಕೆಯಲ್ಲಿದ್ದ ಆಲ್‌ರೌಂಡರ್‌ ಶಾರ್ದೂಲ್ ಠಾಕೂರ್ ಅವರನ್ನು, ಮುಂಬೈ ಇಂಡಿಯನ್ಸ್‌ ಖರೀದಿಸಿದೆ. ಈಗ ಮತ್ತೊಂದು ಟ್ರೇಡ್‌ ಸುದ್ದಿ ಹೊರ ಬಿದ್ದಿದ್ದು, ಮೊಹಮ್ಮದ್ ಶಮಿ ಸಹ ಟ್ರೇಡ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

ಟೀಮ್ ಇಂಡಿಯಾದ ಸ್ವಿಂಗ್ ಬೌಲರ್ ಶಮಿ ರಣಜಿ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡುವ ಕನಸು ಸದ್ಯ ದೂರ ಸರಿಯುತ್ತಿದೆ. ಶಮಿ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಪರ ಕಣಕ್ಕೆ ಇಳಿದಿದ್ದರು. ಆದರೆ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವನ್ನು ಆಡುವಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರನ್ನು ಬಿಡಬಹುದು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಮೊಹಮ್ಮದ್‌ ಶಮಿ ಲಕ್ನೋ ಸೂಪರ್ ಜೈಂಟ್ಸ್‌ಗೆ ಟ್ರೇಡ್‌ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

IPL 2026 Mohammed Shami Traded to LSG from SRH

ರಣಜಿ ಟ್ರೋಫಿಯಲ್ಲಿ ಆಡುತ್ತಿರುವ ಶಮಿ ಸದ್ಯ ಫಿಟ್ ಆಗಿದ್ದಾರೆ. ಇವರು ಐಪಿಎಲ್‌ನಲ್ಲಿ ಪವರ್‌ ಪ್ಲೇ ಹಾಗೂ ಡೆತ್‌ ಓವರ್‌ಗಳಲ್ಲಿ ಮೊನಚಾದ ದಾಳಿಯನ್ನು ಸಂಘಟಿಸುವಲ್ಲಿ ಹೆಸರುವಾಸಿ. ಆದರೆ ಕಳೆದ ಆವೃತ್ತಿಯಲ್ಲಿ ಇವರು ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡಿದ್ದರು. ಇವರು ಇನ್ನು ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡುವ ಸಾಧ್ಯತೆ ಇದೆ. ಮೊಹಮ್ಮದ್ ಶಮಿ ಇದಕ್ಕೂ ಮೊದಲು ಡೆಲ್ಲಿ, ಗುಜರಾತ್ ಟೈಟಾನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್, ಎಸ್‌ಆರ್‌ಎಚ್‌ ಪರವೂ ಆಡಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೆ 119 ಪಂದ್ಯ ಆಡಿರುವ ಶಮಿ 133 ವಿಕೆಟ್‌ ಕಬಳಿಸಿದ್ದಾರೆ.

ಲಕ್ನೋ ಪಾಲು?

ಕಳೆದ ಬಾರಿಯ ಐಪಿಎಲ್‌ ಮೆಗಾ ಹರಾಜಿನಲ್ಲಿ ಸನ್‌ರೈಸರ್ಸ್‌ ಹೈದರಾಬಾರ್ದ್ 10 ಕೋಟಿ ರೂ. ನೀಡಿ ಶಮಿ ಅವರನ್ನು ತಮ್ಮ ತಂಡಕ್ಕೆ ಬರ ಮಾಡಿಕೊಂಡಿತ್ತು. ಈಗ ಶಮಿ ಅವರು LSG ತಂಡಕ್ಕೆ ಟ್ರೇಡ್ ಆದರೆ ಅದರ ವ್ಯವಹಾರ ಹೇಗಿರಲಿದೆ? ಹಣದ ಮೂಲಕ ಶಮಿ ಅವರನ್ನು ಲಕ್ನೋ ತಂಡ ಸೇರಿಸಿಕೊಳ್ಳುತ್ತದೋ, ಆಟಗಾರರ ಬದಲಾವಣೆಯ ಮೂಲಕ ಟ್ರೇಡ್ ಮಾಡಿಕೊಳ್ಳುತ್ತದೋ ಕುತೂಹಲ ಮೂಡಿಸಿದೆ.

Story first published: Friday, November 14, 2025, 21:15 [IST]
Other articles published on Nov 14, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+