Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಪ್ರಿಯಾಂಶ್, ಕೂಪರ್ ಸ್ಫೋಟಕ ಬ್ಯಾಟಿಂಗ್: ದಾಖಲೆಯ ಮೊತ್ತ ಕಲೆ ಹಾಕಿದ ಪಂಜಾಬ್

ನ್ಯೂ ಚಂಡೀಗಡ್: ಆರಂಭಿಕ ಆಟಗಾರ ಪ್ರಿಯಾಂಶ್‌ ಆರ್ಯ (93 ರನ್‌) ಹಾಗೂ ಯುವ ಆಟಗಾರ ಕೂಪರ್ ಕಾನೋಲಿ (87) ಇವರ ಭರ್ಜರಿ ಆಟದ ನೆರವಿನಿಂದ ಪಂಜಾಬ್‌ ಕಿಂಗ್ಸ್ 19ನೇ ಆವೃತ್ತಿ ಐಪಿಎಲ್‌ನ 29ನೇ ಪಂದ್ಯದಲ್ಲಿ ಸವಾಲಿನ ಮೊತ್ತದ ಗುರಿಯನ್ನು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡಕ್ಕೆ ನೀಡಿದೆ.

ಟಾಸ್‌ ಗೆದ್ದ ಎಲ್‌ಎಸ್‌ಜಿ ಮೊದಲು ಫೀಲ್ಡ್ ಮಾಡಲು ಮುಂದಾಯಿತು. ರಿಷಭ್ ಪಂತ್ ಅವರ ನಿರ್ಧಾರವನ್ನು ಆರಂಭದಲ್ಲಿ ಮೊಹಮ್ಮದ್ ಶಮಿ ಯಶಸ್ವಿಯಾದರು. ಇದಾದ ಬಳಿಕ ಪ್ರಿಯಾಂಶ್ ಆರ್ಯ ಹಾಗೂ ಆಸ್ಟ್ರೇಲಿಯಾದ ಕೂಪರ್ ಕಾನೋಲಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯ ಆಟಕ್ಕೆ ಲಕ್ನೋ ಬೌಲರ್‌ಗಳು ವಿಫಲರಾದರು. ಈ ಜೋಡಿ 3 ರನ್‌ಗೆ ಮೊದಲ ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಆಧಾರವಾಯಿತು.

IPL 2026

2ನೇ ವಿಕೆಟ್‌ಗೆ ಪ್ರಿಯಾಂಶ್ ಮತ್ತು ಕೂಪರ್ ಕಾನೋಲಿ ಅಬ್ಬರ ನಡೆಸಿತು. ಈ ಜೋಡಿ 80 ಎಸೆತಗಳಲ್ಲಿ 182 ರನ್‌ ಸೇರಿಸಿತು. ಈ ಮೂಲಕ ತಂಡ ದೊಡ್ಡ ಮೊತ್ತದ ಕನಸು ಕಾಣಲು ಕಾರಣವಾಯಿತು. ಈ ಜೋಡಿ ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಬೌಲ್ ಮಾಡಿದ ಏಡನ್ ಮಾರ್ಕ್ರಾಮ್ 32 ರನ್‌ ಬಿಟ್ಟುಕೊಟ್ಟರು. ಇದು ಪ್ರಸಕ್ತ ಐಪಿಎಲ್‌ನ ದುಬಾರಿ ಓವರ್ ಆಯಿತು. ಮೊದಲ ಮೂರು ಎಸೆತಗಳಲ್ಲಿ ಕೂಪರ್ ಕಾನೋಲಿ ಸಿಕ್ಸರ್ ಬಾರಿಸಿದರೆ, ಕೊನೆಯ 2 ಎಸೆತಗಳಲ್ಲಿ ಪ್ರಿಯಾಂಶ್ ಆರ್ಯ ಸಿಕ್ಸರ್ ಬಾರಿಸಿದರು.

ಬಿರುಸಿನ ಬ್ಯಾಟಿಂಗ್‌

ಪ್ರಿಯಾಂಶ್ ಆರ್ಯ 37 ಎಸೆತಗಳಲ್ಲಿ 93 ರನ್‌ ಸಿಡಿಸಿದರು. ಈ ವೇಳೆ ಇವರ ಸ್ಟ್ರೈಕ್ ರೇಟ್‌ 251 ಆಗಿತ್ತು. ಇವರ ಅಮೋಘ ಇನಿಂಗ್ಸ್‌ನಲ್ಲಿ 4 ಬೌಂಡರಿ, 9 ಸಿಕ್ಸರ್‌ಗಳು ಸೇರಿವೆ. ಇನ್ನು ಕೂಪರ್ ಕಾನೋಲಿ 46 ಎಸೆಗಳಲ್ಲಿ 8 ಬೌಂಡರಿ, 7 ಸಿಕ್ಸರ್ ಸಹಾಯದಿಮದ 87 ರನ್‌ ಬಾರಿಸಿದರು.

ದಾಖಲೆಯ ಮೊತ್ತ ಕಲೆ ಹಾಕಿದ ಪಂಜಾಬ್

ಪಂಜಾಬ್‌ ಕಿಂಗ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಪರಿಣಾಮ ದಾಖಲೆಯ ಮೊತ್ತವನ್ನು ಕಲೆ ಹಾಕುವ ಪಂಜಾಬ್ ಕನಸಿಗೆ ಪೆಟ್ಟು ಬಿದ್ದಿತು. ಅಂತಿಮವಾಗಿ ಮಾರ್ಕಸ್‌ ಸ್ಟೋಯ್ನಿಸ್‌ 29 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಪಂಜಾಬ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 254 ರನ್‌ ಸೇರಿಸಿತು. ಇದು ಈ ಆವೃತ್ತಿಯ ಐಪಿಎಲ್‌ನಲ್ಲಿ ದಾಖಲಾದ ಗರಿಷ್ಠ ರನ್‌. ಇದಕ್ಕೂ ಮೊದಲು ಈ ದಾಖಲೆ ಆರ್‌ಸಿಬಿ ತಂಡದ ಹೆಸರಿನಲ್ಲಿತ್ತು. ಆರ್‌ಸಿಬಿ ಚೆನ್ನೈ ವಿರುದ್ಧ 250 ರನ್‌ ಕಲೆ ಹಾಕಿತ್ತು.

IPL 2026

ಲಕ್ನೋ ತಂಡದ ಪರ ಪ್ರಿನ್ಸ್‌ ಯಾದವ್ 25 ರನ್‌ ನೀಡಿ 2 ವಿಕೆಟ್‌ ಕಬಳಿಸಿದರು. ಎಂ ಸಿದ್ಧಾರ್ಥ್ 35 ರನ್‌ ನೀಡಿ 2 ವಿಕೆಟ್‌ ಪಡೆದರು. ಲಕ್ನೋ ತಂಡದ ಬೌಲರ್‌ಗಳು ರನ್‌ ನೀಡಿ ಕೈ ಸುಟ್ಟುಕೊಂಡರು.

Story first published: Sunday, April 19, 2026, 21:24 [IST]
Other articles published on Apr 19, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+