Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಅಜೇಯ ಓಟ ಮುಂದುವರಿಸಿದ ಕಿಂಗ್ಸ್‌: ಪ್ರಿಯಾಂಶ್‌, ಕೂಪರ್ ಮಿಂಚು

ಯುವ ಆಟಗಾರರಾದ ಪ್ರಿಯಾಂಶ್‌ ಆರ್ಯ (93) ಹಾಗೂ ಕೂಪರ್ ಕಾನೋಲಿ (87) ಇವರ ಭರ್ಜರಿ ಆಟದ ನೆರವಿನಿಂದ 19ನೇ ಆವೃತ್ತಿ ಐಪಿಎಲ್‌ನ 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ 54 ರನ್‌ಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಆರಂಭ ಕಳಪೆಯಾಗಿತ್ತು. ಆರಂಭಿಕ ಪ್ರಭ್‌ಸಿಮ್ರನ್‌ ಸಿಂಗ್ ಸೊನ್ನೆಗೆ ಔಟ್ ಆದರು. ಎರಡನೇ ವಿಕೆಟ್‌ಗೆ ಯುವ ಆಟಗಾರರಾದ ಪ್ರಿಯಾಂಶ್ ಆರ್ಯ ಹಾಗೂ ಕೂಪರ್ ಕಾನೋಲಿ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ನೆರವಾಯಿತು. ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕುವಲ್ಲಿ ಎಲ್‌ಎಸ್‌ಜಿ ಬೌಲರ್‌ಗಳು ವಿಫಲರಾದರು. ಹಂತ ಹಂತವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಾ ಸಾಗಿದ ಯುವ ಜೋಡಿ ರನ್‌ ಮಹಲ್ ಕಟ್ಟಿತು.

IPL 2026

ಪ್ರಿಯಾಂಶ್‌ ಆರ್ಯ ಹಾಗೂ ಕೂಪರ್ ಕಾನೋಲಿ ಜೋಡಿ ಎರಡನೇ ವಿಕೆಟ್‌ಗೆ 80 ಎಸೆತಗಳಲ್ಲಿ 182 ರನ್‌ ಸೇರಿಸಿತು. ಈ ಹಂತದಲ್ಲಿ 87 ರನ್ ಬಾರಿಸಿದ್ದ ಕೂಪರ್ ಕಾನೋಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಪ್ರಿನ್ಸ್‌ ಯಾದವ್‌ಗೆ ವಿಕೆಟ್‌ ಒಪ್ಪಿಸಿದರು. ಇವರ ಕ್ಲಾಸಿಕ್ ಇನಿಂಗ್ಸ್‌ನಲ್ಲಿ 8 ಬೌಂಡರಿ, 7 ಸಿಕ್ಸರ್ ಸೇರಿವೆ. ಆರಂಭಿಕ ಪ್ರಿಯಾಂಶ್ ಆರ್ಯ 37 ಎಸೆತಗಳಲ್ಲಿ 4 ಬೌಂಡರಿ, 9 ಸಿಕ್ಸರ್ ಸಹಾಯದಿಂದ 93 ರನ್‌ ಬಾರಿಸಿ ಮಿಂಚಿದರು. ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋಯ್ನಿಸ್‌ 29, ಶಶಾಂಕ್ ಸಿಂಗ್ 17 ರನ್‌ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ ಪಂಜಾಬ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 254 ರನ್‌ ಕಲೆ ಹಾಕಿತು. ಇದು ಈ ಐಪಿಎಲ್‌ನ ಗರಿಷ್ಠ ಮೊತ್ತವಾಗಿದೆ.

ದೊಡ್ಡ ಗುರಿ ಬೆನ್ನಟ್ಟುವಲ್ಲಿ ಬ್ಯಾಟರ್‌ಗಳು ವಿಫಲ

ಗುರಿಯನ್ನು ಹಿಂಬಾಲಿಸಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಇನಿಂಗ್ಸ್ ಆರಂಭಿಸುವ ಅವಕಾಶವನ್ನು ಆಯುಷ್ ಬದೋನಿ ಪಡೆದರು. ಇವರು ಮಿಚೆಲ್ ಮಾರ್ಷ್ ಅವರೊಂದಿಗೆ ಇನಿಂಗ್ಸ್ ಕಟ್ಟುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಮೊದಲ ವಿಕೆಟ್‌ಗೆ ಈ ಜೋಡಿ 6 ಓವರ್‌ಗಳಲ್ಲಿ 61 ರನ್ ಸೇರಿಸಿತು. ಈ ಹಂತದಲ್ಲಿ 35 ರನ್‌ ಬಾರಿಸಿದ್ದ ಬದೋನಿ ರನ್‌ ವೇಗಕ್ಕೆ ಚುರುಕು ಮುಟ್ಟಿಸಲು ಹೋಗಿ ಔಟ್ ಆದರು. ಮಿಚೆಲ್ ಮಾರ್ಷ್ ಸಹ 3 ಬೌಂಡರಿ, 2 ಸಿಕ್ಸರ್‌ಗಳ ಸಹಾಯದಿಂದ 40 ರನ್ ಬಾರಿಸಿ ಚಾಹಲ್‌ಗೆ ವಿಕೆಟ್‌ ಒಪ್ಪಿಸಿದರು.

ಎಲ್‌ಎಸ್‌ಜಿ ತಂಡದ ನಾಯಕ ರಿಷಭ್ ಪಂತ್ 23 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ಸಹಾಯದಿಂದ 43 ರನ್ ಬಾರಿಸಿ ಮಿಂಚಿದರು. ಏಡನ್ ಮಾರ್ಕ್ರಾಮ್‌ 42, ಮುಕುಲ್ ಚೌಧರಿ ಅಜೇಯ 21 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ಲಕ್ನೋ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 200 ರನ್‌ ಸೇರಿಸಿ ಸೋಲು ಕಂಡಿತು. ಎಲ್‌ಎಸ್‌ಜಿ ಲೀಗ್‌ನಲ್ಲಿ ನಾಲ್ಕನೇ ಸೋಲು ಕಂಡಿತು.

Story first published: Sunday, April 19, 2026, 23:53 [IST]
Other articles published on Apr 19, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+