ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಉದ್ಘಾಟನಾ ಪಂದ್ಯದಲ್ಲಿ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸಲಿದೆ. ಪ್ರಸ್ತುತ ವೇಳಾಪಟ್ಟಿ ಮಾರ್ಚ್ 28 ರಿಂದ ಏಪ್ರಿಲ್ 12 ರವರೆಗೆ ಇದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ತಂಡಗಳು ಫೈಟ್ ನಡೆಸಲಿವೆ.
ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಐಪಿಎಲ್ ವೇಳಾ ಪಟ್ಟಿಯನ್ನು ಈ ಬಾರಿ ಎರಡು ಹಂತದಲ್ಲಿ ಬಿಡುಗಡೆ ಮಾಡಲಿದೆ. ಇದರ ಅನುಸಾರ ಈಗ ಒಂದು ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಭಾರತದ ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳ ದಿನಾಂಕವನ್ನು ನೋಡಿಕೊಂಡು, ವೇಳಾ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಲಿದೆ.

ಆರ್‌ಸಿಬಿ ತಂಡ ಮೊದಲ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸಲಿದೆ. ಮಾರ್ಚ್ 28 ರಂದು ಶನಿವಾರ ನಡೆಯಲಿರುವ ಪಂದ್ಯಕ್ಕಾಗಿ ಚಿನ್ನಸ್ವಾಮಿ ಸಜ್ಜಾಗಲಿದೆ. ಕಳೆದ ವರ್ಷದ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ವೇಳೆ 11 ಜನರು ಸಾವನ್ನಪ್ಪಿದ್ದರು. ಆ ಬಳಿಕ ರಾಜ್ಯ ಸರ್ಕಾರ ನಾ.ಕುನ್ಹಾ ಸಮಿತಿಯನ್ನು ನೇಮಿಸಿತ್ತು. ಅಲ್ಲದೆ ದೊಡ್ಡ ಪಂದ್ಯಾವಳಿಗಳನ್ನು ಆಯೋಜಿಸಲು ನಿರ್ಬಂಧ ವಿಧಿಸಲಾಗಿತ್ತು. ಇದರ ಪರಿಣಾಮವೇ ದೇಶೀಯ ಟೂರ್ನಿ ಹಾಗೂ ಏಕದಿನ ಮಹಿಳಾ ವಿಶ್ವಕಪ್ ಪಂದ್ಯಗಳ ಆಯೋಜನೆಯನ್ನು ತಪ್ಪಿಸಿಕೊಂಡಿತು.
ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಹಲವು ಸುತ್ತಿನ ಮಾತುಕತೆಗಳು ನಡೆದಿದ್ದವು. ಉನ್ನತ ಮಟ್ಟದ ಸಮಿತಿಯ ನಂತರ ಕೆಲವು ಮಾರ್ಪಾಡುಗಳನ್ನು ಮಾಡಿ ಪಂದ್ಯಗಳನ್ನು ನಡೆಸುವಂತೆ ಅನುಮತಿ ನೀಡಲಾಯಿತು. ಪರಿಣಾಮ ಆರ್‌ಸಿಬಿ ಐಪಿಎಲ್‌ನ ಐದು ಪಂದ್ಯಗಳು ತವರಿನಲ್ಲಿ ಆಡಲಿದೆ.
ಬೆಂಗಳೂರು ಮೈದಾನದಲ್ಲಿ ಎರಡನೇ ಪಂದ್ಯ ಏಪ್ರಿಲ್ 5 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸವಾಲನ್ನು ಆರ್‌ಸಿಬಿ ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯವನ್ನು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಮೂರನೇ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಗುವಾಹಟಿಯಲ್ಲಿ ಕಣಕ್ಕೆ ಇಳಿಯಲಿವೆ. ನಾಲ್ಕನೇ ಪಂದ್ಯ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ತಂಡಗಳು ಏಪ್ರಿಲ್ 12 ರಂದು ಮುಂಬೈನಲ್ಲಿ ನಡೆಸಲಿವೆ.
ಮಾರ್ಚ್ 28, ಶನಿವಾರ, ಆರ್‌ಸಿಬಿ vs ಎಸ್‌ಆರ್‌ಎಚ್, ಬೆಂಗಳೂರು, ಸಂಜೆ 7.30ಕ್ಕೆ
ಏಪ್ರಿಲ್ 5,, ಭಾನುವಾರ, ಆರ್‌ಸಿಬಿ vs ಸಿಎಸ್‌ಕೆ, ಬೆಂಗಳೂರು, ಸಂಜೆ 7.30ಕ್ಕೆ
ಏಪ್ರಿಲ್ 10, ಶುಕ್ರವಾರ, ಆರ್‌ಆರ್ vs ಆರ್‌ಸಿಬಿ, ಗುವಾಹಟಿ, ಸಂಜೆ 7.30ಕ್ಕೆ
ಏಪ್ರಿಲ್ 12, ಭಾನುವಾರ, ಎಂಐ vs ಆರ್‌ಸಿಬಿ, ಮುಂಬೈ, ಸಂಜೆ 7.30ಕ್ಕೆ