IPL 2026: ಎಲ್‌ಎಸ್‌ಜಿ ವಿರುದ್ಧ ಡೆಲ್ಲಿ ಗೆಲ್ಲಲು ಕಾರಣವಾಗಿದ್ದು ಆ 22 ವರ್ಷದ ಬ್ಯಾಟರ್
ಲಕ್ನೋ: ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಪ್ರಸಕ್ತ ವರ್ಷದ ಐಪಿಎಲ್ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ. ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್‌ಗಳಿಂದ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಮೂಲಕ ಡೆಲ್ಲಿ ಗೆಲುವಿನ ಖಾತೆ ಓಪನ್ ಮಾಡಿದೆ.
ಡೆಲ್ಲಿ ತಂಡ ಈ ಪಂದ್ಯದಲ್ಲಿ ಗೆಲುವು ದಾಖಲಿಸುವಲ್ಲಿ ಹಲವು ಕಾರಣಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೇಲುಗೈ ಸಾಧಿಸಲು ಕಾರಣವಾಯಿತು. ಅದರಲ್ಲಿ ಮೊದಲಿಗೆ ಕಾಣುವುದು ರಿಷಭ್ ಪಂತ್ ಅವರನ್ನು ದುರದೃಷ್ಟವಶಾತ್ ರನ್‌ಔಟ್ ಆದರು. ಇದು ಡೆಲ್ಲಿ ಆರಂಭದಲ್ಲೇ ಮೇಲುಗೈ ಸಾಧಿಸಲು ಕಾರಣವಾಯಿತು.

ಎಲ್‌ಎಸ್‌ಜಿ ತಂಡದ ಆಯುಷ್ ಬದೋನಿ, ನಿಕೋಲಸ್ ಪೂರನ್, ಏಡನ್ ಮಾರ್ಕ್ರಾಮ್ ಅವರಂತಹ ಆಟಗಾರರಿಗೆ ಡೆಲ್ಲಿ ನೆಲಕಚ್ಚಿನಿಂತು ಬ್ಯಾಟ್ ಮಾಡಲು ಅವಕಾಶವನ್ನೇ ನೀಡಲಿಲ್ಲ. ಪರಿಣಾಮ ಸ್ಟಾರ್ ಆಟಗಾರರನ್ನು ಆರಂಭದಲ್ಲಿ ಕಟ್ಟಿ ಹಾಕಿದ ಡೆಲ್ಲಿ ಅಬ್ಬರಿಸಿತು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಲುಂಗಿ ಎನ್‌ಗಿಡಿ ನಿಕೋಲಸ್ ಪೂರನ್ ಸೇರಿದಂತೆ ಪ್ರಮುಖ ಮೂರು ವಿಕೆಟ್ ಕಬಳಿಸಿದರೆ, ಟಿ ನಟರಾಜನ್ ಸಹ ಮೂರು ವಿಕೆಟ್ ಉರುಳಿಸಿದರು. ಕುಲ್‌ದೀಪ್ ಸ್ಪಿನ್ ಜಾದು ನಡೆಸಿ 2 ವಿಕೆಟ್ ಪಡೆದರು. ಎಲ್‌ಎಸ್‌ಜಿ ತಂಡವನ್ನು 141 ರನ್‌ಗಳಿಗೆ ಕಟ್ಟಿ ಹಾಕಿದ್ದು ಡೆಲ್ಲಿ ಗೆಲುವಿನ ದೊಡ್ಡ ಟರ್ನಿಂಗ್ ಪಾಯಿಂಟ್. ಆದರೆ ಡೆಲ್ಲಿ ಕ್ಯಾಂಪ್‌ನಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದೇ ಆ 22 ವರ್ಷದ ಯುವ ಬ್ಯಾಟರ್.

ಡೆಲ್ಲಿ ಗೆಲುವಿಗೆ ಕಾರಣವಾಗಿದ್ದು ಇದೇ ಅಂಶ
ಡೆಲ್ಲಿ ಕ್ಯಾಪಿಟಲ್ಸ್ ಈ ಸಾಧಾರಣ ಮೊತ್ತವನ್ನು ಸುಲಭವಾಗಿ ಚೇಸ್ ಮಾಡಬಹುದು ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ಪವರ್ ಪ್ಲೇನಲ್ಲಿ ಡೆಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಅವಧಿಯಲ್ಲಿ ತಂಡಕ್ಕೆ ನೆರವಾಗಿದ್ದು 22 ವರ್ಷದ ಬಲಗೈ ಬ್ಯಾಟರ್ ಸಮೀರ್ ರಿಜ್ವಿ ಹಾಗೂ ಟ್ರಿಸ್ಟನ್ ಸ್ಟಬ್ಸ್.
4.3 ಓವರ್‌ಗಳಲ್ಲಿ 26 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಡೆಲ್ಲಿ ಸಂಕಷ್ಟದಲ್ಲಿತ್ತು. ಎಲ್‌ಎಸ್‌ಜಿ ಕ್ಯಾಂಪ್‌ನಲ್ಲಿ ಗೆಲುವಿನ ವಾಸನೆ ಬಡಿಯಲು ಆರಂಭಿಸಿತ್ತು. ಆದರೆ ಆಗಲೇ ಈ ಯುವ ಆಟಗಾರ ರಿಜ್ವಿ ತನ್ನ ಬ್ಯಾಟಿಂಗ್ ಕ್ಷಮತೆಯನ್ನು ಜಗತ್ತಿಗೆ ಸಾರಿದರು. ಈ ಮೂಲಕ ತಮ್ಮ ಐಪಿಎಲ್ ವೃತ್ತಿ ಜೀವನದ 2ನೇ ಅರ್ಧಶತಕ ಬಾರಿಸಿ ಮಿಂಚಿದರು. ಇವರು 47 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 70 ರನ್ ಬಾರಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಅಷ್ಟೇ ಅಲ್ಲದೆ 5ನೇ ವಿಕೆಟ್‌ಗೆ ಭರವಸೆಯ ಆಟಗಾರ ಟ್ರಿಸ್ಟನ್ ಸ್ಟಬ್ಸ್ ಅವರ ಜೊತೆಗೂಡಿ ಅಜೇಯ 119 ರನ್‌ಗಳನ್ನು ಸೇರಿಸಿದರು. ಇದು ಗೆಲುವಿಗೆ ಪ್ರಮುಖ ಕಾರಣವಾಯಿತು. ಇದು ಡೆಲ್ಲಿ ಕ್ಯಾಪಿಟಲ್ಸ್ ಪರ 5ನೇ ವಿಕೆಟ್‌ಗೆ ದಾಖಲಾದ ಗರಿಷ್ಠ ರನ್. ಟ್ರಿಸ್ಟನ್ ಸ್ಟಬ್ಸ್ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ 39 ರನ್ ಸಿಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications