Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: KGF ಸ್ಟೈಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ಸೇರಿದ ಆಲ್‌ರೌಂಡರ್; ವಿಡಿಯೋ ಸಖತ್ ವೈರಲ್

ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಆಯೋಜಿಸಿದ್ದ ಟಿ20 ವಿಶ್ವಕಪ್‌ ಮುಗಿದಿದೆ. ನಿರೀಕ್ಷೆಯಂತೆ ಟೀಮ್ ಇಂಡಿಯಾ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈಗ ಅಭಿಮಾನಿಗಳ ಚಿತ್ತ ಭಾರತದಲ್ಲಿ ನಡೆಯಲಿರುವ ಶ್ರೀಮಂತ ಕ್ರಿಕೆಟ್‌ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಮೇಲೆ ನೆಟ್ಟಿದೆ. ಈ ಬಾರಿಯ ಐಪಿಎಲ್‌ ಮಾರ್ಚ್ 28 ರಂದು ಆರಂಭವಾಗಲಿದೆ. ಈ ಬಿಗ್ ಟೂರ್ನಿಗೆ ತಂಡಗಳು ಭರದ ಸಿದ್ಧತೆಯನ್ನು ನಡೆಸಿವೆ. ರಾಜಸ್ಥಾನ ರಾಯಲ್ಸ್ ಸಹ ಈ ಟೂರ್ನಿಯಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದೆ.

ರಾಜಸ್ಥಾನ ರಾಯಲ್ಸ್‌ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಅನುಭವಿ ಹಾಗೂ ಹೊಸ ಮುಖಗಳೊಂದಿಗೆ ಕಣಕ್ಕೆ ಇಳಿಯಲಿದೆ. ಹಲವು ವರ್ಷಗಳ ಕಾಲ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದ ಸಂಜು ಸ್ಯಾಮ್ಸನ್‌ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಲಿದ್ದಾರೆ. ರಾಜಸ್ಥಾನ ತಂಡದ ಪರ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್‌ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಈ ಪ್ಲೇಯರ್‌ ತಂಡ ಸೇರಿಕೊಂಡಿದ್ದನ್ನು ಫ್ರಾಂಚೈಸಿ ವಿಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸಿದೆ.

IPL 2026

ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಲು ಸ್ಟಾರ್ ಆಟಗಾರ ರವೀಂದ್ರ ಜಡೇಜಾ ಸಜ್ಜಾಗಿದ್ದಾರೆ. 2026 ರ ಐಪಿಎಲ್‌ಗೆ ಮುಂಚಿತವಾಗಿ ರವೀಂದ್ರ ಜಡೇಜಾ ತಮ್ಮ ಹೊಸ ಫ್ರಾಂಚೈಸ್ ರಾಜಸ್ಥಾನ ರಾಯಲ್ಸ್‌ಗೆ ಸೇರಿದ್ದಾರೆ. ಜಡ್ಡು ತಂಡ ಸೇರಿದನ್ನು ಫ್ರಾಂಚೈಸಿ ಖಚಿತ ಪಡಿಸಿದೆ. ಈ ವೇಳೆ ಫ್ರಾಂಚೈಸಿ ಹಂಚಿಕೊಂಡಿರುವ ಒಂದು ವಿಡಿಯೋ ಸಖತ್ ವೈರಲ್ ಆಗಿದೆ.

