Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಪ್ಲೇ ಆಫ್‌ ಟಿಕೆಟ್‌ಗಳನ್ನು ಪಡೆಯುವುದು ಹೇಗೆ? ಯಾವಾಗ ಬುಕ್ಕಿಂಗ್‌ ಆರಂಭ? ಇಲ್ಲಿದೆ ಮಾಹಿತಿ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ( ಬಿಸಿಸಿಐ) ಐಪಿಎಲ್ 2026 ರ ಪ್ಲೇಆಫ್ ಪಂದ್ಯಗಳ ಟಿಕೆಟ್ ಮಾರಾಟದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಆನ್‌ಲೈನ್ ಬುಕಿಂಗ್‌ಗಳು ಈ ವಾರಾಂತ್ಯದಲ್ಲಿ ಹಂತ ಹಂತವಾಗಿ ಆರಂಭವಾಗಲಿದ್ದು, ಈ ಟಿಕೆಟ್‌ಗಳನ್ನು ಜೊಮಾಟೊ 'ಡಿಸ್ಟ್ರಿಕ್ಟ್'ನಲ್ಲಿ ಪಡೆಯಬಹುದಾಗಿದೆ.

ಮೇ 26 ರಂದು ಧರ್ಮಶಾಲಾದಲ್ಲಿ ಐಪಿಎಲ್ ಕ್ವಾಲಿಫೈಯರ್ 1 ನಡೆಯಲಿದೆ. ಎಲಿಮಿನೇಟರ್ ಪಂದ್ಯ ಮೇ 27 ರಂದು ಮುಲ್ಲಾನಪುರ್‌ನಲ್ಲಿ ನಡೆಯಲಿದ್ದು, ಕ್ವಾಲಿಫೈಯರ್ 2 ಪಂದ್ಯ ಮೇ 29 ರಂದು ಮುಲ್ಲಾನಪುರ್‌ನಲ್ಲಿ, ಫೈನಲ್ ಮೇ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ.

IPL 2026 Playoff Tickets

ರುಪೇ ಕ್ರೆಡಿಟ್ ಕಾರ್ಡ್‌ದಾರರಿಗೆ ಟಿಕೆಟ್ ಪಡೆಯಲು ಮೊದಲ ಅವಕಾಶ ನೀಡಲಾಗಿದೆ. ಮೊದಲ ಹಂತದ ಬುಕಿಂಗ್ ಮೇ 20 ರಂದು ರಾತ್ರಿ 7:00 ಗಂಟೆಗೆ ಓಪನ್‌ವಾಗಲಿದ್ದು, ಇದರ ಲಾಭವನ್ನು ಗ್ರಾಹಕರು 24 ಗಂಟೆಗಳ ಕಾಲ ಪಡೆಯಬಹುದಾಗಿದೆ. ಈ ಸಮಯದಲ್ಲಿ ರುಪೇ ಕ್ರೆಡಿಟ್ ಕಾರ್ಡ್‌ ಬಳಕೆದಾರರು ಮೇ 26 ರಂದು ನಡೆಯಲಿರುವ ಕ್ವಾಲಿಫೈಯರ್ 1 ಹಾಗೂ ಎಲಿಮಿನೇಟರ್ ಪಂದ್ಯಗಳ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ.

ಟಿಕೆಟ್‌ ಬುಕ್‌ ಮಾಡುವುದು ಯಾವಾಗ?

ಉಳಿದ ಅಭಿಮಾನಿಗಳಿಗೆ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಟಿಕೆಟ್ ಮಾರಾಟ ಮೇ 21 ರಂದು ರಾತ್ರಿ 8:00 ಗಂಟೆಗೆ ಆರಂಭವಾಗಲಿವೆ. ಮೇ 23 ರ ರಾತ್ರಿ 8 ಗಂಟೆಯ ಮೇಲೆ ಕ್ವಾಲಿಫೈಯರ್ 2 ಹಾಗೂ ಫೈನಲ್‌ ಟಿಕೆಟ್‌ಗಳು ಲಭ್ಯ ಇರಲಿವೆ. ಪ್ರೇಕ್ಷಕರು ಟಿಕೆಟ್‌ಗಳನ್ನು ಅಧಿಕೃತ ಐಪಿಎಲ್‌ ವೆಬ್‌ಸೈಟ್ ಹಾಗೂ ಡಿಸ್ಟ್ರಿಕ್ಟ್‌ ಬೈ ಜೊಮ್ಯಾಟೊ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಬಹುದಾಗಿದೆ.

ಟಿಕೆಟ್‌ ಕಳ್ಳಾಟ ತಪ್ಪಿಸಲು ಬಿಸಿಸಿಐ ದೊಡ್ಡ ಕ್ರಮವನ್ನು ಕೈಗೊಂಡಿದೆ. ಅಭಿಮಾನಿಗಳು ಈ ಮೋಸಕ್ಕೆ ಬಲಿಯಾಗದಂತೆ ತಡೆಯಲು ಬಿಸಿಸಿಐ ಅಧಿಕೃತ ವೆಬ್‌ಸೈಟ್‌ ಮೂಲಕ ಖರೀದಿ ಮಾಡುವಂತೆ ಸೂಚಿಸಿದೆ. ಇನ್ನು 19ನೇ ಆವೃತ್ತಿಯ ಐಪಿಎಲ್‌ ಫೈನಲ್ ಪಂದ್ಯವು ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಎಂದೇ ಖ್ಯಾತಿ ಪಡೆರುವ ಅಹಮದಾಬಾದ್‌ ಮೈದಾನದಲ್ಲಿ ನಡೆಯಲಿದೆ.

Story first published: Wednesday, May 20, 2026, 21:34 [IST]
Other articles published on May 20, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+