Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಪಂಜಾಬ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ; ಗೆದ್ದರಷ್ಟೇ ಪ್ಲೇ ಆಸೆ ಜೀವಂತ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) 19ನೇ ಆವೃತ್ತಿ ಆರಂಭದಲ್ಲಿ ಸತತ ಗೆಲುವುಗಳನ್ನು ಕಂಡು ಅಬ್ಬರಿಸಿದ್ದ ಪಂಜಾಬ್‌ ಕಿಂಗ್ಸ್‌, ಈಗ ಬರೀ ಸೋಲುಗಳನ್ನು ಕಂಡು ಕಂಗಾಲಾಗಿದೆ. ಸುಲಭವಾಗಿ ಪ್ಲೇ ಆಫ್‌ ಪ್ರವೇಶಿಸುವ ಅವಕಾಶವನ್ನು ಹೊಂದಿದ್ದ ಪಂಜಾಬ್‌ ಈಗ ಬೇರೆ ತಂಡಗಳ ಫಲಿತಾಂಶದ ಮೇಲೆ ಚಿತ್ತ ನೆಟ್ಟಿದೆ. ಶನಿವಾರ ಪ್ರಸಕ್ತ ಲೀಗ್‌ನ 68ನೇ ಪಂದ್ಯದಲ್ಲಿ ಪಂಜಾಬ್‌ ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡವನ್ನು ಎದುರಿಸಲಿದೆ.

ಈಗಾಗಲೇ ಎಲ್‌ಎಸ್‌ಜಿ 19ನೇ ಆವೃತ್ತಿಯ ಐಪಿಎಲ್‌ನಿಂದ ಹೊರ ನಡೆದಿದೆ. ಆದರೆ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಪ್ಲೇ ಆಫ್‌ ಆಸೆ ಇನ್ನೂ ಸಹ ಜೀವಂತವಾಗಿದೆ. ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಪಂಜಾಬ್‌ ಜಯ ಸಾಧಿಸಿದರೆ, 15 ಅಂಕಗಳನ್ನು ಗಳಿಸಿದಂತೆ ಆಗುತ್ತದೆ. ಆಗ ಪ್ಲೇ ಆಫ್‌ ಪ್ರವೇಶಿಸುವ ಲೆಕ್ಕಾಚಾರವನ್ನು ಪಂಜಾಬ್ ಹಾಕಬಹುದಾಗಿದೆ.

IPL 2026

ಪಂಜಾಬ್‌ ತಂಡ ಸತತ 6 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ್ದು ಗೆಲುವಿನ ಟ್ರ್ಯಾಕ್‌ಗೆ ಮರಳಲು ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಎಲ್‌ಎಸ್‌ಜಿ ತಂಡ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಜಯ ಸಾಧಿಸಿ ಲೀಗ್‌ಗೆ ಗುಡ್‌ ಬೈ ಹೇಳುವ ಆಸೆಯನ್ನು ಹೊಂದಿದೆ. ಉಭಯ ತಂಡಗಳು ಈ ಮೊದಲು ಈ ಲೀಗ್‌ನಲ್ಲಿ ಕಾದಾಟ ನಡೆಸಿದ್ದವು. ಆಗ ಪಂಜಾಬ್‌ ಭರ್ಜರಿ ಜಯ ಸಾಧಿಸಿತ್ತು. ಶನಿವಾರವೂ ಪಂಜಾಬ್‌ ಮತ್ತೊಂದು ಅಂತಹದ್ದೇ ಸಾಧನೆ ಮಾಡುವ ಆಸೆಯನ್ನು ಕಾಣುತ್ತಿದೆ.

ಒತ್ತಡದಲ್ಲಿ ಪಂಜಾಬ್‌

ಪಂಜಾಬ್‌ ಕಿಂಗ್ಸ್ ತಂಡದ ಆರಂಭಿಕ ಆಟಗಾರರಾದ ಪ್ರಭ್‌ಸಿಮ್ರನ್‌ ಸಿಂಗ್, ಪ್ರಿಯಾಂಶ್‌ ಆರ್ಯ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಬೇಕಿದೆ. ಅಲ್ಲದೆ ತಂಡ ದೊಡ್ಡ ಮೊತ್ತದ ಕನಸಿಗೆ ಉತ್ತಮ ಅಡಿಪಾಯ ಹಾಕಿಕೊಡಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕೂಪರ್ ಕಾನೋಲಿ, ನಾಯಕ ಶ್ರೇಯಸ್‌ ಅಯ್ಯರ್, ಮಾರ್ಕಸ್‌ ಸ್ಟೋಯ್ನಿಸ್‌ ಸ್ಥಿರ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗುತ್ತದೆ.

IPL 2026

ಪಂಜಾಬ್ ತಂಡದಲ್ಲಿ ಸ್ಟಾರ್ ಬೌಲರ್‌ಗಳ ದಂಡೇ ಇದೆ. ಆದರೆ ಈ ಬೌಲರ್‌ಗಳು ರನ್‌ಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದಾರೆ. ವೇಗದ ಬೌಲರ್‌ಗಳಾದ ಅರ್ಷದೀಪ್‌ ಸಿಂಗ್‌ ಪಂಜಾಬ್‌ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಈ ಲೀಗ್‌ನಲ್ಲಿ ಪಡೆದಿದ್ದರೂ ಸಹ ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಇನ್ನು ಉಳಿದ ಬೌಲರ್‌ಗಳು ವಿಕೆಟ್‌ ಬೇಟೆ ನಡೆಸುವಲ್ಲಿ ವಿಫಲರಾಗುತ್ತಿದ್ದಾರೆ. ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ಗಳನ್ನು ನೀಡಿದ ಬೌಲರ್‌ಗಳ ಪಟ್ಟಿಯಲ್ಲಿ ಪಂಜಾಬ್ ತಂಡದ ಬೌಲರ್‌ಗಳಿಗೂ ಸ್ಥಾನ. ಇವರು ಕೊನೆಯ ಲೀಗ್‌ ಪಂದ್ಯದಲ್ಲಿ ಬಿಗುವಿನ ದಾಳಿ ನಡೆಸಿದರೆ ಜಯದ ಆಸೆ ಫಲಿಸುತ್ತದೆ.

ತವರಿನಲ್ಲಿ ಗೆಲುವಿನ ಕನಸು

ಲಕ್ನೋ ತಂಡದ ಆರಂಭಿಕ ಮಿಚೆಲ್ ಮಾರ್ಷ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರು ಚೆನ್ನೈ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವಲ್ಲಿ ವಿಫಲರಾಗಿದ್ದರು. ಇವರಿಗೆ ಜೋಶ್ ಇಂಗ್ಲಿಸ್‌ ಉತ್ತಮ ಸಾಥ್ ನೀಡುತ್ತಿದ್ದಾರೆ. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಸಮಯೋಚಿತ ಪ್ರದರ್ಶನ ನೀಡದೆ ಇರುವುದು ತಂಡಕ್ಕೆ ದೊಡ್ಡ ಪೆಟ್ಟು ನೀಡಿದೆ. ಇನ್ನು ಬೌಲರ್‌ಗಳು ತಮ್ಮ ಅನುಭವವನ್ನು ಬಳಸಿಕೊಂಡು ಬೌಲಿಂಗ್ ನಡೆಸಿದರೆ ಎದುರಾಳಿ ಬ್ಯಾಟರ್‌ಗಳ ತಂತ್ರವನ್ನು ಮೆಟ್ಟಿನಿಲ್ಲಬಹುದಾಗಿದೆ.

Story first published: Friday, May 22, 2026, 19:06 [IST]
Other articles published on May 22, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+