IPL 2026: ಸಮೀರ್ ರಿಜ್ವಿ ಅರ್ಧಶತಕ: ಲಕ್ನೋ ಮಣಿಸಿದ ಡೆಲ್ಲಿ ಗೆಲುವಿನ ಆರಂಭ
ಲಕ್ನೋ: ಯುವ ಆಟಗಾರ ಸಮೀರ್ ರಿಜ್ವಿ ಅವರು ಬಾರಿಸಿದ ಭರ್ಜರಿ ಅರ್ಧಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) 19ನೇ ಅವೃತ್ತಿಯ ಐಪಿಎಲ್ ನಲ್ಲಿ 6 ವಿಕೆಟ್‌ಗಳಿಂದ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.
ಸಾಧಾರಣ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರಾಗಿ ಕಣಕ್ಕೆ ಇಳಿದ ಕನ್ನಡಿಗ ಕೆಎಲ್ ರಾಹುಲ್ ಮೊಹಮ್ಮದ್ ಶಮಿ ಅವರ ಮೊದಲ ಎಸೆತದಲ್ಲೇ ದೊಡ್ಡ ಹೊಡೆತಕ್ಕೆ ಮುಂದಾಗಿ ಡೀಪ್ ಪಾಯಿಂಟ್‌ನಲ್ಲಿ ಮೊಹ್ಸಿನ್ ಖಾನ್ ಅವರು ಹಿಡಿದ ಕ್ಯಾಚ್‌ಗೆ ಬಲಿಯಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ನಿತೀಶ್ ರಾಣಾ (15), ಆರಂಭಿಕ ಆಟಗಾರ ಪತುಮ ನಿಸ್ಸಂಖ (1) ಬೇಗನೆ ಔಟ್ ಆದರು. ನಾಯಕ ಅಕ್ಷರ್ ಪಟೇಲ್ ಸಹ ಸೊನ್ನೆ ಸುತ್ತಿದರು.

ಡೆಲ್ಲಿ ಕ್ಯಾಪಿಟಲ್ಸ್ ತಂಡ 4.3 ಓವರ್‌ಗಳಲ್ಲಿ 26 ರನ್ ಸೇರಿಸಿ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ತಂಡಕ್ಕೆ ಆಧಾರವಾಗಿದ್ದು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟ್ ಮಾಡಿದ 22 ವರ್ಷದ ಸಮೀರ್ ರಿಜ್ವಿ ಹಾಗೂ ಭರವಸೆಯ ಬ್ಯಾಟರ್ ಟ್ರಿಸ್ಟನ್ ಸ್ಟಬ್ಸ್. ಈ ಜೋಡಿ ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿ ನಂತರ ಅಬ್ಬರಿಸಿತು.ಈ ಜೋಡಿ ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿ ನಂತರ ಅಬ್ಬರಿಸಿತು. ಈ ಜೋಡಿ ಐದನೇ ವಿಕೆಟ್‌ಗೆ 76 ಎಸೆತಗಳಲ್ಲಿ 119 ರನ್ ಸೇರಿಸಿತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಪರ 5ನೇ ವಿಕೆಟ್‌ಗೆ ದಾಖಲಿಸಿದ ಗರಿಷ್ಠ ಮೊತ್ತದ ಜೊತೆಯಾಟ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.
ಸಮೀರ್ ಅರ್ಧಶತಕದ ಆಟ
ಬಲಗೈ ಯುವ ಆಟಗಾರ ಸಮೀರ್ ರಿಜ್ವಿ ತಮ್ಮ ಐಪಿಎಲ್ ವೃತ್ತಿ ಜೀವನದ 15ನೇ ಪಂದ್ಯದಲ್ಲಿ 2ನೇ ಅರ್ಧಶತಕ ಬಾರಿಸಿದರು. ಇವರು 37 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅರ್ಧಶತಕ ಬಾರಿಸಿದರು. ಸಮೀರ್ ರಿಜ್ವಿ 47 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 70 ರನ್ ಸಿಡಿಸಿ ಜಯದಲ್ಲಿ ಮಿಂಚಿದರು. ಟ್ರಿಸ್ಟನ್ ಸ್ಟಬ್ಸ್ ಅಜೇಯ 39 ರನ್ ಸಿಡಿಸಿದರು. ಅಂತಿಮವಾಗಿ ಡೆಲ್ಲಿ 17.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 145 ರನ್ ಸೇರಿಸಿ ಜಯ ಸಾಧಿಸಿದೆ.
ರನ್ ಕಲೆ ಹಾಕುವಲ್ಲಿ ಪರದಾಟ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಎಲ್‌ಎಸ್‌ಜಿ ತಂಡದ ಆರಂಭ ಕಳಪೆಯಾಗಿತ್ತು. ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆರಂಭಿಕರಾಗಿ ಕಾಣಿಸಿಕೊಂಡ ರಿಷಭ್ ಪಂತ್ 7 ರನ್‌ಗಳಿಗೆ ಆಟ ಮುಗಿಸಿದರು. ಲಕ್ನೋ ತಂಡದ ಪರ ಏಡನ್ ಮಾರ್ಕ್ರಾಮ್, ಆಯುಷ್ ಬದೋನಿ ಮತ್ತು ನಿಕೋಲಸ್ ಪೂರನ್ ಅವರು ಬಂದು ಹೋಗುವ ಸಂಪ್ರದಾಯ ಮುಗಿಸಿದರು. ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ 35 ರನ್ ಸಿಡಿಸಿ ಔಟ್ ಆದರು.
ಎಲ್‌ಎಸ್‌ಜಿ ತಂಡದ ಪರ ಆರನೇ ವಿಕೆಟ್‌ಗೆ ಅಬ್ದುಲ್ ಸಮದ್ ಹಾಗೂ ಮುಕುಲ್ ಚೌಧರಿ (14) ಜೋಡಿ ತಂಡಕ್ಕೆ ಕೊಂಚ ಆಧಾರವಾಯಿತು. ಈ ಜೋಡಿ 22 ಎಸೆತಗಳಲ್ಲಿ 34 ರನ್ ಸೇರಿಸಿತು. ಏಳನೇ ವಿಕೆಟ್‌ಗೆ ಅಬ್ದುಲ್ ಸಮದ್ ಅವರನ್ನು ಸೇರಿಕೊಂಡ ಶಹಬಾಜ್ ಅಹ್ಮದ್ ಸಹ ತಂಡಕ್ಕೆ 33 ರನ್ ಜೊತೆಯಾಟದ ಕಾಣಿಕೆ ನೀಡಿದರು. ಆಲ್‌ರೌಂಡರ್ ಅಬ್ದುಲ್ ಸಮದ್ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 36 ರನ್ ಸಿಡಿಸಿದರು. ಅಂತಿಮವಾಗಿ ಎಲ್‌ಎಸ್‌ಜಿ 18.4 ಓವರ್‌ಗಳಲ್ಲಿ 141 ರನ್ ಸೇರಿಸಿತು. ಡೆಲ್ಲಿ ಪರ ಲುಂಗಿ ಎನ್‌ಗಿಡಿ ಹಾಗೂ ಟಿ.ನಟರಾಜನ್ ತಲಾ ಮೂರು ವಿಕೆಟ್ ಕಬಳಿಸಿದರು. ಇನ್ನು ಸ್ಪಿನ್ ಬೌಲರ್ ಕುಲ್‌ದೀಪ್ ಯಾದವ್ 2 ವಿಕೆಟ್ ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications