Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026 Most Sixes: ವೈಭವ್ ಸೂರ್ಯವಂಶಿ 37 ಸಿಕ್ಸರ್: ಟಾಪ್‌ 10 ಪಟ್ಟಿಯಲ್ಲಿ ಆರ್‌ಸಿಬಿ ಆಟಗಾರರಿಗೂ ಸ್ಥಾನ

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಈ ಲೀಗ್‌ನಲ್ಲಿ ಬ್ಯಾಟರ್‌ಗಳ ಆರ್ಭಟ ಜೋರಾಗಿದೆ. 19ನೇ ಆವೃತ್ತಿಯ ಐಪಿಎಲ್‌ನಲ್ಲಿ ತಂಡಗಳು ಸಿಕ್ಸರ್‌ಗಳನ್ನು ಬಾರಿಸಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಈ ವೇಳೆ ಯುವ ಆಟಗಾರರು ಹಾಗೂ ಅನುಭವಿ ಆಟಗಾರರು ಬಿಗ್ ಹಿಟ್‌ ಬಾರಿಸಿ ಮಿಂಚಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ (ಏಪ್ರಿಲ್‌ 28) ಮಂಗಳವಾರದ ಪಂದ್ಯದ ವರೆಗೆ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಆಟಗಾರರ ಪಟ್ಟಿ ಇಲ್ಲಿದೆ.

ಈ ಬಾರಿಯ ಲೀಗ್‌ನಲ್ಲಿ ಎಲ್ಲರ ಚಿತ್ತ ಕದ್ದಿದ್ದ 15 ವರ್ಷ ಯುವ ಆಟಗಾರ ವೈಭವ್ ಸೂರ್ಯವಂಶಿ ಕಮಾಲ್‌ ಬ್ಯಾಟಿಂಗ್ ನಡೆಸಿದ್ದಾರೆ. ಇವರು 19ನೇ ಆವೃತ್ತಿಯಲ್ಲಿ ಜಸ್ಪ್ರೀತ್ ಬುಮ್ರಾ, ಪ್ಯಾಟ್ ಕಮಿನ್ಸ್‌, ಜೋಶ್‌ ಹ್ಯಾಜಲ್‌ವುಡ್‌ ಸೇರಿದಂತೆ ಸ್ಟಾರ್ ಬೌಲರ್‌ಗಳ ಮೊದಲ ಎಸೆತದಲ್ಲೇ ಬೌಂಡರಿ ಅಥವಾ ಸಿಕ್ಸರ್ ಬಾರಿಸಿದ್ದಾರೆ. ಅಲ್ಲದೆ ರನ್ ಗಳಿಕೆಯಲ್ಲಿ ವೈಭವ್ ಸೂರ್ಯವಂಶಿ ಮುಂಚೂಣಿಯಲ್ಲಿದ್ದಾರೆ.

IPL 2026 Most Sixes

ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಈ ಲೀಗ್‌ನಲ್ಲಿ ಸದ್ಯ ಆರೆಂಜ್ ಕ್ಯಾಪ್‌ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಇವರು ಆಡಿದ 9 ಪಂದ್ಯಗಳಲ್ಲಿ 44ರ ಸರಾಸರಿಯಲ್ಲಿ 400 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 2 ಅರ್ಧಶತಕ ಸಹ ಸೇರಿವೆ. ಅಲ್ಲದೆ ಲೀಗ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಇವರಿಗೆ ಮೊದಲ ಸ್ಥಾನ. ಇವರು ಈ ಲೀಗ್‌ನಲ್ಲಿ ಈ ವರೆಗೆ 37 ಸಿಕ್ಸರ್ ಬಾರಿಸಿದ್ದಾರೆ.

ಆರ್‌ಸಿಬಿ ಆಟಗಾರರಿಗೂ ಸ್ಥಾನ

ಈ ಪಟ್ಟಿಯಲ್ಲಿ ಎಸ್‌ಆರ್‌ಎಚ್‌ ತಂಡದ ಅಭಿಷೇಕ್‌ ಶರ್ಮಾ 8 ಪಂದ್ಯಗಳಲ್ಲಿ 28 ಸಿಕ್ಸರ್ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್‌ 10 ಆಟಗಾರರ ಪಟ್ಟಿಯಲ್ಲಿ ಆರ್‌ಸಿಬಿ ಆಟಗಾರರಿಗೂ ಸ್ಥಾನವಿದೆ. ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್‌ ಆಡಿದ 8 ಪಂದ್ಯಗಳಲ್ಲಿ 23 ಸಿಕ್ಸರ್ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

19ನೇ ಆವೃತ್ತಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿ

  • ವೈಭವ್ ಸೂರ್ಯವಂಶಿ (ಆರ್‌ಆರ್‌), 9 ಪಂದ್ಯ, 37 ಸಿಕ್ಸರ್
  • ಅಭಿಷೇಕ್ ಶರ್ಮಾ (ಎಸ್‌ಆರ್‌ಎಚ್‌), 8 ಪಂದ್ಯ, 28 ಸಿಕ್ಸರ್
  • ಪ್ರಿಯಾಂಶ್ ಆರ್ಯ (ಪಂಜಾಬ್‌), 7 ಪಂದ್ಯ, 26 ಸಿಕ್ಸರ್
  • ರಜತ್ ಪಾಟಿದಾರ್ (ಆರ್‌ಸಿಬಿ), 8 ಪಂದ್ಯ, 23 ಸಿಕ್ಸರ್
  • ಶ್ರೇಯಸ್ ಅಯ್ಯರ್ (ಪಂಜಾಬ್‌), 8 ಪಂದ್ಯ, 22 ಸಿಕ್ಸರ್
  • ಕೆ.ಎಲ್. ರಾಹುಲ್ (ಡಿಸಿ), 8 ಪಂದ್ಯ, 19 ಸಿಕ್ಸರ್
  • ಕೂಪರ್ ಕಾನೋಲಿ (ಪಂಜಾಬ್‌), 8 ಪಂದ್ಯ, 18 ಸಿಕ್ಸರ್
  • ಪ್ರಭ್‌ಸಿಮ್ರಾನ್ ಸಿಂಗ್ (ಪಂಜಾಬ್‌), 8 ಪಂದ್ಯ, 17 ಸಿಕ್ಸರ್
  • ಸಾಯಿ ಸುದರ್ಶನ್ (ಜಿಟಿ), 8 ಪಂದ್ಯ, 17 ಸಿಕ್ಸರ್
  • ದೇವದತ್ ಪಡಿಕ್ಕಲ್ (ಆರ್‌ಸಿಬಿ), 8 ಪಂದ್ಯ, 16 ಸಿಕ್ಸರ್

Story first published: Wednesday, April 29, 2026, 9:05 [IST]
Other articles published on Apr 29, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+