ಐಪಿಎಲ್ 2026ರ ತಯಾರಿ ಭರದಿಂದ ಸಾಗಿವೆ. ಈ ವೇಳೆ ಆರ್‌ಸಿಬಿ ಸಹ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದೆ. ಆದರೆ ಮ್ಯಾನೇಜ್ಮೆಂಟ್‌ಗೆ ಈಗ ಒಂದು ಚಿಂತೆ ಆರಂಭವಾಗಿದೆ. ತಂಡದ ಸ್ಟಾರ್ ಬೌಲರ್ ಬಂಧನ ಭೀತಿಯನ್ನು ಎದುರಿಸುತ್ತಿದ್ದಾರೆ. ಅಪ್ರಾಪ್ತ ವಯಸ್ಕ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಯಶ್ ದಯಾಳ್ ಅವರಿಗೆ ಜೈಪುರ ಪೋಕ್ಸೋ ನ್ಯಾಯಾಲಯದಿಂದ ಹಿನ್ನಡೆಯಾಗಿದೆ
ಜೈಪುರ ಮೆಟ್ರೋಪಾಲಿಟನ್ ಪೋಕ್ಸೋ ನ್ಯಾಯಾಲಯ -3 ಆರ್‌ಸಿಬಿ ವೇಗದ ಬೌಲರ್ ಯಶ್ ದಯಾಳ್ ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಇದು ಆರ್‌ಸಿಬಿ ವೇಗಿಗೆ ದೊಡ್ಡ ಹಿನ್ನಡೆ ಆಗಿದೆ. ಇದರಿಂದ ಯಶ್ ದಯಾಳ್ ಅವರಿಗೆ ಈಗ ಬಂಧನ ಭೀತಿ ಎದುರಾಗಿದೆ.

ಪ್ರಾಥಮಿಕವಾಗಿ ಆರೋಪಿಯ ಮೇಲೆ ಸುಳ್ಳು ಆರೋಪವನ್ಉ ಹೊರೆಸಲಾಗುತ್ತಿದೆ ಎಂದು ತೋರುತ್ತಿಲ್ಲ. ಈ ವರೆಗಿನ ತನಿಖೆಯಲ್ಲಿ ಆರೋಪಿಯು ಅಪರಾಧದಲ್ಲಿ ಭಾಗವಹಿಸಿದ್ದು ಕಂಡು ಬರುತ್ತದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿಲ್ಲ. ಈ ಸಮಯದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲಾಗುವುದಿಲ್ಲ ಎಂದು ನ್ಯಾಯಾಧೀಶೆ ಅಲ್ಕಾ ಬನ್ಸಾಲ್ ಆದೇಶದಲ್ಲಿ ತಿಳಿಸಿದ್ದಾರೆ.
ಜೈಪುರದ ಸಂಗನೇರ್ ಸದರ್ ಪೊಲೀಸ್ ಠಾಣೆಯಲ್ಲಿ ಯಶ್ ವಿರುದ್ಧ ಅಪ್ರಾಪ್ತ ವಯಸ್ಕ ಬಾಲಕಿ ದೂರು ನೀಡಿದ್ದಳು. ಈ ವೇಳೆ ನೊಂದ ಯುವತಿ ಫೋನ್ ಚಾಟ್, ಫೋಟೋ, ವಿಡಿಯೋಗಳನ್ನು ತಿಳಿದು ಬಂದಿದೆ. ಇದು ಇಬ್ಬರ ನಡುವಿನ ಸಂಭಾಷಣೆಯನ್ನು ದೃಢಪಡಿಸುತ್ತದೆ. ಯುವತಿ ನೀಡಿರುವ ದಾಖಲೆಯಲ್ಲಿ ಹೋಟೆಲ್ ದಾಖಲೆಗಳನ್ನು ಸಹ ನೀಡಿದ್ದಾರೆ.
ಕಳೆದ ಎರಡೂವರೆ ವರ್ಷಗಳಿಂದ ಜೈಪುರ ಮತ್ತು ಕಾನ್ಪುರದ ವಿವಿಧ ಹೋಟೆಲ್‌ಗಳಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಯಶ್ ದಯಾಳ್ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಆಕೆಯ ಕ್ರಿಕೆಟ್ ವೃತ್ತಿಜೀವನಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಆರ್‌ಸಿಬಿ ಇವರನ್ನು ಐಪಿಎಲ್ 2026 ತಂಡದಲ್ಲಿ ಉಳಿಸಿಕೊಂಡಿತ್ತು. ಇವರನ್ನು ಹರಾಜಿನ ಅಂಗಳಕ್ಕೆ ಆರ್‌ಸಿಬಿ ಬಿಟ್ಟಿರಲಿಲ್ಲ. ಹೀಗಾಗಿ ಆರ್‌ಸಿಬಿ ಮ್ಯಾನೇಜ್ಮೆಂಟ್ ನಡೆಯ ಮೇಲೂ ಪ್ರಶ್ನೆಗಳು ಎದ್ದಿದ್ದವು. ಅಲ್ಲದೆ ಆರ್‌ಸಿಬಿಯ ನಡೆಯನ್ನು ಸಾಮಾಜಿಕ ತಾಣದಲ್ಲಿ ಅಭಿಮಾನಿಗಳು ಟೀಕಿಸಿದ್ದರು. ಯಶ್ ದಯಾಳ್ ಆರ್‌ಸಿಬಿ ಕಳೆದ ಬಾರಿ ಚಾಂಪಿಯನ್ ಆಗುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದರು. ಇವರು ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಿ ಎದುರಾಳಿ ಬ್ಯಾಟರ್‌ಗಳಿಗೆ ಕಾಟ ನೀಡಿದ್ದರು. ಹೀಗಾಗಿ ಆರ್‌ಸಿಬಿ ಇವರನ್ನು ತಂಡದಲ್ಲಿ ಉಳಿಸಿಕೊಂಡಿತ್ತು. ಆದರೆ ಈಗ ಇವರ ಬಂಧನದ ಭೀತಿ ತಂಡಕ್ಕೆ ಹೊಸ ಟೆನ್ಷನ್ ತಂದಿದೆ.