IPL 2026: ಹೂವಿನ ಹಾದಿಯಲ್ಲಿದ್ದ ಪಂಜಾಬ್ ಕಿಂಗ್ಸ್ ಮುಳ್ಳಿನ ಹಾದಿ ತುಳಿದಿದ್ದು ಹೇಗೆ, ಇಲ್ಲಿದೆ 10 ತಂಡಗಳ ಪ್ಲೇಆಫ್ ಲೆಕ್ಕಾಚಾರ
IPL 2026: 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಲವು ಕಾರಣಗಳಿಗೆ ಕ್ರಿಕೆಟ್ ಪ್ರೇಮಿಗಳನ್ನು ಆಕರ್ಷಿಸಿದೆ. ಐಪಿಎಲ್‌ನಲ್ಲಿ ದೈತ್ಯ ತಂಡಗಳು ಎಂದೇ ಖ್ಯಾತಿ ಗಳಿಸಿರುವ ಹಾಗೂ ತಲಾ 5 ಕಪ್‌ಗಳನ್ನು ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಈ ಬಾರಿ ಕಳೆದ ಯಾವುದೇ ಐಪಿಎಲ್ ಋತುವಿನಲ್ಲೂ ನೀಡದ ಸಾಧಾರಣ ಪ್ರದರ್ಶನವನ್ನು ನೀಡಿವೆ. ಮುಂಬೈ ಇಂಡಿಯನ್ಸ್ ಟೂರ್ನಿಯಿಂದಲೇ ಹೊರಗುಳಿದಿದೆ. ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಮಿಂಚಿನ ಆಟವಾಡಿದ ತಂಡವೆಂದರೆ ಪಂಜಾಬ್ ಕಿಂಗ್ಸ್, ಸತತವಾಗಿ ಗೆಲುವಿನ ಅಶ್ವಮೇಧ ನಡೆಸಿಕೊಂಡು ಬಂದ ಈ ತಂಡವು ಮುಂದೆ ಆಡಿದ ನಾಲ್ಕು ಪಂದ್ಯಗಳಲ್ಲಿ ಸೋತಿದೆ. ಇದೀಗ ಐಪಿಎಲ್‌ನಲ್ಲಿ ಯಾವ - ಯಾವ ತಂಡಗಳು ಯಾವ ಸ್ಥಾನದಲ್ಲಿದೆ ಹಾಗೂ ಯಾರು ಪ್ಲೇ ಆಫ್ ಸಮೀಪವಾಗಿದ್ದಾರೆ ಎನ್ನುವ ವಿವರ ಈ ಲೇಖನದಲ್ಲಿದೆ.
ಪಂಜಾಬ್ ಕಿಂಗ್ಸ್ ತಂಡವು ರೋಚಕ ಘಟ್ಟದಲ್ಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಮೊದಲ ಏಳು ಪಂದ್ಯಗಳಲ್ಲಿ ಅಜೇಯರಾಗಿ ಉಳಿದ ಈ ತಂಡವು ಮುಂದಿನ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇನ್ನು ಮೊದ ಮೊದಲು ಕಳಪೆ ಪ್ರದರ್ಶನ ನೀಡುತ್ತಿದ್ದ ಸಿಎಸ್‌ಕೆ ತಂಡವು ಇದೀಗ ಪುಟಿದೆದ್ದಿದೆ. ಪಂಜಾಬ್ ಕಿಂಗ್ಸ್ ತಂಡದ ವಿಚಾರಕ್ಕೆ ಬಂದರೆ, ಸತತ ಸೋಲು ಅವರ ಪ್ಲೇಆಫ್ ಅರ್ಹತೆಯ ಭರವಸೆಯನ್ನೇ ಅಪಾಯಕ್ಕೆ ಸಿಲುಕಿಸಿದೆ. ಪಿಬಿಕೆಎಸ್ ಇನ್ನೂ ಅದೃಷ್ಟ ಕೈಬಿಟ್ಟಿಲ್ಲ ಕಳೆದ ಬಾರಿ ಇನ್ನೇನು ಐಪಿಎಲ್ ಟ್ರೋಫಿಗೆ ಮುತ್ತಿಟ್ಟೇ ಬಿಟ್ಟೆವು ಎನ್ನುವಾಗಲೇ ಈ ತಂಡ ಪರಾಜಯಗೊಂಡಿತ್ತು. 11 ಪಂದ್ಯಗಳಲ್ಲಿ 13 ಅಂಕಗಳನ್ನು ಗಳಿಸಿರುವ ಪಂಜಾಬ್ ಕಿಂಗ್ಸ್ ತಂಡ ಹಾಗೂ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಅವರ ಮುಂದಿನ ಹಾದಿಯು ಕಠಿಣವಾಗಿದೆ.

