Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೈದಾನದಲ್ಲಿ ಸಿಕ್ಸರ್ ಅಬ್ಬರ, ಹೊರಗಡೆ ಮಾನವೀಯತೆ: ಗಾಯಗೊಂಡ ಅಭಿಮಾನಿಯ ಮನಗೆದ್ದ ಪಂಜಾಬ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಡೆಯುತ್ತಿದೆ. ಈ ಲೀಗ್‌ನಲ್ಲಿ ಬ್ಯಾಟರ್‌ಗಳ ಅಬ್ಬರ ಜೋರಾಗಿದೆ. ಬ್ಯಾಟರ್‌ಗಳು ಪ್ರೇಕ್ಷಕರ ಗ್ಯಾಲರಿಗೂ ಚೆಂಡನ್ನು ಅಟ್ಟಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಆದರೆ ಪಂಜಾಬ್‌ ಕಿಂಗ್ಸ್‌ ಹಾಗೂ ಲಕ್ನೋ ಸೂಪರ್ ಜೈಂಟ್ಸ್‌ (ಎಲ್‌ಎಸ್‌ಜಿ) ನಡುವಣ ಪಂದ್ಯದಲ್ಲಿ ಪ್ರಿಯಾಂಶ್‌ ಆರ್ಯ ಬಾರಿಸಿದ ಸಿಕ್ಸರ್‌ ಒಂದು ಪ್ರೇಕ್ಷಕರಿಗೆ ಬಡಿದು ಸುದ್ದಿಯಾಗಿತ್ತು. ಈಗ ಇದೇ ಸುದ್ದಿಗೆ ಸಂಬಂಧಿಸಿದಂತೆ ದೊಡ್ಡ ಅಪ್‌ಡೇಟ್‌ ಬಂದಿದೆ.

ಆಟಗಾರರ ಕ್ರೀಡಾ ಮನೋಭಾವದ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆಯಿಲ್ಲ. ಆಟಗಾರರು ಸಮಯ ಸಿಕ್ಕಾಗಲೆಲ್ಲಾ ಇಂತಹ ದೃಶ್ಯಗಳಿಗೆ ಸಾಕ್ಷಿಯಾಗಿದ್ದಾರೆ. ಇಂತಹದ್ದೇ ಒಂದು ಸನ್ನಿವೇಶಕ್ಕೆ ಪಂಜಾಬ್ ತಂಡವೂ ಸಹ ಸಾಕ್ಷಿಯಾಗಿದೆ. ಪ್ರಿಯಾಂಶ್ ಆರ್ಯ ಹೊಡೆದ ಸಿಕ್ಸರ್‌, ಕ್ರೀಡಾಂಗಣದಲ್ಲಿ ಕುಳಿತಿದ್ದ ಕೃಷ್ಣ ಚಂದ್ ಎಂಬ ಅಭಿಮಾನಿಗೆ ಬಡಿಯಿತು. ಇದರಿಂದಾಗಿ ಅವರ ಕಣ್ಣುಗಳಿಗೆ ಪೆಟ್ಟು ಬಿದ್ದಿತು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈಗ, ಪಂಜಾಬ್ ಕಿಂಗ್ಸ್ ಸಹ-ಮಾಲೀಕಿ ಪ್ರೀತಿ ಜಿಂಟಾ ಮತ್ತು ಯುವ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ ಗಾಯಗೊಂಡ ಅಭಿಮಾನಿಯನ್ನು ಮಾತನಾಡಿಸಿದ್ದಾರೆ.

IPL 2026

ಮನಗೆದ್ದ ಪಂಜಾಬ್

ಕ್ರೀಡಾಂಗಣದಲ್ಲಿ ಕುಳಿತಿದ್ದ ವೃದ್ಧ ಅಭಿಮಾನಿಯೊಬ್ಬರು ಪ್ರಿಯಾಂಶ್ ಆರ್ಯ ಹೊಡೆದ ಪ್ರಬಲ ಸಿಕ್ಸರ್‌ನಿಂದ ಗಾಯಗೊಂಡರು. ಇದರಿಂದಾಗಿ ಮೈದಾನದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಯಿತು. ಬಳಿಕ ವೃದ್ಧ ಅಭಿಮಾನಿಯನ್ನು ವೈದ್ಯರು ಚಿಕಿತ್ಸೆ ನೀಡಿದರು. ಪಂದ್ಯದ ನಂತರ, ಪ್ರೀತಿ ಜಿಂಟಾ ಮತ್ತು ಪ್ರಿಯಾಂಶ್ ಆರ್ಯ ವೀಡಿಯೊ ಕರೆಯ ಮೂಲಕ ಅಭಿಮಾನಿಯನ್ನು ಸಂಪರ್ಕಿಸಿ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿದರು.

ಇದೇ ವೇಳೆ ಪ್ರಿಯಾಂಶ್ ಆರ್ಯ ತಾವು ಸಿಕ್ಸರ್‌ ಬಾರಿಸಿದ ಬಳಿಕ ಅಭಿಮಾನಿಗೆ ಆದ ಗಾಯದ ವಿಡಿಯೋ ನೋಡಿರುವುದಾಗಿ ತಿಳಿಸಿದರು. ಆ ಗಾಯ ಗಂಭೀರವಾಗಿರಬಹುದು ಎಂದು ಸಹ ಪ್ರಿಯಾಂಶ್ ಆತಂಕ ವ್ಯಕ್ತಪಡಿಸಿದರು ಎಂದು ಹೇಳಿದರು.

ಧರ್ಮಶಾಲಾದಲ್ಲಿ ನಡೆಯಲಿರುವ ಪಂಜಾಬ್ ಕಿಂಗ್ಸ್ ಪಂದ್ಯಕ್ಕೆ ಹಾಜರಾಗಲು ಪ್ರೀತಿ ಜಿಂಟಾ ಅಭಿಮಾನಿಗೆ ವಿಶೇಷ ಆಹ್ವಾನ ನೀಡಿದರು. ಇದೇ ವೇಳೆ ಹಾಸ್ಯಮಯವಾಗಿ ಪ್ರೀತಿ ನೀವು ಮೈದಾನಕ್ಕೆ ಬಂದರೆ ನಿಮ್ಮ ಸುರಕ್ಷತೆಗಾಗಿ ಹೆಲ್ಮೆಟ್‌ ಧರಿಸುವಂತೆ ಮಾಡುತ್ತೇವೆ. ಇದರಿಂದ ಚೆಂಡು ನಿಮ್ಮ ಬಳಿ ಬಂದರೂ ಸಹ ಸುರಕ್ಷಿತವಾಗಿರುತ್ತೀರಿ" ಎಂದು ಹೇಳಿದರು. ಇದನ್ನು ಕೇಳಿದ ಕೃಷ್ಣ ಚಂದ್ ಮುಖದಲ್ಲಿ ತಿಳಿ ನಗು ಕಂಡು ಬಂದಿತು. ಧರ್ಮಶಾಲಾದಲ್ಲಿ ನಡೆಯುವ ಪಂದ್ಯಕ್ಕೆ ಫ್ರಾಂಚೈಸ್ ಗಾಯಗೊಂಡ ಅಭಿಮಾನಿಯನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿದೆ.

Story first published: Sunday, May 3, 2026, 11:10 [IST]
Other articles published on May 3, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+