ರಾಜಸ್ಥಾನ ಸೇರಿದ ಆಲ್‌ರೌಂಡರ್

ಕೆಜಿಎಫ್‌ನಲ್ಲಿ ರಾಕಿ ಭಾಯ್‌ ಎಂಟ್ರಿ ನೀಡುವ ಹಾಗೆ ರವೀಂದ್ರ ಜಡೇಜಾ ಅವರನ್ನು ರಾಜಸ್ಥಾನ ತಂಡ ಬರಮಾಡಿಕೊಂಡಿದೆ. ಸಖತ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ರವೀಂದ್ರ ಜಡೇಜಾ, ಕಾರ್‌ನಿಂದ ಇಳಿದು ಸ್ಟೇಜ್‌ ಮೇಲೆ ಹತ್ತಿ ಅಭಿಮಾನಿಗಳನ್ನು ನೋಡುತ್ತಾರೆ. ಇವರನ್ನು ಪರಿಚಯಿಸಲು ಬಾಹುಬಲಿ ಚಿತ್ರದಲ ಬಲ್ಲಾಳ ದೇವನ ಪಟ್ಟಾಭಿಷೇಕದ ಸಮಯದಲ್ಲಿ ಹೇಳಲಾದ ಡೈಲಾಗನ್ನು ರಿಮೇಕ್‌ ಮಾಡಲಾಗಿದೆ. ರಾಜಸ್ಥಾನಿಗಳೆ ನಮಸ್ಕಾರ ಎಂದು ಜಡೇಜಾ ಕೈ ಮುಗಿಯುವಲ್ಲಿಗೆ ವಿಡಿಯೋ ಪೂರ್ಣಗೊಳ್ಳುತ್ತದೆ.

2026ರ ಐಪಿಎಲ್‌ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ನಡುವೆ ಟ್ರೇಡ್ ನಡೆದಿತ್ತು. ಈ ವ್ಯಾಪಾರದ ಭಾಗವಾಗಿ ಸಿಎಸ್‌ಕೆ ತಂಡದ ಇಬ್ಬರು ಆಟಗಾರರಾದ ರವೀಂದ್ರ ಜಡೇಜಾ, ಸ್ಯಾಮ್ ಕರನ್‌ ರಾಜಸ್ಥಾನ ರಾಯಲ್ಸ್‌ಗೆ ಕಳುಹಿಸಲಾಯಿತು. ಇದರ ಬದಲಿಗೆ ರಾಜಸ್ಥಾನ ತನ್ನ ತಂಡದ ನಾಯಕ ಸಂಜು ಸ್ಯಾಮ್ಸನ್‌ ಅವರನ್ನು ಚೆನ್ನೈಗೆ ಕಳುಹಿಸಲು ಸಮ್ಮತಿಸಿತು. ಸಂಜು 18 ಕೋಟಿ ರೂಪಾಯಿಗೆ ಚೆನ್ನೈ ತಂಡವನ್ನು ಸೇರಿದರು.

ಐಪಿಎಲ್‌ನಲ್ಲಿ ರವೀಂದ್ರ ಜಡೇಜಾ ಸಾಧನೆ

ಸರ್ ರವೀಂದ್ರ ಜಡೇಜಾ ಅವರು ಈಗಾಗಲೇ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಇವರು ಆರ್‌ಆರ್‌ ತಂಡದ ಪರ ಎರಡು ಆವೃತ್ತಿಗಳಲ್ಲಿ ಮೈದಾನಕ್ಕೆ ಎಂಟ್ರಿ ನೀಡಿದ್ದು, ಈ ವೇಳೆ ಇವರು 27 ಪಂದ್ಯಗಳಲ್ಲಿ 6 ವಿಕೆಟ್‌ ಪಡೆದಿದ್ದಾರೆ. ಇದೇ ವೇಳೆ 430 ರನ್‌ ಸಹ ಸಿಡಿಸಿದ್ದರು. ರಾಜಸ್ಥಾನ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದಾಗ ಇವರು ತಂಡದ ಭಾಗವಾಗಿದ್ದರು. ಈಗ ರಾಜಸ್ಥಾನ ಎರಡನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವತ್ತ ಚಿತ್ತ ನೆಟ್ಟಿದೆ. ಒಟ್ಟಾರೆಯಾಗಿ ರವೀಂದ್ರ ಜಡೇಜಾ 254 ಐಪಿಎಲ್‌ ಪಂದ್ಯಗಳನ್ನು ಆಡಿದ್ದು, ಈ ವೇಳೆ 27ರ ಸರಾಸರಿಯಲ್ಲಿ 3260 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 5 ಅರ್ಧಶತಕಗಳು ಸೇರಿವೆ. ಅಲ್ಲದೆ 170 ವಿಕೆಟ್‌ ಸಹ ಪಡೆದಿದ್ದಾರೆ.

Story first published: Wednesday, March 11, 2026, 10:13 [IST]
Other articles published on Mar 11, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+