ಪಂಜಾಬ್ ಕಿಂಗ್ಸ್ ತಂಡವು ತಮ್ಮ ಉಳಿದ ಮೂರು ಪಂದ್ಯಗಳನ್ನು ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ವಿರುದ್ಧ ಆಡಲಿದೆ. ಈ ಪಂದ್ಯಗಳಲ್ಲಿ ಎರಡು ಪಂದ್ಯಗಳು ಧರ್ಮಶಾಲಾದಲ್ಲಿ ನಡೆಯಲಿವೆ, ಸೋಮವಾರ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯ ಇದೆ. ಹೀಗಾಗಿ, ಅಗ್ರ ನಾಲ್ಕರ ಸ್ಪರ್ಧೆ ಇನ್ನೂ ಮುಕ್ತಾಯವಾಗಿಲ್ಲ.
ಪಿಬಿಕೆಎಸ್ ಸೋಲುತ್ತಿರುವುದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳಿಗೆ ಅಗ್ರ ನಾಲ್ಕು ಸ್ಥಾನಕ್ಕೇರುವ ಅವಕಾಶವನ್ನು ಜೀವಂತವಾಗಿರಿಸಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಅಗ್ರ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯಲು ತಮ್ಮ ಹೋರಾಟವನ್ನು ತೀವ್ರಗೊಳಿಸಿವೆ.
ಐಪಿಎಲ್ 2026 ಪ್ಲೇಆಫ್ ಅರ್ಹತಾ ಸನ್ನಿವೇಶದ ವಿವರ ಇಲ್ಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ): 11 ಪಂದ್ಯಗಳಿಂದ 14 ಅಂಕಗಳೊಂದಿಗೆ ಮತ್ತು +1.103ರ ಅತ್ಯುತ್ತಮ NRR (ನೆಟ್ ರನ್ ರೇಟ್)
ನೊಂದಿಗೆ ಅಗ್ರಸ್ಥಾನದಲ್ಲಿದೆ. ಇನ್ನೊಂದು ಗೆಲುವು ಪ್ಲೇಆಫ್‌ನಲ್ಲಿ ಆರ್‌ಸಿಬಿ ಸ್ಥಾನವನ್ನು ಖಚಿತಪಡಿಸುತ್ತದೆ. ಉಳಿದ ಮೂರೂ ಪಂದ್ಯಗಳನ್ನು ಗೆದ್ದರೆ ಅಗ್ರ ಎರಡು ಸ್ಥಾನಗಳಲ್ಲಿ ಆರ್‌ಸಿಬಿ ಇರಲಿದೆ.
ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್): +0.737 ರ NRR ನೊಂದಿಗೆ 11 ಪಂದ್ಯಗಳಿಂದ 14 ಅಂಕಗಳನ್ನು ಗಳಿಸಿದೆ. ಆರ್‌ಸಿಬಿಯಂತೆ, ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ಅವರಿಗೆ ಕೇವಲ ಒಂದು ಗೆಲುವು ಬೇಕಾಗಿದೆ. ಒಂದೊಮ್ಮೆ ಈ ತಂಡವು ಎರಡು ಪಂದ್ಯಗಳನ್ನು ಗೆದ್ದರೆ, ಅಗ್ರ ಎರಡು ಸ್ಥಾನಗಳಿಗೆ ತಲುಪುವ ಹಾದಿ ಸುಗಮವಾಗಲಿದೆ.
ಗುಜರಾತ್ ಟೈಟಾನ್ಸ್ (GT): 14 ಅಂಕಗಳೊಂದಿಗೆ ಮಧ್ಯಮ ಹಂತದಲ್ಲಿರುವ ಈ ತಂಡವು ಸೆಣಸಾಟ ನಡೆಸುತ್ತಿದೆ. ಶುಭಮನ್ ಗಿಲ್ ನೇತೃತ್ವದ ತಂಡವು ಇನ್ನೂ ನಕಾರಾತ್ಮಕ NRR ಅನ್ನು ಹೊಂದಿದೆ. ಅಂದರೆ ಟೈ-ಬ್ರೇಕರ್ ಪರಿಸ್ಥಿತಿಯಿಂದ ಸುರಕ್ಷಿತವಾಗಿರಲು ಈ ತಂಡಕ್ಕೆ ಇನ್ನೂ ಎರಡು ಗೆಲುವು ಅನಿವಾರ್ಯವಾಗಿದೆ.
ಪಂಜಾಬ್ ಕಿಂಗ್ಸ್ (PBKS): ವರ್ಷ ಪೂರ್ತಿ ಅತ್ಯುತ್ತಮ ವಿದ್ಯಾರ್ಥಿ ಎನಿಸಿಕೊಂಡು ಪರೀಕ್ಷೆ ಬಂದ ಸಮಯದಲ್ಲಿ ಗಾಬರಿಗೆ ಒಳಗಾಗುವ ವಿದ್ಯಾರ್ಥಿಯ ಪರಿಸ್ಥಿತಿ ಪಂಜಾಬ್ ಕಿಂಗ್ಸ್‌ದಾಗಿದೆ. 14 ಅಂಕಗಳು ಮತ್ತು ಮೂರು ಪಂದ್ಯಗಳು ಉಳಿದಿವೆ. ಎರಡು ಗೆಲುವುಗಳು ಈ ತಂಡವನ್ನು 18 ಅಂಕಗಳನ್ನು ಪಡೆಯುವಂತೆ ಮಾಡಲಿದೆ. ಇದು ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಕಾಗುತ್ತದೆ. ಅವರ NRR ಆರೋಗ್ಯಕರವಾಗಿದ್ದರೆ ಒಂದು ಗೆಲುವು ಸಹ ಸಾಕು.
