IPL 2026 RCB vs SRH: ಟ್ರೋಫಿ ಉಳಿಸಿಕೊಳ್ಳುವ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿದ ಆರ್‌ಸಿಬಿ
ಬೆಂಗಳೂರು: ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಉದ್ಘಾಟನಾ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡವನ್ನು ಮಣಿಸಿ, ಟ್ರೋಫಿ ಉಳಿಸಿಕೊಳ್ಳುವ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿತು.
202 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಆರಂಭ ಕಳಪೆಯಾಗಿತ್ತು. ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್ 2 ಬೌಂಡರಿ ನೆರವಿನಿಂದ 8 ರನ್ ಬಾರಿಸಿದ್ದಾಗ ಜಯದೇವ್ ಉನಾದ್ಕಟ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಹೆನ್ರಿಕ್ ಕ್ಲಾಸೇನ್ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದರು. 9 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಆಧಾರವಾಯಿತು.

ಈ ಜೋಡಿ ಪವರ್ ಪ್ಲೇನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಒಂದು ವಿಕೆಟ್ ಪಡೆದರೂ ಧೃತಿಗೆಡದ ವಿರಾಟ್, ದೇವದತ್ ಮೊದಲ ಆರು ಓವರ್‌ಗಳಲ್ಲಿ 76 ರನ್ ಸೇರಿಸಿತು. ದೇಶೀಯ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ್ದ ದೇವದತ್ ಪಡಿಕ್ಕಲ್, ಇದೇ ಫಾರ್ಮ್‌ನ್ನು ಐಪಿಎಲ್‌ನಲ್ಲೂ ಮುಂದುವರಿಸಿದರು. ಇವರು 26 ಎಸೆತಗಳಲ್ಲಿ 234ರ ಸ್ಟ್ರೈಕ್ ರೇಟ್‌ನಲ್ಲಿ 61 ರನ್ ಸಿಡಿಸಿದರು. ಈ ವೇಳೆ 7 ಬೌಂಡರಿ, 4 ಸಿಕ್ಸರ್‌ಗಳನ್ನು ಬಾರಿಸಿದರು. ಎರಡನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ದೇವದತ್ ಜೋಡಿ 45 ಎಸೆತಗಳಲ್ಲಿ 101 ರನ್ ಸೇರಿಸಿತು.
ನಾಯಕ ರಜತ್ ಪಾಟಿದಾರ್ ಸಹ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ನೈಜ ಆಟವನ್ನು ಆಡಿದರು. ವಿರಾಟ್ ಅವರೊಂದಿಗೆ ರಜತ್ ಜೋಡಿ 22 ಎಸೆತಗಳಲ್ಲಿ 53 ರನ್ ಸೇರಿಸಿತು. ಈ ವೇಳೆ ರಜತ್ ಪಾಟಿದಾರ್ 258 ಸ್ಟ್ರೈಕ್ ರೇಟ್‌ನಲ್ಲಿ 31 ರನ್ ಸೇರಿಸಿದರು.
ವಿರಾಟ್ ಕೊಹ್ಲಿ ಅಬ್ಬರ
ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಅವರು 38 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 69 ರನ್ ಸಿಡಿಸಿ ಅಬ್ಬರಿಸಿದರು. ಆಲ್‌ರೌಂಡರ್ ಟೀಮ್ ಡೇವಿಡ್ ಅಜೇಯ 16 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಮಿಂಚಿದರು. ಬೆಂಗಳೂರು ತಂಡ 15.4 ಓವರ್‌ಗಳಲ್ಲಿ 4 ವಿಕೆಟ್‌ಗೆ 203 ರನ್ ಸೇರಿಸಿ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಆರ್‌ಸಿಬಿ 200ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ವೇಗವಾಗಿ ಬೆನ್ನಟ್ಟಿದ ಹೆಗ್ಗಳಿಕೆ ತನ್ನದಾಗಿಸಿಕೊಂಡಿತು.
ಬ್ಯಾಟಿಂಗ್ ಪವರ್ ಕಟ್
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಎಸ್‌ಆರ್‌ಎಚ್ ತಂಡದ ಆರಂಭ ಕಳಪೆಯಾಗಿತ್ತು. ಟಾಪ್ ಆರ್ಡರ್ ಸ್ಫೋಟಕ ಬ್ಯಾಟರ್‌ಗಳಾದ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ ಅವರನ್ನು ಪವರ್ ಪ್ಲೇನಲ್ಲಿ ಪೆವಿಲಿಯನ್ ಕಳಿಸಿದರು. 29 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ಇಶಾನ್ ಕಿಶನ್ ಹಾಗೂ ಅನುಭವಿ ಹೆನ್ರಿಕ್ ಕ್ಲಾಸೇನ್ (31) ಜೋಡಿ ಅಮೋಘ ಜೊತೆಯಾಟವನ್ನು ನೀಡಿ ತಂಡಕ್ಕೆ ಆಸರೆಯಾಯಿತು. ಈ ಜೋಡಿ 4ನೇ ವಿಕೆಟ್‌ಗೆ 53 ಎಸೆತಗಳಲ್ಲಿ 97 ರನ್ ಸೇರಿಸಿತು.
ನಾಯಕ ಇಶಾನ್ ಕಿಶನ್ 8 ಬೌಂಡರಿ, 5 ಸಿಕ್ಸರ್ ಸಹಾಯದಿಂದ 80 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಅನಿಕೇತ್ ವರ್ಮಾ 18 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ 43 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ಎಸ್‌ಆರ್‌ಎಚ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 201 ರನ್ ಸೇರಿಸಿತು.
ಆರ್‌ಸಿಬಿ ತಂಡದ ಪರ ಜಾಕಬ್ ಡಫಿ ಹಾಗೂ ರೊಮಾರಿಯೋ ಶೆಫರ್ಡ್ ಮೂರು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications