IPL 2026: ಪ್ಲೇ-ಆಫ್ ರೇಸ್ ಪಕ್ಕಾ; ಆರ್‌ಸಿಬಿ vs ಜಿಟಿ, ಎಸ್‌ಆರ್‌ಎಚ್ vs ಆರ್‌ಆರ್ ಇಲ್ಲಿದೆ ಪೂರ್ಣ ವೇಳಾಪಟ್ಟಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಈಗ ಪ್ಲೇ ಆಫ್ ಹಂತದತ್ತ ಮುಖ ಮಾಡಿದೆ. ಭಾನುವಾರ ಲೀಗ್ ಹಂತದ ಕೊನೆಯ ದಿನವಾಗಿತ್ತು. ಕೊನೆಯ ದಿನದಂದು ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆದಿದೆ. ಈಗ ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆದಿರುವ ನಾಲ್ಕು ತಂಡಗಳು ಪಕ್ಕಾ ಆಗಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 18 ಹಾಗೂ ಉತ್ತಮ ರನ್ ರೇಟ್‌ನೊಂದಿಗೆ ಅಗ್ರಸ್ಥಾನದೊಂದಿಗೆ ಮೊದಲ ಕ್ವಾಲಿಫೈಯರ್ ಪಂದ್ಯ ಪ್ರವೇಶಿಸಿದೆ. ಇನ್ನು ಗುಜರಾತ್ ಟೈಟಾನ್ಸ್ (ಜಿಟಿ) ಸಹ 18 ಅಂಕಗಳನ್ನು ಕಲೆ ಹಾಕಿದ್ದು, ನೆಟ್ ರನ್ ರೇಟ್‌ನಲ್ಲಿ ಆರ್‌ಸಿಬಿಕ್ಕಿಂತ ಕಡಿಮೆ ಇದ್ದು ಎರಡನೇ ಸ್ಥಾನದಲ್ಲಿದೆ. ಇನ್ನು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) 18 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಹೊಂದಿದೆ.

ಆರ್‌ಸಿಬಿ vs ಟೈಟಾನ್ಸ್
ಆರ್‌ಸಿಬಿ ಹಾಗೂ ಟೈಟಾನ್ಸ್ ತಂಡಗಳು ಮೊದಲ ಕ್ವಾಲಿಫೈಯರ್‌ನಲ್ಲಿ ಕಾದಾಟ ನಡೆಸಲಿವೆ. ಮಂಗಳವಾರ ಮೇ 26 ರಂದು ಈ ಪಂದ್ಯವು ಧರ್ಮಶಾಲಾದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ನೇರವಾಗಿ ಐಪಿಎಲ್ ಫೈನಲ್‌ಗೆ ಪ್ರವೇಶಿಸಲಿದೆ. ಫೈನಲ್ ಪಂದ್ಯ ಮೇ 31 ರಂದು ನಡೆಯಲಿದೆ. ಈ ಪಂದ್ಯವು ಅಹಮದಾಬಾದ್‌ನಲ್ಲಿ ನಡೆಯಲಿದೆ.
ಎಲಿಮಿನೇಟರ್ ಪಂದ್ಯ ನಡೆಯುವುದು ಯಾವಾಗ?
ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದ ಎಸ್‌ಆರ್‌ಎಚ್ ಹಾಗೂ ನಾಲ್ಕನೇ ಸ್ಥಾನ ಪಡೆದ ಆರ್‌ಆರ್ ತಂಡಗಳ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿದ ತಂಡ ಎರಡನೇ ಕ್ವಾಲಿಫೈಯರ್‌ಗೆ ಪ್ರವೇಶಿಸಲಿದೆ.

ಎರಡನೇ ಕ್ವಾಲಿಫೈಯರ್ ನಡೆಯುವುದು ಎಲ್ಲಿ?
ಸೋತ ತಂಡವು ಫೈನಲ್ ತಲುಪಲು ಮತ್ತೊಂದು ಅವಕಾಶವನ್ನು ಹೊಂದಿರುತ್ತದೆ. ಸೋತ ತಂಡ ಕ್ವಾಲಿಫೈಯರ್ 2 ಅನ್ನು ಆಡಬೇಕಾಗುತ್ತದೆ. ಈ ಪಂದ್ಯದಲ್ಲಿ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡ ಹಾಗೂ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಜಯ ಸಾಧಿಸಿದ ತಂಡಗಳ ನಡುವೆ ಕಾದಾಟ ನಡೆಯಲಿದೆ. ಎರಡನೇ ಕ್ವಾಲಿಫೈಯರ್‌ನಲ್ಲಿ ಗೆದ್ದ ತಂಡವು ಫೈನಲ್‌ಗೆ ಮುನ್ನಡೆಯುತ್ತದೆ.
ಐಪಿಎಲ್ 2026 ಪ್ಲೇಆಫ್‌ಗಳ ಪೂರ್ಣ ವೇಳಾಪಟ್ಟಿ
- ಕ್ವಾಲಿಫೈಯರ್ 1: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್, ಮೇ 26 (ಧರ್ಮಶಾಲಾ)
- ಎಲಿಮಿನೇಟರ್: ಸನ್‌ರೈಸರ್ಸ್ ಹೈದರಾಬಾದ್ vs ರಾಜಸ್ಥಾನ ರಾಯಲ್ಸ್, ಮೇ 27 (ನ್ಯೂ ಚಂಡೀಗಢ)
- ಕ್ವಾಲಿಫೈಯರ್ 2: ಎಲಿಮಿನೇಟರ್ ವಿಜೇತ vs ಕ್ವಾಲಿಫೈಯರ್ 1 ಸೋತವರು, ಮೇ 29 (ನ್ಯೂ ಚಂಡೀಗಢ)
- ಅಂತಿಮ: ಕ್ವಾಲಿಫೈಯರ್ 1 ವಿಜೇತ vs ಕ್ವಾಲಿಫೈಯರ್ 2 ವಿಜೇತ, ಮೇ 31 (ಅಹಮದಾಬಾದ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications