IPL 2026 RCB: ಐಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿ ಹೊಸ ಜೆರ್ಸಿ ಅನಾವರಣ: ಇಲ್ಲಿದೆ ಒಪ್ಪಂದ ಮೊತ್ತದ ವಿವರ
IPL 2026 RCB: ಡಬ್ಲ್ಯೂಪಿಎಲ್ 2026 ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಇದಾದ ಬಳಿಕ ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಇದಕ್ಕೂ ಮುನ್ನವೇ ಇದೀಗ ಕರ್ನಾಟಕದ ಹಾಪಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಈ ನೂತನ ಜೆರ್ಸಿ ಧರಿಸಿ ರಾಯಲ್ ಹುಡುಗರ ತಂಡ ಮಿಂಚಿದೆ.
ಆರ್‌ಸಿಬಿ ಆಡಿದ 17 ಆವೃತ್ತಿಗಳಲ್ಲೂ ಒಂದೇ ಒಂದು ಟ್ರೋಫಿ ಎತ್ತಿರಲಿಲ್ಲ. ಆದರೆ, 2025ರ 18ನೇ ಆವೃತ್ತಿಯಲ್ಲಿ ಟ್ರೋಫಿ ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಮೂಲಕ ಕಪ್ ಇಲ್ಲ ಎನ್ನುವ ಕೊರಗಿಗೆ ತೆರೆ ಎಳೆಯಿತು. ಅಷ್ಟರ ಮಟ್ಟಿಗೆ ಉತ್ತಮ ತಂಡ ಕಟ್ಟಿತ್ತು. ಇನ್ನೂ ಈ ಬಾರಿ ಸಹ ಬಹುತೇಕ ಕಳೆದ ಬಾರಿಯ ಆಟಗಾರರನ್ನೇ ಉಳಿಸಿಕೊಂಡಿದ್ದು, 19ನೇ ಸೀಸನ್‌ನಲ್ಲೂ ಗೆದ್ದು ಚಾಂಪಿಯನ್ ಆಗಲೇಬೇಕು ಎನ್ನುವ ಹಠದಲ್ಲಿದೆ.

ಆರ್‌ಸಿಬಿಗೆ ಹೊಸ ಟೈಟಲ್ ಸ್ಪಾನ್ಸರ್: ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಫ್ರಾಂಚೈಸಿ ಹೊಸ ಜೆರ್ಸಿ ಬಿಡುಗಡೆ ಮಾಡಿದ್ದು, ಇದರಲ್ಲಿ ತಂಡದ ಆಟಗಾರರು ಗಮನ ಸೆಳೆದಿದ್ದರೆ. ಐಪಿಎಲ್‌ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂದಿನ ಎರಡು ಸೀಸನ್‌ಗಳಿಗೆ "ನಥಿಂಗ್" (Nothing) ಮೊಬೈಲ್ ಬ್ರ್ಯಾಂಡ್ ಅನ್ನು ತನ್ನ ಹೊಸ ಟೈಟಲ್ ಸ್ಪಾನ್ಸರ್ ಆಗಿ ಘೋಷಿಸಿದೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಆರ್‌ಸಿಬಿ ಮಾಹಿತಿ ಹಂಚಿಕೊಂಡಿದೆ. "Two years. One partnership. @nothingindia, let's do this" ಎಂಬ ಕ್ಯಾಪ್ಷನ್‌ನೊಂದಿಗೆ ಮಾಹಿತಿ ಹಂಚಿಕೊಂಡಿದೆ.
ಆರ್‌ಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಳಿದ್ದೇನು?: ಹೊಸ ಟೈಟಲ್ ಸ್ಪಾನ್ಸರ್ ಘೋಷಣೆ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಮೆನನ್, 'ನಥಿಂಗ್ ಬ್ರ್ಯಾಂಡ್ ಜೊತೆಗೆ ಸಹಭಾಗಿತ್ವ ಹೊಂದಿರುವುದಕ್ಕೆ ಫ್ರಾಂಚೈಸಿ ಅತ್ಯಂತ ಸಂತಸಗೊಂಡಿದೆ," ಎಂದು ಹೇಳಿದರು. ಅಲ್ಲದೆ, "ನಥಿಂಗ್ ಅನ್ನು ಆರ್‌ಸಿಬಿ ಕುಟುಂಬಕ್ಕೆ ಸ್ವಾಗತಿಸುವುದಕ್ಕೆ ನಾವು ಬಹಳ ಸಂತೋಷಪಡುತ್ತೇವೆ," ಅಂತಲೂ ಹೇಳಿದ್ದಾರೆ.
ಇದಕ್ಕೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕತಾರ್ ಏರ್‌ವೇಸ್ ಟೈಟಲ್ ಸ್ಪಾನ್ಸರ್ ಆಗಿತ್ತು. ಈ ಸಹಭಾಗಿತ್ವವು ಮೂರು ಸೀಸನ್‌ಗಳವರೆಗೆ ಮುಂದುವರಿದಿದ್ದು, ಸುಮಾರು ₹75 ಕೋಟಿ ಮೌಲ್ಯದ ಒಪ್ಪಂದವಾಗಿತ್ತು ಎಂದು ಅಂದಾಜಿಸಲಾಗಿದೆ. ಆ ಅವಧಿಯಲ್ಲಿ ಈ ಒಪ್ಪಂದವು ಆರ್‌ಸಿಬಿಯ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿತು ಎಂದು ಹೇಳಲಾಗುತ್ತದೆ. ಆದರೆ ಇದೀಗ ಈ ಸ್ಥಾನಕ್ಕೆ ನಥಿಂಗ್ ಬಂದು ಕೂತಿದೆ.
ಇನ್ನ ಟ್ರೋಫಿ ಗೆದ್ದ ಬಳಿಕ ಆರ್‌ಸಿಬಿ ಬ್ರ್ಯಾಂಡ್ ವ್ಯಾಲ್ಯೂ ಸುಮಾರು 18,000-20,000 ಕೋಟಿ ರೂಪಾಯಿ ಇದೆ. ಇದರ ಆಧಾರದಲ್ಲಿ ಗಮನಿಸಿದರೆ, ನಥಿಂಗ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆ ಸುಮಾರು 150 ಕೋಟಿ ರೂಪಾಯಿಗೂ ಅಧಿಕ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ಐಪಿಎಲ್ 19ನೇ ಆವೃತ್ತಿಯು ಮಾರ್ಚ್ 26, 2026ರಿಂದ ಆರಂಭ ಆಗಲಿದ್ದು, ಮೇ 31ರವರೆಗೆ ನಡೆಯಲಿದೆ. ಇದಕ್ಕೂ ಮುನ್ನವೇ ಐಪಿಎಲ್‌ನಲ್ಲಿ ಪ್ರಮುಖ ಹಾಗೂ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫ್ರಾಂಚೈಸಿ ಹೊಸ ಜೆರ್ಸಿ ಬಿಡುಗಡೆ ಮಾಡಿದೆ. ಈ ನೂತ ಜೆರ್ಸಿಯಲ್ಲಿ ರಾಯಲ್ ಹುಡುಗರು ಮಿಂಚಿದ್ದು, ಫೋಟೋ ಹಾಗೈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಇನ್ನೂ ಬಲಿಷ್ಠ ತಂಡ ಹೊಂದಿರುವ ಆರ್‌ಸಿಬಿ ಈ ಬಾರಿಯೂ ಸಹ ಟ್ರೋಫಿ ಗೆಲ್ಲುವ ಭರವಸೆಯನ್ನು ಹುಟ್ಟುಹಾಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications