For Quick Alerts
ALLOW NOTIFICATIONS  
For Daily Alerts
 

IPL 2026: RCB ತವರು ಮೈದಾನ ಗೊಂದಲ: ಬಿಸಿಸಿಐ ತಲೆನೋವು

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) 2026 ದಿನಗಣನೆ ಆರಂಭವಾಗಿದೆ. ಈ ಲೀಗ್‌ಗೆ ತೆರೆಯ ಮರೆಯ ಕೆಲಸಗಳು ನಡೆದಿವೆ. ಆದರೆ ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ)ಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮ್ಯಾನೇಜ್ಮೆಂಟ್‌ ಆ ಒಂದು ನಿರ್ಧಾರ ತಲೆ ನೋವು ತಂದಿದೆ.

ಐಪಿಎಲ್‌ ಉದ್ಘಾಟನಾ ಪಂದ್ಯ ಸಾಮಾನ್ಯವಾಗಿ ಚಾಂಪಿಯನ್ ತಂಡದ ತವರಿನಲ್ಲಿ ನಡೆಯುತ್ತದೆ. ಅಂತೆಯೇ ಆರ್‌ಸಿಬಿ 18ನೇ ಆವೃತ್ತಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಹೀಗಾಗಿ ಆರ್‌ಸಿಬಿ ತವರಿನಲ್ಲಿ ಉದ್ಘಾಟನಾ ಪಂದ್ಯವನ್ನು ಆಡುವುದು ವಾಡಿಕೆ. ಆದರೆ ಆರ್‌ಸಿಬಿ ತಂಡ ತನ್ನ ತವರು ಅಂಗಳವನ್ನು ಇನ್ನೂ ಘೋಷಣೆ ಮಾಡದ ಹಿನ್ನೆಲೆ ಬಿಸಿಸಿಐ ಚಿಂತೆಯನ್ನು ಹೆಚ್ಚಿಸಿದೆ.

IPL 2026 RCB s Home Ground Dilemma Becomes a Headache for BCCI Ahead of Season Opener

ಕರ್ನಾಟಕ ರಾಜ್ಯ ಕ್ರಿಕೆಟ್‌ ಮಂಡಳಿ (ಕೆಎಸ್‌ಸಿಎ) ರಾಜ್ಯ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಫೆಬ್ರವರಿಯ ಒಳಗಡೆಗೆ ಜಾರಿಗೆ ತಂದು ಐಪಿಎಲ್‌ ಪಂದ್ಯಗಳನ್ನು ಆಡಿಸಲು ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿತ್ತು. ಆದರೆ ಆರ್‌ಸಿಬಿ ಮ್ಯಾನೇಜ್ಮೆಂಟ್‌ ಇನ್ನು ತನ್ನ ನಿಲುವನ್ನು ಸ್ಪಷ್ಟ ಪಡಿಸಿಲ್ಲ. ಕೆಎಸ್‌ಸಿಎ ಮೈದಾನದಲ್ಲಿ ಐಪಿಎಲ್‌ಗಾಗಿ ಕಸರತ್ತು ನಡೆಸುತ್ತಿದೆ. ಆದರೆ ಆರ್‌ಸಿಬಿ ಮ್ಯಾನೇಜ್ಮೆಂಟ್‌ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

ಆರ್‌ಸಿಬಿ ತಮ್ಮ ಮೊದಲ ಪಂದ್ಯವನ್ನು ರಾಯ್‌ಪುರದಲ್ಲಿ ಆಡಬೇಕಾಗಬಹುದು ಎಂದು ದೈನಿಕ್ ಜಾಗರಣ್‌ ವರದಿ ಮಾಡಿದೆ. ಐಪಿಎಲ್‌ ಉದ್ಘಾಟನಾ ಪಂದ್ಯಗಳು ನಡೆಯುವುದು ಎಲ್ಲಿ ಎಂಬುದೇ ಬಿಸಿಸಿಐಗೆ ಚಿಂತೆ ಆಗಿದೆ. ಬಿಸಿಸಿಐ ಉದ್ಘಾಟನಾ ಪಂದ್ಯವನ್ನು ಮೆಟ್ರೋ ನಗರಗಳಲ್ಲಿ ಮಾಡಲು ಇಚ್ಛಿಸುತ್ತದೆ. ಇನ್ನು ರಾಯ್‌ಪುರದಲ್ಲಿ ಉದ್ಘಾಟನಾ ಪಂದ್ಯವನ್ನು ಆಡಿಸಲು ಬಿಸಿಸಿಐ ಹಿಂದೇಟನ್ನು ಹಾಕಬಹುದು.

IPL 2026 RCB s Home Ground Dilemma Becomes a Headache for BCCI Ahead of Season Opener

ಬಿಸಿಸಿಐ ಸಲಹೆ ಏನು?

ಐಪಿಎಲ್‌ ಆಡಳಿತ ಮಂಡಳಿ ಸಭೆ ನಡೆದಿತ್ತು. ಈ ವೇಳೆ ಎರಡು ಸಲಹೆಗಳನ್ನು ನೀಡಲಾಯಿತು. ಆರ್‌ಸಿಬಿ ತನ್ನ ತವರು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದ ಬದಲಿಗೆ ರಾಯ್‌ಪುರದಲ್ಲಿ ಆಡಿದರೆ, ಉದ್ಘಾಟನಾ ಸಮಾರಂಭವನ್ನು ಅಲ್ಲಿಯೇ ನಡೆಸಬೇಕಾಗುತ್ತದೆ. ಆದರೆ ಬಿಸಿಸಿಐ ಉದ್ಘಾಟನೆ ಮೆಟ್ರೋ ಅಲ್ಲದ ನಗರ ಬೆಂಬಲಿಸದ ಕಾರಣ, ಕಳೆದ ಬಾರಿಯ ರನ್ನರ್ ಅಪ್ ಪಂಜಾಬ್‌ ಕಿಂಗ್ಸ್‌ ತವರು ಮೈದಾನ ಮುಲ್ಲನ್‌ಪುರದಲ್ಲಿ ಉದ್ಘಾಟನಾ ನಡೆಸಬಹುದು ಎಂಬುದು ಮತ್ತೊಂದು ಸಲಹೆಯಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತಿರುವನಂತಪುರದಲ್ಲಿ ತಮ್ಮ ತವರು ಪಂದ್ಯಗಳನ್ನು ಆಯೋಜಿಸಲು ಅವಕಾಶ ನೀಡಲಾಗಿತ್ತು, ಆದರೆ ಆರ್‌ಸಿಬಿ ನಿರಾಕರಿಸಿತು ಎಂದು ತಿಳಿದು ಬಂದಿದೆ.

ಆರ್‌ಸಿಬಿ ಅಂತೆಯೇ ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸಿ ಮತ್ತು ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ ನಡುವಿನ ಸಂಬಂಧ ಸರಿಯಿಲ್ಲ. ಹೀಗಾಗಿ ಆರ್‌ಆರ್‌ ತಂಡ ತನ್ನ ತವರನ್ನು ಬದಲಿಸಬಹುದಾಗಿದೆ. ರಾಜಸ್ಥಾನ ತನ್ನ ಪಂದ್ಯಗಳನ್ನು ಪುಣೆ ಹಾಗೂ ಗುವಾಹಟಿಯಲ್ಲಿ ಆಡುವ ಸಾಧ್ಯತೆ ಇದೆ. ಇನ್ನು ದೇಶದ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಐಪಿಎಲ್‌ 2026ರ ವೇಳಾಪಟ್ಟಿಯನ್ನು ಇನ್ನೂ ಬಂದಿಲ್ಲ.

ಆರ್‌ಸಿಬಿ ತನ್ನ ತವರು ಅಂಗಳವನ್ನು ಅಂತಿಮಗೊಳಿಸುವಂತೆ ಬಿಸಿಸಿಐ ಗಡುವು ನೀಡಿದೆ ಎಂದು ತಿಳಿದು ಬಂದಿದೆ.

Story first published: Friday, January 23, 2026, 10:36 [IST]
Other articles published on Jan 23, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+