ಡೆಲ್ಲಿ, ಸಿಎಸ್‌ಕೆ ಅಲ್ಲ RCB ಸೇರುತ್ತಾರಾ ಸಂಜು ಸ್ಯಾಮ್ಸನ್?
ಇನ್ನೇನು ಕೆಲವೇ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ರಿಲೀಸ್ ಹಾಗೂ ರಿಟೇನ್ ಪಟ್ಟಿ ಬಿಡುಗಡೆ ಆಗುತ್ತದೆ. ಈ ವೇಳೆ ಎಲ್ಲರ ಕಣ್ಣುಗಳು ರಾಜಸ್ಥಾನ ರಾಯಲ್ಸ್ ತಂಡದ ಮೇಲೆ ನೆಟ್ಟಿರಲಿವೆ. ಈ ತಂಡದ ಸ್ಟಾರ್ ಆಟಗಾರ ಹಾಗೂ ನಾಯಕ ಸಂಜು ಸ್ಯಾಮ್ಸನ್ ಅವರು ಈ ತಂಡವನ್ನು ಬಿಟ್ಟು, ಬೇರೆ ತಂಡದತ್ತ ಪ್ರಯಾಣ ಬೆಳೆಸುತ್ತಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಇದಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಪುಷ್ಠಿ ಸಿಗಲಿದೆ. ನವೆಂಬರ್‌ನಲ್ಲಿ ತಂಡಗಳು ಬಿಸಿಸಿಐಗೆ ನೀಡುವ ಪಟ್ಟಿಯಲ್ಲಿ ಸಂಜು ಹೆಸರು ಯಾವ ಪಟ್ಟಿಯಲ್ಲಿ ಇರಲಿದೆ ಎಂಬುದೇ ಕುತೂಹಲ ಮೂಡಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದಲೇ ಹೆಸರುವಾಸಿಯಾಗಿರುವ ಸಂಜು ಸ್ಯಾಮ್ಸನ್, ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಚೆನ್ನೈ ಸಹ ಧೋನಿ ಉತ್ತರಾಧಿಕಾರಿಯ ಹುಡುಕಾಟ ನಡೆಸುತ್ತಿದೆ. ಈ ವೇಳೆ ತಂಡಕ್ಕೆ ಸಂಜು ಬೆಸ್ಟ್ ಚಾಯ್ಸ್ ಆಗಲಿದ್ದಾರೆ ಎಂಬ ಲೆಕ್ಕಾಚಾರ ಸಿಎಸ್‌ಕೆ ತಂಡದ್ದಾಗಿತ್ತು. ಈ ಸುದ್ದಿ ಹರಿದಾಡಿದ್ದ ಕೆಲವೇ ತಿಂಗಳುಗಳಲ್ಲಿ ಸಂಜು ಸ್ಯಾಮ್ಸನ್ ಹೆಸರು ಬೇರೆ ಬೇರೆ ತಂಡಗಳೊಂದಿಗೆ ತಳಕು ಹಾಕಿಕೊಂಡಿತು. ಅಲ್ಲದೆ ತಾವು ಪ್ರತಿನಿಧಿಸಿದ್ದ ಮಾಜಿ ತಂಡ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿ ಹೋಗಬಹುದು ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಆದರೆ ಈಗ ಬರುತ್ತಿರುವ ಸುದ್ದಿ ಈ ಎಲ್ಲ ಸುದ್ದಿಗಳನ್ನು ಮೀರಿಸಿರುವಂತಿದೆ. ಸಂಜು ಸ್ಯಾಮ್ಸನ್ 18ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

ಸಂಜು ಸ್ಯಾಮ್ಸನ್ ಅವರ ಹೆಸರು ಆರ್‌ಸಿಬಿ ತಂಡದ ಜೊತೆ ತಳಕು ಹಾಕಿಕೊಳ್ಳಲು ಕಾರಣ ಆ ಒಂದು ಫೋಟೋ. ಈ ಫೋಟೋ ಸಾಮಾಜಿಕ ತಾಣದಲ್ಲಿ ಸಂಚಲನವನ್ನು ಮೂಡಿಸಿದೆ. ಸಂಜು ಸ್ಯಾಮ್ಸನ್ ಆರ್‌ಸಿಬಿ ಥ್ರೋ ಡೌನ್ ಸ್ಪೆಷಲಿಸ್ಟ್ ಗೆಬ್ರಿಯಲ್ ಅವರೊಂದಿಗೆ ಸಂಜು ಸ್ಯಾಮ್ಸನ್ ಕಾಣಿಸಿಕೊಂಡಿದ್ದ ಚಿತ್ರ ಭಾರೀ ವೈರಲ್ ಆಗಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಸಂಜು ಸ್ಯಾಮ್ಸನ್ ಆರ್‌ಸಿಬಿ ಸೇರುತ್ತಾರೆ ಎಂಬ ಊಹಾಪೋಹಗಳನ್ನು ಆರಂಭಿಸಿದ್ದಾರೆ. ಆದರೆ ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.
ಆಸ್ಟ್ರೇಲಿಯಾ ಪ್ರವಾಸ
ಸಂಜು ಸ್ಯಾಮ್ಸನ್ ಇತ್ತೀಚಿನ ದಿನಗಳಲ್ಲಿ ಟಿ20 ತಂಡದಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿ ತಮ್ಮ ಸ್ಥಾನ ಖಚಿತ ಕೊಡಿಸಿಕೊಂಡಿದ್ದಾರೆ. ಆದರೆ ಇವರು ಏಷ್ಯಾ ಕಪ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಶುಭಮನ್ ಗಿಲ್ ತಂಡಕ್ಕೆ ಎಂಟ್ರಿ ನೀಡಿದ್ದರಿಂದ ಸಂಜು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕಾಯಿತು. ಇನ್ನು ಸಂಜು, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಗೂ ತಂಡದಲ್ಲಿ ಆಯ್ಕೆ ಆಗಿದ್ದಾರೆ. ಈ ವೇಳೆ ಇವರ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications