Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: RCB ಮೊದಲ ಕ್ವಾಲಿಫೈಯರ್‌ನಲ್ಲಿ ಯಾರನ್ನು ಎದುರಿಸಲಿದೆ? ಈ ಪಂದ್ಯ ನಡೆಯುವುದು ಎಲ್ಲಿ, ಯಾವಾಗ?

ಇಂಡಿಯನ್ ಪ್ರೀಮಿಯರ್ ಲೀಗ್‌ ( ಐಪಿಎಲ್)ನ ಲೀಗ್‌ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಶುಕ್ರವಾರ ಹೈದರಾಬಾದ್‌ನಲ್ಲಿ ನಡೆದ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಸೋಲು ಕಂಡರೂ ಸಹ ಅಗ್ರಸ್ಥಾನ ಕಾಯ್ದುಕೊಂಡಿದೆ. ಆರ್‌ಸಿಬಿ ಆಡಿದ 14 ಪಂದ್ಯಗಳಲ್ಲಿ 9 ಜಯ ದಾಖಲಿಸಿದ್ದು, 18 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದೆ.

19ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೂರು ತಂಡಗಳು ತಲಾ 18 ಅಂಕಗಳನ್ನು ಕಲೆ ಹಾಕಿವೆ. ಆದರೆ ಆರ್‌ಸಿಬಿ ನೆಟ್‌ ರನ್‌ ರೇಟ್‌ ಉಳಿದ ಎರಡು ತಂಡಗಳಿಗಿಂತ ಉತ್ತಮವಾಗಿದೆ. ಆರ್‌ಸಿಬಿ 0.783 ರನ್‌ ರೇಟ್‌ ಹೊಂದಿದರೆ, ಗುಜರಾತ್ ಟೈಟಾನ್ಸ್‌ 0.695 ರನ್‌ ರೇಟ್‌ನೊಂದಿಗೆ ಎರಡನೇ ಸ್ಥಾನ, ಹೈದರಾಬಾದ್‌ 0.524 ರನ್‌ ಹೊಂದಿದ್ದು ಮೂರನೇ ಸ್ಥಾನದಲ್ಲಿದೆ. ಪರಿಣಾಮ ಆರ್‌ಸಿಬಿ ಮೊದಲ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿದೆ.

IPL 2026

ಸೋತರೂ ಅಗ್ರ ಸ್ಥಾನ ಹೇಗೆ?

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ 55 ರನ್‌ಗಳಿಂದ ಸೋತರೂ ಸಹ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳಬೇಕಾದಲ್ಲಿ, ಈ ಪಂದ್ಯದಲ್ಲಿ ಗೆಲುವು ದಾಖಲಿಸಬೇಕಿತ್ತು. ಅಲ್ಲದೆ ಈ ಪಂದ್ಯದಲ್ಲಿ ಆರ್‌ಸಿಬಿ ದೊಡ್ಡ ಅಂತರದಿಂದ ಸೋಲನ್ನು ತಪ್ಪಿಸಿಕೊಳ್ಳಬೇಕಾಗಿತ್ತು.

SRH ವಿರುದ್ಧ 55 ರನ್‌ಗಳಿಂದ ಸೋತರೂ RCB ಮೊದಲ ಕ್ವಾಲಿಫೈಯರ್‌ ಪ್ರವೇಶಿಸಿದ್ದು ಹೇಗೆ?

SRH ವಿರುದ್ಧ 55 ರನ್‌ಗಳಿಂದ ಸೋತರೂ RCB ಮೊದಲ ಕ್ವಾಲಿಫೈಯರ್‌ ಪ್ರವೇಶಿಸಿದ್ದು ಹೇಗೆ?

ಎಸ್‌ಆರ್‌ಎಚ್‌ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 255 ರನ್‌ ಕಲೆ ಹಾಕಿತು. ಆರ್‌ಸಿಬಿ ಈ ಪಂದ್ಯದಲ್ಲಿ 256 ರನ್ ಬಾರಿಸಿ ಗೆಲುವು ದಾಖಲಿಸಬೇಕಿತ್ತು. ಇನ್ನು ಈ ಪಂದ್ಯದಲ್ಲಿ ಆರ್‌ಸಿಬಿ 90 ರನ್‌ಗಳಿಗಿಂತ ಹೆಚ್ಚಿನ ಅಂತರದಲ್ಲಿ ಸೋಲು ಕಂಡಿದ್ದರೆ ಅಗ್ರಸ್ಥಾನ ಕಳೆದುಕೊಳ್ಳುತ್ತಿತ್ತು. ಎಸ್‌ಆರ್‌ಎಚ್‌ ವಿರುದ್ಧ 55 ರನ್‌ ಸೋಲು ಕಂಡ ಆರ್‌ಸಿಬಿ ಮೊದಲ ಸ್ಥಾನ ಭದ್ರ ಪಡಿಸಿಕೊಂಡಿದೆ. ಹೀಗಾಗಿ ರಜತ್ ಪಾಟಿದಾರ್ ಪಡೆ ಮೊದಲ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿದೆ.

ಅಂಕಪಟ್ಟಿಯಲ್ಲಿ ಆರ್‌ಸಿಬಿ ಮೊದಲ ಸ್ಥಾನ ಪಡೆದಿದ್ದು, ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ತಂಡಗಳು ಮೊದಲ ಕ್ವಾಲಿಫೈಯರ್‌ನಲ್ಲಿ ಕಾದಾಟ ನಡೆಸಲಿವೆ.

ಮೊದಲ ಕ್ವಾಲಿಫೈಯರ್ ನಡೆಯುವುದು ಎಲ್ಲಿ? ಯಾವಾಗ?

ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಮೊದಲ ಕ್ವಾಲಿಫೈಯರ್ ಪಂದ್ಯ ಮೇ 26 ರಂದು ಧರ್ಮಶಾಲಾದಲ್ಲಿ ನಡೆಯಲಿದೆ.

IPL 2026: ಪಂಜಾಬ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ; ಗೆದ್ದರಷ್ಟೇ ಪ್ಲೇ ಆಸೆ ಜೀವಂತ

IPL 2026: ಪಂಜಾಬ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ; ಗೆದ್ದರಷ್ಟೇ ಪ್ಲೇ ಆಸೆ ಜೀವಂತ

ಎಲಿಮಿನೇಟರ್‌ ಪಂದ್ಯ ನಡೆಯುವುದು ಎಲ್ಲಿ?

ಎಲಿಮಿನೇಟರ್ ಪಂದ್ಯ ನ್ಯೂ ಚಂಡೀಗಢದಲ್ಲಿ ಮೇ 27 ರಂದು ನಡೆಯಲಿದೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ನಾಲ್ಕನೇ ಸ್ಥಾನದಲ್ಲಿರುವ ತಂಡದ ವಿರುದ್ಧ ಕಾದಾಟ ನಡೆಸಲಿದೆ. ನಾಲ್ಕನೇ ಸ್ಥಾನದ ಮೇಲೆ ರಾಜಸ್ಥಾನ್ ರಾಯಲ್ಸ್ (14 ಅಂಕ), ಪಂಜಾಬ್‌ ಕಿಂಗ್ಸ್ (13 ಅಂಕ), ಕೋಲ್ಕತ್ತಾ ನೈಟ್ ರೈಡರ್ಸ್‌ (13 ಅಂಕ) ಕಣ್ಣು ನೆಟ್ಟಿವೆ.

Story first published: Saturday, May 23, 2026, 7:20 [IST]
Other articles published on May 23, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+