For Quick Alerts
ALLOW NOTIFICATIONS  
For Daily Alerts
 

SRH ವೇಗಿ ಮೊಹಮ್ಮದ್‌ ಶಮಿ ಮೇಲೆ ಕಣ್ಣು ನೆಟ್ಟಿದೆ RCB

ಇಂಡಿಯನ್ ಪ್ರೀಮಿಯರ್‌ ಲೀಗ್‌ 19ನೇ ಆವೃತ್ತಿಗೆ ಸದ್ದಿಲ್ಲದೆ ತಯಾರಿಗಳು ನಡೆಯುತ್ತಿವೆ. ತಂಡಗಳು ತಮ್ಮ ತಂಡದಲ್ಲಿನ ಯಾವ ಆಟಗಾರನನ್ನು ಕೈ ಬಿಡಬೇಕು? ಯಾರಿಗೆ ಗಾಳ ಹಾಕಬೇಕು ಎಂಬ ಲೆಕ್ಕಾಚಾರವನ್ನು ನಡೆಸಿವೆ. ಇದೇ ವೇಳೆ ಚಾಂಪಿಯನ್‌ ಆರ್‌ಸಿಬಿ ತಂಡ ಸಹ ದೊಡ್ಡ ಲೆಕ್ಕಾಚಾರವನ್ನು ಆರಂಭಿಸಿದೆ. ತಂಡದಲ್ಲಿರುವ ಕೆಲವು ಆಟಗಾರರನ್ನು ಬಿಟ್ಟು, ಸ್ಟಾರ್‌ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡು ಇನ್ನಷ್ಟು ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಚಿತ್ತ ನೆಟ್ಟಿದೆ.

ಐಪಿಎಲ್‌ ಮುಗಿದು ತಿಂಗಳುಗಳೇ ಆಗಿವೆ ಈಗ ಟ್ರೇಡ್‌ ವಿಂಡೋ ಓಪನ್ ಆಗಿದೆ. ಈ ಬಾರಿಯ ಟ್ರೇಡ್‌ ವಿಂಡೋ ಜೂನ್‌ 10 ರಿಂದ, ಐಪಿಎಲ್‌ 2026ರ ಮಿನಿ ಹರಾಜು ನಡೆಯುವವರೆಗೆ ತೆರೆದಿರಲಿದೆ. ಇತ್ತೀಚಿನ ದಿನಗಳಲ್ಲಿ ಟ್ರೇಡ್ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಕಳೆದ ಕೆಲವು ಆವೃತ್ತಿಗಳಲ್ಲಿ ಆಟಗಾರರ ಟ್ರೇಡಿಂಗ್ ನಡೆದಿದೆ. ಆರ್‌ಸಿಬಿ ಸಹ ಇದೇ ನಿಟ್ಟಿನಲ್ಲಿ ಬಿಗ್ ಪ್ಲ್ಯಾನ್ ಮಾಡಿಕೊಂಡಿದೆ. ಅಲ್ಲದೆ ಎಸ್‌ಆರ್‌ಎಚ್‌ ತಂಡದ ವೇಗದ ಬೌಲರ್‌ಗೆ ಗಾಳ ಹಾಕಲು ಪ್ಲ್ಯಾನ್ ಮಾಡಿಕೊಂಡಿದೆ.

IPL 2026 RCB Eyes Mohammed Shami SRH May Trade for Rasikh Salam Dar

ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್‌ ತಂಡಗಳು ತಮ್ಮ ತಂಡವನ್ನು ಮತ್ತಷ್ಟು ಬಲಿಷ್ಠ ಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿವೆ. ಈ ಬಾರಿಯ ಐಪಿಎಲ್‌ ಹರಾಜಿನಲ್ಲಿ ಆರ್‌ಸಿಬಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರೆ, ಸನ್‌ರೈಸರ್ಸ್ ಹೈದರಾಬಾದ್ ಆರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ಆರ್‌ಸಿಬಿ ಕಳೆದ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಕ್ಯಾಪ್ಡ್‌ ಪ್ಲೇಯರ್ ರಸೀಕ್‌ ಸಲಮ್‌ ದಾರ್ ಅವರನ್ನು ಭಾರೀ ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಇವರು ಕಳೆದ ಆವೃತ್ತಿಯಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಆಡಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ರಸೀಕ್ ನೀಡಿದ ಪ್ರದರ್ಶನವನ್ನು ನೋಡಿ ಆರ್‌ಸಿಬಿ ಅವರಿಗೆ ಮಣೆ ಹಾಕಿತ್ತು.

ಯಾರನ್ನು ಕೈ ಬಿಡಲಿದೆ ಆರ್‌ಸಿಬಿ

ಆರ್‌ಸಿಬಿ ರಸೀಕ್‌ ಸಲಮ್‌ ದಾರ್ ಕೈ ಬಿಡುವ ಸಾಧ್ಯತೆ ಹೆಚ್ಚಿದೆ. ಇವರ ಬದಲಿಗೆ ಆರ್‌ಸಿಬಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಟ್ರೇಡ್ ಮಾಡುವ ಸಾಧ್ಯತೆ ಇದೆ. ಇವರಿಗೆ ಎಸ್‌ಆರ್‌ಎಚ್‌ ಹರಾಜಿನಲ್ಲಿ 10 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ ಇವರನ್ನು ಟೂರ್ನಿಯ ಮಧ್ಯದಲ್ಲಿ ಎಸ್‌ಆರ್‌ಎಚ್‌ ಬೆಂಚ್ ಕಾಯಿಸಿತ್ತು. ಇವರು ಇವರಿಗೆ ನೀಡಿದ ಬೆಲೆಗೆ ನ್ಯಾಯ ಒದಗಿಸಿಲ್ಲ ಎಂಬ ಭಾವನೆ ಎಸ್‌ಆರ್‌ಎಚ್‌ ತಂಡಕ್ಕೆ ಕಾಡುತ್ತಿದೆ.

ಶಮಿಗೆ ಆರ್‌ಸಿಬಿ ಏಕೆ ಗಾಳ ಹಾಕುತ್ತಿದೆ?

ಆರ್‌ಸಿಬಿ ಒಬ್ಬ ಕ್ವಾಲಿಟಿ ಇಂಪ್ಯಾಕ್ಟ್‌ ಬೌಲರ್‌ ಹುಡುಕಾಟದಲ್ಲಿದೆ. ಈ ವೇಳೆ ಮೊಹಮ್ಮದ್ ಶಮಿ ಆರ್‌ಸಿಬಿಗೆ ಒಳ್ಳೆಯ ಆಯ್ಕೆ. ಇವರನ್ನು ಆರ್‌ಸಿಬಿ ಒಂದು ವೇಳೆ ಟ್ರೇಡ್ ಮಾಡಿದ್ದೇ ಆದಲ್ಲಿ ಆರ್‌ಸಿಬಿ ಬೌಲಿಂಗ್ ವಿಭಾಗ ಮತ್ತಷ್ಟು ಬಲಶಾಲಿ ಆಗಲಿದೆ. ಇನ್ನು ಎಸ್‌ಆರ್‌ಎಚ್‌ ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ರಸೀಕ್‌ ಅವರಿಗೆ ಗಾಳ ಹಾಕಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ.

Story first published: Thursday, July 24, 2025, 9:15 [IST]
Other articles published on Jul 24, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+