Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಆರೆಂಜ್ ಕ್ಯಾಪ್‌ ರೇಸ್‌ನಲ್ಲಿರುವ ಟಾಪ್ 5 ಬ್ಯಾಟರ್ಸ್‌

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗೆ 'ಆರೆಂಜ್ ಕ್ಯಾಪ್' ನೀಡಲಾಗುತ್ತದೆ. ಪ್ರತಿ ಪಂದ್ಯದ ಬಳಿಕ ಅತಿ ಹೆಚ್ಚು ರನ್‌ ಬಾರಿಸಿದ ಬ್ಯಾಟರ್‌ಗಳಿಗೆ ಈ ಕ್ಯಾಪ್ ಹಸ್ತಾಂತರಿಸಲಾಗುತ್ತದೆ. ಆಟಗಾರ ಮೈದಾನದಲ್ಲಿ ಈ ಕ್ಯಾಪ್ ಹಾಕಿಕೊಂಡು ಆಡುತ್ತಾನೆ. ಹಾಗಿದ್ದರೆ ಈ ಬಾರಿ ಆರೆಂಜ್ ಕ್ಯಾಪ್‌ ರೇಸ್‌ನಲ್ಲಿ ಯಾವೆಲ್ಲಾ ಆಟಗಾರರು ಇದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಈ ಬಾರಿ ಹಲವು ಯುವ ಹಾಗೂ ಅನುಭವಿ ಆಟಗಾರರು ಇದ್ದಾರೆ. ಇವರು ತಮ್ಮ ಕಲಾತ್ಮಕ ಆಟದಿಂದ ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ಶುಕ್ರವಾರ ಸಂಜೆಯ ವರೆಗೆ ಸನ್‌ರೈಸರ್ಸ್‌ ಹೈದರಾಬಾದ್ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಬಳಿ ಇದ್ದ ಕ್ಯಾಪ್‌ ರಾತ್ರಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ವರ್ಗಾವಣೆ ಆಗಿದೆ.

IPL 2026

ಶುಕ್ರವಾರ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ಲೀಗ್‌ ಹಂತದ ಕೊನೆಯ ಪಂದ್ಯವನ್ನು ತವರು ನೆಲದಲ್ಲಿ ಆಡಿತು. ಈ ಪಂದ್ಯದಲ್ಲಿ ಗುಜರಾತ್ ನೀಡಿದ್ದ 206 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿತು. ಈ ವೇಳೆ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಸೊಗಸಾದ ಆಟವನ್ನು ಆಡಿ ತಂಡಕ್ಕೆ ನೆರವಾದರು. ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 44 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್‌ ನೆರವಿನಿಂದ 81 ಬಾರಿಸಿದರು. ಈ ಅಮೋಘ ಇನಿಂಗ್ಸ್ ಬಲದಿಂದ ಇವರಿಗೆ ಆರೆಂಜ್ ಕ್ಯಾಪ್ ಲಭಿಸಿತು.

ವಿರಾಟ್‌ ಕೊಹ್ಲಿ ಗರಿಷ್ಠ ರನ್ ಸಾಧಕರು

ವಿರಾಟ್ ಕೊಹ್ಲಿ ಈ ಲೀಗ್‌ನಲ್ಲಿ ಆರೆಂಜ್ ಕ್ಯಾಪ್‌ ಮೇಲೆ ಕಣ್ಣು ನೆಟ್ಟಿದ್ದಾರೆ. ವಿರಾಟ್‌ ಆಡಿದ 7 ಪಂದ್ಯಗಳಲ್ಲಿ 54.66ರ ಸರಾಸರಿಯಲ್ಲಿ 328 ರನ್‌ ಕಲೆ ಹಾಕಿದ್ದಾರೆ. ವಿರಾಟ್ ಈ ವೇಳೆ 3 ಅರ್ಧಶತಕ ಸಿಡಿಸಿದ್ದಾರೆ. ಈ ಲೀಗ್‌ನಲ್ಲಿ 36 ಬೌಂಡರಿ, 12 ಸಿಕ್ಸರ್‌ ಸಿಡಿಸಿದ್ದಾರೆ.

ಅಭಿಷೇಕ್‌ ಶರ್ಮಾ ಆಡಿದ 7 ಪಂದ್ಯಗಳಲ್ಲಿ 323 ರನ್‌ ಸಿಡಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್‌ ರೇಟ್‌ 215 ಆಗಿದೆ. 19ನೇ ಆವೃತ್ತಿ ಐಪಿಎಲ್‌ನಲ್ಲಿ ಅಭಿಷೇಕ್‌ 25 ಬೌಂಡರಿ, 27 ಸಿಕ್ಸರ್ ಸಿಡಿಸಿದರು.

ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿರುವ ಬ್ಯಾಟರ್‌ಗಳು

ವಿರಾಟ್‌ ಕೊಹ್ಲಿ, ಆರ್‌ಸಿಬಿ, 7 ಪಂದ್ಯ, 328 ರನ್‌
ಅಭಿಷೇಕ್‌ ಶರ್ಮಾ, ಎಸ್‌ಆರ್‌ಎಚ್‌, 7 ಪಂದ್ಯ, 323 ರನ್‌
ಹೆನ್ರಿಕ್‌ ಕ್ಲಾಸೇನ್‌, ಎಸ್‌ಆರ್‌ಎಚ್‌, 7 ಪಂದ್ಯ, 320 ರನ್
ಶುಭಮನ್‌ ಗಿಲ್, ಜಿಟಿ, 6 ಪಂದ್ಯ, 297 ರನ್‌
ವೈಭವ್ ಸೂರ್ಯವಂಶಿ, 7 ಪಂದ್ಯ, 254 ರನ್‌

Story first published: Saturday, April 25, 2026, 10:28 [IST]
Other articles published on Apr 25, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+