Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಸತತ 2 ಆವೃತ್ತಿಗಳಲ್ಲಿ 500ಕ್ಕೂ ಹೆಚ್ಚು ರನ್ ಬಾರಿಸಿದ ಅನ್‌ಕ್ಯಾಪ್ಡ್‌ ಪ್ಲೇಯರ್‌ ಪ್ರಭ್‌ಸಿಮ್ರನ್‌ ಸಿಂಗ್‌ ದಾಖಲೆ

ಐಪಿಎಲ್ ನಲ್ಲಿ ಪ್ರಭಸಿಮ್ರಾನ್ ಸಿಂಗ್ ಇತಿಹಾಸ ನಿರ್ಮಿಸಿದ್ದಾರೆ. ಸತತ ಎರಡು ಐಪಿಎಲ್‌ ಆವೃತ್ತಿಗಳಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಅನ್‌ಕ್ಯಾಪ್ಡ್ ಭಾರತೀಯ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ವಿರದ್ಧ ನಡೆದ ಪಂದ್ಯದಲ್ಲಿ ಪ್ರಭ್‌ಸಿಮ್ರನ್‌ ಸಿಂಗ್‌ 69 ರನ್‌ಗಳ ಇನಿಂಗ್ಸ್‌ ಕಟ್ಟುವ ಮೂಲಕ ಈ ದಾಖಲೆ ನಿರ್ಮಿಸಿದರು. ಈ ಆವೃತ್ತಿಯಲ್ಲಿ ಇವರು 500 ರನ್‌ಗಳ ಮಾರ್ಕ್‌ ದಾಟಿದ್ದಾರೆ. ಇನ್ನು ಕಳೆದ ಆವೃತ್ತಿಯಲ್ಲೂ ಇದೆ ಸಾಧನೆ ಮಾಡಿದ್ದರು.

ಪ್ರಭ್‌ಸಿಮ್ರನ್‌ ಸಿಂಗ್‌ 19ನೇ ಆವೃತ್ತಿ ಐಪಿಎಲ್‌ನಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದ ಆಟಗಾರ. ಇವರು ಲಕ್ನೋ ವಿರುದ್ಧದ ಪಂದ್ಯದಲ್ಲಿ 177 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿದ್ದಾರೆ. ಎರಡನೇ ವಿಕೆಟ್‌ಗೆ ನಾಯಕ ಶ್ರೇಯಸ್ ಅಯ್ಯರ್ ಜೊತೆ 140 ರನ್‌ಗಳ ಮಹತ್ವದ ಜೊತೆಯಾಟವಾಡಿದರು.

IPL 2026

25 ವರ್ಷದ ಈ ಆಟಗಾರ ಪ್ರಭ್‌ಸಿಮ್ರನ್‌ ಸಿಂಗ್‌ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆಯುತ್ತಿದ್ದಾರೆ. 2025ರ ಮೆಗಾ ಹರಾಜಿಗೂ ಮುನ್ನ ಪಂಜಾಬ್ ಪ್ರಭಸಿಮ್ರಾನ್ ಅವರನ್ನುಉಳಿಸಿಕೊಂಡಿತ್ತು. ಆ ವರ್ಷದಲ್ಲಿ ಅವರು 160.53 ಸ್ಟ್ರೈಕ್ ರೇಟ್‌ನಲ್ಲಿ ರನ್‌ ಕಲೆ ಹಾಕಿದ್ದರು. 2026ರಲ್ಲೂ ಅದೇ ವೇಗ ಕಾಯ್ದುಕೊಂಡಿದ್ದಾರೆ. ಸ್ಫೋಟಕ ಆರಂಭ ನೀಡುವ ಅವರ ಸಾಮರ್ಥ್ಯ ಪಂಜಾಬ್‌ನ ಅಗ್ರ ಕ್ರಮಾಂಕಕ್ಕೆ ಬಲ ತುಂಬಿದೆ.

ಪಂಜಾಬ್‌ಗಾಗಿ ಈ ಮೈಲಿಗಲ್ಲು ತಲುಪಿದ ಎರಡನೇ ಅನ್‌ಕ್ಯಾಪ್ಡ್‌ ಆಟಗಾರ ಎಂಬ ಹಿರಿಮೆ ಪ್ರಭ್‌ಸಿಮ್ರನ್‌ ತಮ್ಮದಾಗಿಸಿಕೊಂಡಿದ್ದಾರೆ. ಈ ಮೊದಲು ಶಾನ್‌ ಮಾರ್ಷ್‌ ಸಹ ಇದೇ ಸಾಧನೆ ಮಾಡಿದ್ದರು. ಈ ಯುವ ವಿಕೆಟ್ ಕೀಪರ್-ಬ್ಯಾಟರ್‌ನ ಫಾರ್ಮ್ ಪಂಜಾಬ್ ಪ್ಲೇಆಫ್ ಕನಸು ಜೀವಂತವಾಗಿರಿಸಲು ಮಹತ್ವದಾಗಿದೆ. ಇವರು ಸೀಸನ್‌ನಲ್ಲಿ 167ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ 541 ರನ್ ಗಳಿಸಿದ್ದಾರೆ.

ಪ್ರಭ್‌ಸಿಮ್ರನ್‌ ಸಿಂಗ್ ಸಾಧನೆ

ಪ್ರಭ್‌ಸಿಮ್ರನ್ ಸಿಂಗ್ ಈಗಾಗಲೇ ಐಪಿಎಲ್‌ನಲ್ಲಿ ಆಡಿದ 65 ಪಂದ್ಯಗಳಲ್ಲಿ 28ರ ಸರಾಸರಿಯಲ್ಲಿ 1815 ರನ್‌ ಕಲೆ ಹಾಕಿದ್ದಾರೆ. ಈ ವೇಳೆ ಇವರು 1 ಶತಕ ಹಾಗೂ 13 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇವರ ಬ್ಯಾಟ್‌ನಿಂದ ಒಟ್ಟು 189 ಬೌಂಡರಿ ಸಿಡಿದಿದ್ದು, 94 ಸಿಕ್ಸರ್‌ ಸಹ ಬಾರಿಸಿದ್ದಾರೆ. ಇವರು 29 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದು 36ರ ಸರಾಸರಿಯಲ್ಲಿ 1599 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 5 ಶತಕ ಹಾಗೂ 4 ಅರ್ಧಶತಕಗಳು ಸೇರಿವೆ. ಇನ್ನು 55 ಲಿಸ್ಟ್‌ ಎ ಪಂದ್ಯದಲ್ಲಿ 2140 ರನ್‌ ಸಿಡಿಸಿದ್ದಾರೆ. ಇದರಲ್ಲಿ 6 ಶತಕ ಹಾಗೂ 11 ಅರ್ಧಶತಕಗಳು ಸೇರಿವೆ. ಪಂಜಾಬ್‌ ಕಿಂಗ್ಸ್‌ ಈ ಆವೃತ್ತಿಯ ಆರಂಭದಲ್ಲಿ ಅಬ್ಬರದ ಪ್ರದರ್ಶನ ನೀಡುವಲ್ಲಿ ಇವರ ಕಾಣಿಕೆ ಸಹ ಅಪಾರವಾಗಿದೆ. ಪಂಜಾಬ್ ಪ್ಲೇ ಆಫ್ ಪ್ರವೇಶಿಸಿದರೆ ಇವರು ಸ್ಥಿರ ಪ್ರದರ್ಶನ ನೀಡುವುದು ಅನಿವಾರ್ಯ.

Story first published: Sunday, May 24, 2026, 11:34 [IST]
Other articles published on May 24, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+