ಚೆನ್ನೈ ಸೂಪರ್ ಕಿಂಗ್ಸ್ (CSK): ಪ್ರಸ್ತುತ 12 ಅಂಕ ಈ ತಂಡಕ್ಕಿದೆ. 16 ಅಂಕಗಳನ್ನು ತಲುಪಲು ಅವರು ತಮ್ಮ ಉಳಿದ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡನ್ನು ಗೆಲ್ಲಬೇಕು. ಪಂಜಾಬ್ ಕಿಂಗ್ಸ್‌ನ ಇತ್ತೀಚಿನ ಸ್ಲಿಪ್ಅಪ್ ರುತುರಾಜ್ ಗಾಯಕ್ವಾಡ್ ನೇತೃತ್ವದ ತಂಡಕ್ಕೆ ಹೊಸ ಅವಕಾಶ ನೀಡಿದೆ.
ರಾಜಸ್ಥಾನ್ ರಾಯಲ್ಸ್ (RR): 12 ಅಂಕಗಳನ್ನು ಗಳಿಸಿರುವ ರಾಜಸ್ಥಾನ್ ರಾಯಲ್ಸ್ ತಂಡದ ಪರಿಸ್ಥಿತಿಯು ಸಿಎಸ್‌ಕೆ ತಂಡಕ್ಕಿಂತಲೂ ಭಿನ್ನವಾಗೇನು ಇಲ್ಲ. ಈ ತಂಡಕ್ಕೆ ಕನಿಷ್ಠ ಎರಡು ಪಂದ್ಯಗಳಲ್ಲಿ ಗೆಲ್ಲಬೇಕಾಗಿದೆ. ಒಂದೇ ಗೆಲುವು ಅಗ್ರ-ನಾಲ್ಕನೇ ಸ್ಥಾನದ ಹೋರಾಟವನ್ನು ಅಂತ್ಯಗೊಳಿಸಲಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್): ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಈ ಬಾರಿಯ ಟೂರ್ನಿಯಲ್ಲಿ ತೀವ್ರ ಸಂಕಷ್ಟದಲ್ಲಿದೆ. ಕೇವಲ 9 ಅಂಕಗಳು ಮತ್ತು ನಾಲ್ಕು ಪಂದ್ಯಗಳು ಉಳಿದಿರುವಾಗ ಈ ತಂಡವು 18 ಅಂಕಗಳನ್ನು ಪಡೆಯುವುದಕ್ಕೆ ಪ್ರತಿ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಒಂದೇ ಒಂದು ಪಂದ್ಯದಲ್ಲಿ ಸೋತರೂ ಐಪಿಎಲ್ 2026ರ ಟೂರ್ನಿಯಿಂದ ಹೊರಗೆ ಉಳಿಯಲಿದ್ದಾರೆ. ಈ ತಂಡದ ಕಳಪೆ NRR -0.169 ಕಾರಣದಿಂದ 16 ಅಂಕಗಳು ಸಾಕಾಗುವುದಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ): 11 ಪಂದ್ಯಗಳಲ್ಲಿ ಕೇವಲ 8 ಅಂಕಗಳನ್ನು ಮಾತ್ರ ಪಡೆದಿರುವ ಈ ತಂಡಕ್ಕೆ ಈಗ ಪ್ಲೇಆಫ್ ಅವಕಾಶ ತುಂಬ ಕಷ್ಟಕರವಾಗಿದೆ. 14 ಅಂಕ ಪಡೆಯಲು ಉಳಿದ ಮೂರು ಪಂದ್ಯಗಳನ್ನೂ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಅದಕ್ಕೂ ಜೊತೆಗೆ ಇತರ ತಂಡಗಳ ಫಲಿತಾಂಶಗಳು ತಮ್ಮ ಪರವಾಗಿರಬೇಕು ಮತ್ತು ನೆಟ್ ರನ್ ರೇಟ್‌ನಲ್ಲೂ ದೊಡ್ಡ ಮಟ್ಟದ ಬದಲಾವಣೆ ಆಗಬೇಕಿದೆ. ಈ ತಂಡದ ಅಭಿಮಾನಿಗಳು ಈ ಹಿಂದೆ ಆರ್‌ಸಿಬಿ ಅಭಿಮಾನಿಗಳಂತೆ ಗಣಿತ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.
ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ): ಎರಡೂ ತಂಡಗಳು ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

